ಕನಿಷ್ಠ ಮಟ್ಟಕ್ಕೆ ಇಳಿದ ಜಲಾಶಯಗಳ ಮಟ್ಟ: 10 ವರ್ಷಗಳ ಇಂಥಹ ಸ್ಥಿತಿ ಇರಲಿಲ್ಲ.
28 Apr, 2024
ನವದೆಹಲಿ: ದಕ್ಷಿಣ ಭಾರತದಲ್ಲಿ ಜಲಕ್ಷಾಮ ಎನ್ನುವುದು ಕಳೆದ ಹತ್ತು ವರ್ಷಗಳಿಂದ ಎಂದೂ ಕಾಣದ ರೀತಿಯಲ್ಲಿ ಈ ಬಾರಿ ಕಂಡು ಬರುತ್ತದೆ. ಒಂದು ಕಡೆ ಲೋಕಸಭಾ ಚುನಾವಣೆಯ ಕಾವು ತಾರಕ್ಕೆರುತ್ತಿದೆ. ಈ ನಡುವೆ ದಕ್ಷಿಣ ಭಾರತದಲ್ಲಿ, ಗಂಭೀರವಾಗುತ್ತಿದೆ ನೀರಿನ ಬಿಕ್ಕಟ್ಟು.
ದಕ್ಷಿಣ ಭಾರತದಲ್ಲಿ ಬಿರು ಬೇಸಿಗೆ ಹೆಚ್ಚಾಗುತ್ತಿದೆ. ಈ ಪ್ರದೇಶದಲ್ಲಿನ ಪ್ರಮುಖ ಜಲಾಶಯಗಳು 2023ರ ಸಮಯದಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಕಡಿಮೆ ನೀರು ಸಂಗ್ರಹವಿದೆ. ಜಲಾಶಯಗಳ ಶೇಖರಣಾ ಮಟ್ಟವು ಕೂಡ ಈ ಅವಧಿಯಲ್ಲಿ ಕಳೆದ ಹತ್ತು ವರ್ಷಗಳ ಸರಾಸರಿ ಸಂಗ್ರಹಕ್ಕಿಂತ ಕಡಿಮೆಯಾಗಿದೆ.
ಇತ್ತೀಚಿಗೆ ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ) ಒಂದು ವರದಿ ಬಿಡುಗಡೆಮಾಡಿದೆ. ಆ ವರದಿಯಲ್ಲಿ ಕಳವಳಕಾರಿ ಮಾಹಿತಿಯನ್ನು ಭಹಿರಂಗ ಮಾಡಿದೆ. ಪ್ರಸ್ತುತ ದಕ್ಷಿಣ ಭಾರತವು ನೀರಿನ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಅಧಿಕೃತವಾದ ದಾಖಲೆಯನ್ನು ಬಿಡುಗಡೆ ಮಾಡಿದೆ. ದಕ್ಷಿಣ ಭಾರತದಲ್ಲಿನ ಜಲಾಶಯದ ಮಟ್ಟವು ಈ ಬಾರಿ ಭಾರಿ ಇಳಿತ ಕಂಡಿದ್ದು ಕೇವಲ 17% ಸಾಮರ್ಥ್ಯಕ್ಕೆ ಇಳಿದಿದೆ ಎಂದು ವರದಿಯಲ್ಲಿ ಹೇಳಿದೆ.
ಕಳೆದ ವರ್ಷದ ಈ ಅವಧಿಯಲ್ಲಿ ದಕ್ಷಿಣ ಭಾರತದಲ್ಲಿಯ ಜಲಾಶಯದ ಮಟ್ಟ ಸರಾಸರಿ ಸಂಗ್ರಹಣೆಯ ಮಟ್ಟ 29% ಆಗಿತ್ತು. ಆದರೆ ಈ ಬಾರಿಯ ನೀರಿನ ಮಟ್ಟ 17% ಸಾಮರ್ಥ್ಯಕ್ಕೆ ಇಳಿದಿರುವುದು ಆರ್ಶರ್ಯದ ಸಂಗತಿಯಾಗಿದೆ. ಕಳೆದ ಹತ್ತು ವರ್ಷಗಳ ಸರಾಸರಿ ನೀರಿನ ಸಂಗ್ರಹವು ಈ ಜಲಾಶಯಗಳ ನೇರ ಸಂಗ್ರಹ ಸಾಮರ್ಥ್ಯದ 23% ಆಗಿತ್ತು. ಆದರೆ ಜಲಾಶಯಗಳಲ್ಲಿನ ನೀರು 10 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿರುವುದರಿಂದ ದಕ್ಷಿಣ ಭಾರತವು ಭೀಕರ ಪರಿಸ್ಥಿತಿಯು ಎದುರಿಗೆ ಇದೆ ಎನ್ನುವುದು ತೋರಿಸಿಕೊಡುತ್ತಿದೆ.

ದಕ್ಷಿಣ ಭಾರತದ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಒಟ್ಟು 43 ಜಲಾಶಯಗಳಿವೆ. ಕೇಂದ್ರ ಜಲ ಆಯೋಗದ (ಸಿಡಬ್ಲ್ಯೂಸಿ) ಮಾಹಿತಿಯ ಪ್ರಕಾರ, 2023 ರಲ್ಲಿ ದೇಶದ 150 ಜಲಾಶಯಗಳ ನೀರಿನ ಮಟ್ಟ 82% ಆಗಿತ್ತು. ಅಂದರೆ ಕಳೆದ ವರ್ಷ 150 ಪ್ರಮುಖ ನೀರಿನ ಜಲಾಶಯಗಳಲ್ಲಿ 64.775 ಬಿಲಿಯನ್ ಕ್ಯೂಬಿಕ್ ಮೀಟರ್ (ಬಿಸಿಎಂ) ಇದ್ದರೆ, ಈ ವರ್ಷದ ಈ ದಿನಕ್ಕೆ ನೀರಿನ ಸಂಗ್ರಹಣೆಯ ಮಟ್ಟ ಬರೋ ಬ್ಬರಿ 53.775 ಬಿಸಿಎಂಗೆ ಇಳಿದಿದೆ.
ಕಳೆದ 10 ವರ್ಷಗಳಲ್ಲಿಯ ನೀರು ಸಂಗ್ರಹಣೆಯಾಗಿರುವ ಲೆಕ್ಕಾಚ್ಚಾರದ ಪ್ರಕಾರ ಸರಾಸರಿ ನೀರಿನ ಮಟ್ಟ 96% ಹೆಚ್ಚಾಗಿತ್ತು . ಅಂದರೆ ಕಳೆದ 10 ವರ್ಷಗಳ ಲೈವ್ ಸಂಗ್ರಹಣೆಯ ಸರಾಸರಿ ಲೆಕ್ಕಾಚಾರದಂತೆ 55.523 ಬಿಸಿಎಂ ಆಗಿತ್ತು. ದಕ್ಷಿಣ ಭಾರತವನ್ನು ಹೊರತುಪಡಿಸಿ, ಪಶ್ಚಿಮ ಮತ್ತು ಮಧ್ಯ ಭಾರತದ ಜಲಾಶಯಗಳಲ್ಲಿನ ನೀರು ಉತ್ತರ ಮತ್ತು ಪೂರ್ವ ಪ್ರದೇಶಗಳ ಜಲಾಶಯಗಳಿಗೆ ಹೋಲಿಸಿದರೆ ನೇರ ಸಂಗ್ರಹಣಾ ಸಾಮರ್ಥ್ಯದಲ್ಲಿ ದೊಡ್ಡ ಕೊರತೆ ಕಂಡು ಬರುತ್ತಿದೆ.
ಉತ್ತರ ಪ್ರದೇಶದಲ್ಲಿ ಕಳೆದ ವರ್ಷದ ಅವಧಿಗಿಂತ ಸ್ವಲ್ಪ ಕಡಿಮೆ ನೀರಿನ ಮಟ್ಟವಿದೆ ಮತ್ತು ಅನುಪಾತದಂತೆ ಈ ಅವಧಿಗೆ ಕಳೆದ ಹತ್ತು ವರ್ಷಗಳ ಸರಾಸರಿ ಸಂಗ್ರಹಕ್ಕಿಂತ ಕಡಿಮೆಯಾಗಿದೆ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಪೂರ್ವ ಪ್ರದೇಶದಲ್ಲಿ, ಪ್ರಸಕ್ತ ವರ್ಷದ ನೀರಿನ ಸಂಗ್ರಹಣೆ ಕಳೆದ ವರ್ಷದ ಈ ಅವಧಿಗಿಂತ ಉತ್ತಮವಾಗಿದೆ ಮತ್ತು ಅನುಗುಣವಾದ ಅವಧಿಯಲ್ಲಿ ಕಳೆದ ಹತ್ತು ವರ್ಷಗಳ ಸರಾಸರಿ ಸಂಗ್ರಹಣೆಗಿಂತ ಉತ್ತಮವಾಗಿದೆ ಹೇಳಿದೆ.
ಹವಾಮಾನಶಾಸ್ತ್ರಜ್ಞರು ಈಗಾಗಲೇ ನೀರಿನ ಬಿಕ್ಕಟ್ಟು ಇರುವ ಬಗ್ಗ ವ್ಯಾಖ್ಯಾನಿಸಿದವರು ಇದೊಂದು ತಾತ್ಕಾಲಿಕ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ ನಿನೋ ಹವಾಮಾನ ವಿದ್ಯಮಾನವು ಅದರ ಅಂತ್ಯಕ್ಕೆ ಬರಲಿದೆ. ಆದರೆ ಲಾ ನಿನಾ ವಿದ್ಯಮಾನವು ಜೂನ್ - ಸೆಪ್ಟೆಂಬರ್ ಅವಧಿಯಲ್ಲಿ ಸಮೃದ್ಧವಾದ ನೈಋತ್ಯ ಮಾನ್ಸೂನ್ ಮಳೆಯನ್ನು ತರುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ಎಲ್ ನಿನೊ ಸದರ್ನ್ ಆಸಿಲೇಷನ್ (ENSO) ಅಥವಾ ಎಲ್ ನಿನೊ ಪೂರ್ವ ಪೆಸಿಫಿಕ್ ಮಹಾಸಾಗರದಲ್ಲಿ ಮೇಲ್ಮೈ ನೀರಿನ ಅಸಾಮಾನ್ಯ ತಾಪಮಾನವನ್ನು ವಿವರಿಸುವ ಹವಾಮಾನ ಮಾದರಿಯಾಗಿದೆ. ಇದು ಭಾರತದ ನೈಋತ್ಯ ಮಾನ್ಸೂನ್ ದುರ್ಬಲಗೊಳ್ಳುವುದರೊಂದಿಗೆ ಸಮಾನಾರ್ಥಕವಾಗಿದೆ. ಲಾ ನಿನಾವು ಎಲ್ ನಿನೊಗೆ ಆವರ್ತಕ ಪ್ರತಿರೂಪವಾಗಿದೆ. ಉಷ್ಣ ವಲಯದ ಪೆಸಿಫಿಕ್ನಾದ್ಯಂತ ಮರುಕಳಿಸುವ ಹವಾಮಾನ ಮಾದರಿ ತಂಪಾದ ಹಂತಗಳಿಗೆ ಹೆಸರುವಾಸಿಯಾಗಿದೆ, ಇದು ಭಾರತದಲ್ಲಿ ಉತ್ತಮ ಮಳೆಯನ್ನು ತರುತ್ತದೆ ಎನ್ನುವ ಆಶಾ ಭಾವನೆಯನ್ನು ತಜ್ಞರು ಭವಿಷ್ಯತಿಳಿಸಿದ್ದಾರೆ.
Publisher: ಕನ್ನಡ ನಾಡು | Kannada Naadu