ಕನ್ನಡ ನಾಡು | Kannada Naadu

ನಿವೃತ್ತಿ ಜೀವನಕ್ಕೆ ತೆರಳಿದ ಆಕಾಶದ ರಾಣಿ

24 Apr, 2024

 
ಮುಂಬೈ :  ಆಕಾಶದ ರಾಣಿಗೆ ಇಂದಿಗೆ ಬರೋಬ್ಬರಿ 56 ವರ್ಷ..!  ನಿರಂತರ 55 ವರ್ಷಗಳ ಕಾಲ ನಿರಂತರ ಜನಸೇವೆ ನಡೆಸಿದ ಸಾರ್ಥಕ ಬದುಕು ಅವಳದ್ದು. ತನ್ನ ಜೀವನದಲ್ಲಿ ʻಕ್ವೀನ್ ಆಫ್ ದಿ ಸ್ಕೈʼ ಎಂದು ಕರೆಸಿಕೊಂಡ ʻಏರ್‌ ಇಂಡಿಯಾದ ಐಕಾನಿಕ್‌ ಜಂಬೋ ಜೆಟ್‌ ಬೋಯಿಂಗ್‌ 747 ವಿಮಾನʼ ಇಂದು ನಿವೃತ್ತಿ ಜೀವನಕ್ಕೆ ತೆರಳಿತ್ತು.
          ಹಲವು ವರ್ಷಗಳ ಕಾಲ ನಮ್ಮ ದೇಶದಿಂದ ಬೇರೆ ದೇಶಕ್ಕೆ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ʻಏರ್‌ ಇಂಡಿಯಾದ ಐಕಾನಿಕ್‌ ಜಂಬೋ ಜೆಟ್‌ʼ ವಿಮಾನ ಇಂದು ನಿವೃತ್ತಿ ಪಡೆದಿದೆ.  ಆರಂಭದಿಂದ ದೇಶದ ಒಳಗೆ ಮತ್ತು ಹೊರಗೆ ಬಹುತೇಕ ಎಲ್ಲಾ ಸೇವೆಗಳಲ್ಲಿ ಈ ವಿಮಾನವನ್ನು  ಬಳಸಲಾಗುತ್ತಿತ್ತು. ಇದರಲ್ಲಿಇರುವ ಪುಷ್ಕಳ ಸ್ಥಳಾವಕಾಶದ ಕಾರಣ ಏರ್‌ ಇಂಡಿಯಾದ ಐಕಾನಿಕ್‌ ಜಂಬೋ ಜೆಟ್‌ ಬೋಯಿಂಗ್‌ 747 ವಿಮಾನವನ್ನು  ದೂರದ ದೇಶಗಳ ಪ್ರಯಾಣಕ್ಕೆ ಹೆಚ್ಚಾಗಿ ಬಳಸಲಾಗುತ್ತಿತ್ತು. 
           ಆಗಸದಲ್ಲಿ ಬಹು ಕಾಲ ಮಹಾರಾಣಿಯಂತೆ ಮೆರೆದ ವಿಮಾನೊಂದು ತನ್ನ ಹಾರಾಟ ನಿಲ್ಲಿಸಿ, ನಿವೃತ್ತಿ ಹೊಂದುತ್ತಿರುವ ಈ ಕಾಲದಲ್ಲಿ ಅದೇಷ್ಟೊ ನೆನಪುಗಳನ್ನು ತನ್ನ ಸೆರಗಲ್ಲಿ ಕಟ್ಟಿಕೊಂಡು ಹೋಗಿರಬಹುದು..?  ಎನ್ನುವುದನ್ನು ಉಹಿಸಲು ಸಾಧ್ಯವಿಲ್ಲ...!  ಇಂದು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 10.47ಕ್ಕೆ ತನ್ನ ಕೊನೆಯ ಹಾರಾಟವನ್ನು ನಡೆಸಿತು. ವಿಮಾನವು ನಿವೃತ್ತಿ ವಯಸ್ಸನ್ನು ತಲುಪಿದಾಗ ಆಕಾಶದಲ್ಲಿ ವಿಶಿಷ್ಟವಾದ ಸೂಚಕವೊಂದನ್ನು ಪ್ರದರ್ಶಿಸಲಾಗುತ್ತದೆ. ಆ ಹಿನ್ನೆಲೆಯಲ್ಲಿ ಇಂದು ಈ ವಿಮಾನದಲ್ಲಿದ್ದ ಪೈಲಟ್ ವಿಂಗ್ ವೇವ್ ಅನ್ನು ಪ್ರದರ್ಶಿಸುವ ಮೂಲಕ ಅಧಿಕೃತವಾಗಿ ವಿಮಾನ ಹಾರಾಟಕ್ಕೆ ವಿರಾಮ ನೀಡಿದರು. 
          ಆಕಾಶದ ರಾಣಿ ಬೋಯಿಂಗ್ 747 ವಿಮಾನದಲ್ಲಿ ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು, ದೇಶದ ಉಪಾಧ್ಯಕ್ಷರುಗಳು, ಸಚಿವರು, ಉದ್ಯಮಿಗಳು, ಉದೋಗಪತಿಗಳು, ಸರಕಾರದ ಹಿರಿಯ ಕಿರಿಯ ಅಧಿಕಾರಿಗಳು,  ಉನ್ನತ ಸ್ಥಾನದಲ್ಲಿ ಇದ್ದವರು ಸೇರಿದಂತೆ ಅಸಂಖ್ಯ ಗಣ್ಯರು ಈ ವಿಮಾನವನ್ನು ನಿರಂತರವಾಗಿ ಬಳಸುತ್ತಿದ್ದರು.  ಈ ಬಗ್ಗೆ ʻಏರ್‌ ಇಂಡಿಯಾʼ ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ʻʻಇಂದು ಮುಂಬೈನಿಂದ ಹೊರಡುವ 'ಕ್ವೀನ್ ಆಫ್ ದಿ ಸ್ಕೈ B747ʼ ಗೆ ನಮ್ಮ ಕೊನೆಯ  ವಿದಾಯ ಹೇಳುತ್ತಿದ್ದೇವೆʼ ಎಂದು ಏರ್ ಇಂಡಿಯಾ ಪೋಸ್ಟ್‌ನಲ್ಲಿ ಬರೆದು ಕೊಂಡಿದೆ. ಮುಂದುವರೆದು ʻ ಇನ್ನು ಮುಂದೆ ಐಷಾರಾಮಿ ವಿಮಾನಗಳ ಯುಗವು ಕೊನೆಗೊಳ್ಳಲಿದೆʼ ಎಂದು ಪೋಸ್ಟ್‌ ಹಾಕಲಾಗಿದೆ. 
           ಬೋಯಿಂಗ್‌  747 ವಿಮಾನವು 1968 ರಲ್ಲಿ ಸಿದ್ಧವಾಗಿತ್ತು. ಆದರೆ  ಈ ವಿಮಾನವು ಎಲ್ಲರೀತಿಯ ಪರೀಕ್ಷೆಗೆಗಳನ್ನು ಪೂರೈಸಿದ ನಂತರ 9 ಫೆಬ್ರವರಿ 1969 ರಂದು ತನ್ನ ಮೊದಲ ಹಾರಾಟವನ್ನು ನಡೆಸಿತು. ಬೋಯಿಂಗ್ 747 ವಿಮಾನವನ್ನು ಮಾರ್ಚ್ 22, 1971 ರಂದು ಏರ್ ಇಂಡಿಯಾಕ್ಕೆ ವಿತರಿಸಲಾಗಿತ್ತು ಎನ್ನುವುದನ್ನು  DGCAನ ದಾಖಲೆಗಳು ತಿಳಿಸಿಕೊಡುತ್ತೇವೆ. 
          ಈ ವಿಮಾನದಲ್ಲಿ  16 ಪ್ರಥಮ ದರ್ಜೆ ಸೀಟುಗಳು ಹಾಗೂ ಬಿಸಿನೆಸ್ ಕ್ಲಾಸ್‌ನ  40 ಸೀಟುಗಳಿದ್ದವು. ಈ ವಿಮಾನವನ್ನು ಪ್ರತ್ಯೇಕ ಮೂರು ಜನ ಪೈಲಟ್‌ಗಳು ಒಟ್ಟಿಗೆ ಹಾರಿಸುವ ವ್ಯವಸ್ಥೆಯನ್ನ ಹೊಂದಿತ್ತು. ಆ ಮೂವರು ಪೈಲೆಟ್‌ಗಳಿಗ  ಮೊದಲನೆಯವರಿಗೆ ಕ್ಯಾಪ್ಟನ್ ಎಂದು,  ಎರಡನೆಯವರಿಗೆ ಫ್ಲೈಟ್ ಆಫೀಸರ್ ಎಂದು ಹಾಗೂ ಮೂರನೆಯ ಪೈಲಟ್‌ಗೆ ಪೈಲಟ್ಟ್ ಇಂಜಿನಿಯರ್ ಎಂದು ಕರೆಯಲಾಗುತ್ತಿತ್ತು. 
           ಇದೇ ರೀತಿಯಲ್ಲಿ ಏರ್‌ ಇಂಡಿಯಾದ ಇನ್ನೇರಡು ವಿಮಾನಗಳು ಸದ್ಯದಲ್ಲಿಯೇ ನಿವೃತ್ತಿ ಹೊಂದಲಿವೆ. ಸದ್ಯ  ನೀವೃತ್ತಿ ಹೊಂದುವ ಆ  ಎರಡು ವಿಮಾನಗಳು ಹಾರುವ ಸ್ಥಿತಿಯಲ್ಲಿಲ್ಲ. ಜೊತೆಗೆ   2022 ರಲ್ಲಿಯೇ  ಈ ವಿಮಾನಗಳ ನೋಂದಣಿಯೂ ಸಹ ರದ್ದಾಗಿದೆ. ಬೋಯಿಂಗ್ 747 ವಿಮಾನವನ್ನು ಅಂತಿಮವಾಗಿ  ಮುಂಬೈ ವಿಮಾನ ನಿಲ್ದಾಣ ದಿಂದ ಟೇಕಾಫ್ ಮಾಡುವ ಮೂಲಕ ಅದರ ಸೇವೆಯನ್ನು ನೆನಸಿಕೊಳ್ಳಲಾಯಿತು. ಈ ವಿಮಾನದೊಂದಿಗೆ ಸದ್ಯದಲ್ಲೆ ನಿವೃತ್ತಿಯಾಗುತ್ತಿರುವ ಮೂರು ವಿಮಾನಗಳ ಪೈಕಿ   ಒಂದು ವಿಮಾನವನ್ನು ಏರ್‌ ಇಂಡಿಯಾ ವಿದೇಶ ಕಂಪನಿಗೆ ಮಾರಟ ಮಾಡಿದೆ. ಖರಿದಿಸಿದ ಆ  ಕಂಪನಿಯು ಈ ವಿಮಾನವನ್ನು ಕಾರ್ಗೊ ಸರ್ವಿಸ್‌ಗಾಗಿ ಬಳಸುವ ಸಂಭವವಿದೆ.
https://twitter.com/airindia/status/1782349984173826347?ref_src=t
          ಇನ್ನೂಳಿದ ಎರಡು ಏರ್‌ ಇಂಡಿಯಾ ಬೋಯಿಂಗ್ 747 ವಿಮಾನಗಳನ್ನು ಮುಂಬೈನಲ್ಲಿ ಬಿಡಿಭಾಗಗಳ (disassembled) ಬಳಕೆಮಾಡಿಕೊಳ್ಳಲಾಗುವುದು. ವಿಮಾನಗಳಲ್ಲಿ ಸುಮಾರು 800 ರಿಂದ ಸಾವಿರ ಮರುಬಳಕೆ ಮಾಡಬಹುದಾದಾ ಭಾಗಗಳು ಇರುತ್ತವೆ ಎನ್ನುವುದನ್ನು ಏರ್‌ ಇಂಡಿಯಾ ಅಧಿಕೃತವಾಗಿ ತಿಳಿಸಿದೆ..
 
 
 
 

Publisher: ಕನ್ನಡ ನಾಡು | Kannada Naadu

Login to Give your comment
Powered by