ಕನ್ನಡ ನಾಡು | Kannada Naadu

ಪ್ರಮುಖ ಮೂರು ಕಂಪನಿಗಳ ಮಹತ್ವದ ನಿರ್ಧಾರ.. 64,000 ಮಂದಿ ಟೆಕ್ಕಿಗಳಾಗಿದ್ದಾರೆ ಈಗ ನಿರುದ್ಯೋಗಿಗಳು.. 

22 Apr, 2024

 
ಬೆಂಗಳೂರು :  ಏಕಾಏಕಿಯಾಗಿ ಪದವಿಧರರನ್ನು ಮತ್ತು ಎಂಜಿನಿಯರಿಂಗ್ ಉದ್ಯೋಗಿಗಳನ್ನು ಮನೆಗೆ ಕಳಿಸಲಾಗಿದೆ. ಸುಮಾರು 64,000 ಉದ್ಯೋಗಿಗಳು ಒಮ್ಮೆಲೆ ನಿರುದ್ಯೋಗಿಗಳಾಗಿದ್ದಾರೆ. ಇಂಥಹ ಕಠಿಣ ನಿರ್ಧಾರವನ್ನು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಇನ್ಫೋಸಿಸ್ ಮತ್ತು ವಿಪ್ರೋ  ತೆಗೆದುಕೊಂಡಿದೆ. 
      ಜಾಗತಿಕವಾಗಿಕವಾಗಿ ಹೆಚ್ಚು ಪದವಿಧರರು ಮತ್ತು ಎಂಜಿನಿಯರಿಂಗ್ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಇನ್ಫೋಸಿಸ್ ಮತ್ತು ವಿಪ್ರೋ ಈಗ ಉದ್ಯೋಗಿಗಳನ್ನು ಕಡಿತ ಮಾಡಲು ಮುಂದಾಗಿದೆ. ಒಂದು ವರ್ಷದಲ್ಲಿ ಈ ಮೂರು ಕಂಪನಿಗಳಿಂದ ಬರೋಬ್ಬರಿ 64,000 ಉದ್ಯೋಗಿಗಳು ಹೊರಹೋಗಿದ್ದಾರೆ.
       ಭಾರತದ ಅತಿದೊಡ್ಡ ಐಟಿ ಸೇವಾ ಕಂಪನಿಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಇನ್ಫೋಸಿಸ್ ಮತ್ತು ವಿಪ್ರೋ ಕಂಪನಿಗಳಲ್ಲಿ ಈ ನಿರ್ಧಾರಗಳು ಕೈಗೊಳ್ಳಲಾಗಿದೆ. ಪ್ರಸಕ್ತ ಆರ್ಥಿಕ ವರ್ಷ 2024 ರಲ್ಲಿ 64,000 ಉದ್ಯೋಗಿಗಳು ಕೆಲಸದಿಂದ ನಿರ್ಗಮಿಸುತ್ತಿದ್ದಾರೆ.  ಇದುವರೆಗಿನ ತನ್ನ ಗಳಿಕೆಗಳನ್ನು ಘೋಷಿಸಿದ ವಿಪ್ರೋ, ಮಾರ್ಚ್ 2024 ರ ಹೊತ್ತಿಗೆ 2,34,054 ಕ್ಕೆ ಕುಸಿತವನ್ನು ವರದಿ ಮಾಡಿದೆ. ಇದು ವರ್ಷದ ಹಿಂದಿನ ಅವಧಿಯಲ್ಲಿ 2,58,570 ಇತ್ತು. ಮಾರ್ಚ್ 2024 ರಂದು ಕೊನೆಗೊಂಡ ಹಣಕಾಸು ವರ್ಷದಲ್ಲಿ ಹೆಡ್‌ಕೌಂಟ್ 24,516 ರಷ್ಟು ಕಡಿಮೆಯಾಗಿದೆ ಎಂದು ವಿಪ್ರೋ ಮಾಹಿತಿ ಭಹಿರಂಗ ಪಡಿಸಿದೆ.
 
ಮುಂಬರುವ ದಿನಗಳಲ್ಲಿ ಕಂಪನಿಯು ಹೆಚ್ಚು ಐಪಿ - ಆಧಾರಿತ ಪ್ಲಾಟ್‌ಫಾರ್ಮ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಗೆ ಪ್ರಾಮುಖತ್ಯೆ ಕೊಡಲು ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಉದ್ಯೋಗಿಗಳ ಹೆಡ್‌ಕೌಂಟ್ ಮತ್ತಷ್ಟು ಕಡಿಮೆಯಾಗಬಹುದು ಎಂದು ಕಂಪನಿ ತಿಳಿಸಿದೆ. 
 
25,994 ಉದ್ಯೋಗಿಗಳಿಗೆ ಇನ್ಫೋಸಿಸ್ ಕೊಕ್ ನೀಡಿದೆ. ಅದೇ ರೀತಿಯಲ್ಲಿ ಭಾರತದ ಎರಡನೇ ಅತಿದೊಡ್ಡ ಐಟಿ ಕಂಪನಿ ಇನ್ಫೋಸಿಸ್‌ ನವರು ಸಹ  ಮಾರ್ಚ್ 2024 ರ ಹೊತ್ತಿಗೆ ಒಟ್ಟು 317,240 ಉದ್ಯೋಗಿಗಳ ಸಂಖ್ಯೆಯನ್ನು ವರದಿ ಮಾಡಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 343,234 ಉದ್ಯೋಗಿಗಳಿದ್ದರು. ಈ ವರ್ಷದ ವರದಿ ಪ್ರಕಾರ 25,994 ಮಂದಿ ಉದ್ಯೋಗಿಗಳು ಕಡಿಮೆಯಾಗಿದ್ದಾರೆ. ಅಂದರೆ ಕಂಪನಿಯು ಶೇಕಡಾ 12.6 ರಷ್ಟು ಅಟ್ರಿಷನ್ ದಾಖಲಿಸಿದೆ. 
 
ಈ ಕುರಿತು ಮಹತ್ವದ ಮಾಹಿತಿ ನೀಡಿದ ಇನ್ಫೋಸಿಸ್‌ನ ಸಿಎಫ್‌ಒ ʻಜಯೇಶ್ ಸಂಘರಾಜ್ಕʼ ಮಾತನಾಡಿ,  "ಕಳೆದ ಕೆಲವು ವರ್ಷಗಳಲ್ಲಿ ನೇಮಕಾತಿಯ ಮಾದರಿಯನ್ನು ಬದಲಾಯಿಸಲಾಗಿದೆ. ನಾವು ಈಗ ಹೆಚ್ಚು ಕ್ಯಾಂಪಸ್ ನೇಮಕಾತಿಯ ಮಾದರಿಲ್ಲೇ ಆಸಕ್ತಿ ತೋರಲಾಗುತ್ತಿದೆ. ಪ್ರಾರಂಭದಲ್ಲಿ ತರಬೇತಿ ಪಡೆದವರು ಸೇರಿದಂತೆ ಶೇಕಡಾ 77 ರಷ್ಟು ಮಂದಿ ಬಳಕೆಯಲ್ಲಿದ್ದರು. ಆಗಲೇಲ್ಲಾ ಬೆಳವಣಿಗೆಯ ವಾತಾವರಣವು ವಿಭಿನ್ನವಾಗಿತ್ತು. ಈಗ ಬಳಕೆಯು ಶೇಕಡಾ 82-83 ಕ್ಕೆ ಏರಿದೆ. ನಿವ್ವಳ ಹೆಡ್‌ಕೌಂಟ್‌ನಲ್ಲಿ ಇಳಿಕೆಯಾಗಿದೆ ಎಂದು ತಿಳಿಸಿದ್ದಾರೆ.
     
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನಲ್ಲೂ ಉದ್ಯೋಗ  ಕಡಿತಮಾಡಲಾಗಿದೆ. ಪ್ರಸ್ತುತ ಇನ್ಫೋಸಿಸ್ ಕಂಪನಿಯ ದೊಡ್ಡ ಪ್ರತಿಸ್ಪರ್ಧಿ ಟಿಸಿಎಸ್ ಕೂಡ 601,546 ಉದ್ಯೋಗಿಗಳನ್ನು ಈ ಹಣಕಾಸು ವರ್ಷದಲ್ಲಿ ಹೊಂದಿದೆ.   ಆದರೆ ಪ್ರಸಕ್ತ ಆರ್ಥಿಕ  ವರ್ಷದಲ್ಲಿ13,249 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಮನೆಗೆ ಕಳಿಸಲಾಗಿದೆ.. ಮಾರ್ಚ್ ತ್ರೈಮಾಸಿಕದಲ್ಲಿ ವಿಪ್ರೋ 2834.6 ಕೋಟಿ ರೂ.ಗೆ ತನ್ನ ಏಕೀಕೃತ ನಿವ್ವಳ ಲಾಭದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 7.8 ರಷ್ಟು ಕುಸಿತವನ್ನುಕಂಡಿದೆ ಎಂದು  ವರದಿ ಮಾಡಿದೆ.

Publisher: ಕನ್ನಡ ನಾಡು | Kannada Naadu

Login to Give your comment
Powered by