ಕನ್ನಡ ನಾಡು | Kannada Naadu

ದೇಶದಲ್ಲಿ ಆರಂಭವಾಗಲಿದೆ ಎಲೆಕ್ಟ್ರಿಕ್ ಏರ್ ಟ್ಯಾಕ್ಸಿಗಳ ಸೇವೆ.. !

20 Apr, 2024

ಬೆಂಗಳೂರು : ಇದೊಂದು ಸಂತಸದ ಸುದ್ದಿ...!  ಅಭಿವದಧಿಯಲ್ಲಿ ನಮ್ಮ ದೇಶ ತನ್ನ ಎಲ್ಲ ಎಲ್ಲೇ ಮೀರಿ ಮುನ್ನುಗ್ಗುತ್ತಿದೆ ಎನ್ನುವುದಕ್ಕೆ ಇಲ್ಲಿದೆ ಮತ್ತೊಂದು ಸಾಕ್ಷಿ. ಇನ್ನೇರಡು ವರ್ಷಗಳಲ್ಲಿ ಜಾಗತೀಕ ಮಟ್ಟದಲ್ಲಿ ಭಾರತವನ್ನು ನೋಡುವ ದೃಷ್ಟಿಕೋನವೇ ಬದಲಾಗಲಿದೆ. ಅದಕ್ಕೆ ಕಾರಣ ಇನ್ನೂ ಮುಂದೆ ನಮ್ಮ ದೇಶದಲ್ಲಿ ಎಲೆಕ್ಟ್ರಿಕ್ ಏರ್ ಟ್ಯಾಕ್ಸಿಗಳ ಸೇವೆ ಸಾರ್ವಜನಿಕರಿಗೆ ದಕ್ಕಲ್ಲಿದೆ.  ಈ ನಿಟ್ಟಿನಲ್ಲಿ ಇಂಡಿಗೋದ ಪ್ರವರ್ತಕ ಸಮೂಹವಾದ ಇಂಟರ್‌ಗ್ಲೋಬ್ ಎಂಟರ್‌ಪ್ರೈಸಸ್ ಮತ್ತು ಯುಎಸ್ ಮೂಲದ ಆರ್ಚರ್ ಏವಿಯೇಷನ್  ಸಂಸ್ಥೆಗಳು ಭರದಿಂದ ತಯಾರಿ ನಡೆಸಿಕೊಳ್ಳುತ್ತಿವೆ. 

          ಇಂಡಿಗೋದ ಪ್ರವರ್ತಕ ಸಮೂಹವಾದ ಇಂಟರ್‌ಗ್ಲೋಬ್ ಎಂಟರ್‌ಪ್ರೈಸಸ್ ಮತ್ತು ಯುಎಸ್ ಮೂಲದ ಆರ್ಚರ್ ಏವಿಯೇಷನ್ ​​ತಮ್ಮ ಆಲ್-ಎಲೆಕ್ಟ್ರಿಕ್ ಏರ್ ಟ್ಯಾಕ್ಸಿ ಸೇವೆಯನ್ನು 2026 ರಲ್ಲಿ ಭಾರತದಲ್ಲಿ ಪ್ರಾರಂಭಿಸಲಿದೆ ಎಂದು ಅಧಿಕೃತವಾಗಿ ಹೇಳಿಕೊಂಡಿದೆ. ಈ ಸೇವೆ ಆರಂಭವಾದರೆ ಸೆಂಟ್ರಲ್ ದೆಹಲಿಯಿಂದ (ಕನ್ನಾಟ್ ಪ್ಲೇಸ್) ಹರಿಯಾಣದ ಗುರುಗ್ರಾಮ್‌ಗೆ ಕೇವಲ 7 ನಿಮಿಷಗಳಲ್ಲಿ ಪ್ರಯಾಣಿಸಬಹುದಾಗಿದೆ.  ಈ 7 ನಿಮಿಷಗಳ ಹಾರಾಟಕ್ಕೆ ತಗಲುವ ವೆಚ್ಚ  ಪ್ರತಿ ಪ್ರಯಾಣಿಕರಿಗೆ ಕೆವಲ  2,000 ರಿಂದ 3,000 ರೂ ಆಗಬಹುದು ಎನ್ನುವ ಮಾಹಿತಿಯೂ ಲಭ್ಯವಾಗಿದೆ.
         
          ಮುಂಬೈ ಮತ್ತು ಬೆಂಗಳೂರಿನಲ್ಲಿ ಇದೇ ರೀತಿಯ ಸೇವೆಗಳನ್ನು ಪ್ರಾರಂಭಿಸಲಾಗುತ್ತದೆ. ಅಂತಹ ಪರಿಕಲ್ಪನೆಯ ಕುರಿತು ವಿವರಿಸಿದ ಬೆಂಗಳೂರು ಮೂಲದ ವಾಯುಯಾನ ತಜ್ಞರು ಇದು ಚಾರ್ಟರ್ ಫ್ಲೈಟ್‌ಗಳು, ವೈದ್ಯಕೀಯ ವಿಮಾನಯಾನ, ಖಾಸಗಿ ವಿಮಾನಗಳು ಇತ್ಯಾದಿಗಳನ್ನು ಒಳಗೊಂಡಿರುವ ನಾನ್-ಶೆಡ್ಯೂಲ್ಡ್ ವಿಭಾಗದಲ್ಲಿನ ಪರಿಕಲ್ಪನೆಯಾಗಿರುವುದು. ಕಡಿಮೆ ದೂರದ ವಿದ್ಯುತ್ ವಿಮಾನವು ದೀರ್ಘಾವಧಿಯಲ್ಲಿ ಅರ್ಥಪೂರ್ಣ ಬಳಕೆಯಾಗುವ ಎಲ್ಲ ಸಾಧ್ಯತೆಗಳು ಇವೆ. ಆದರೆ ಸದ್ಯದ ಸ್ಥಿತಿಯಲ್ಲಿ ಭಾರತೀಯ ಸನ್ನಿವೇಶದಲ್ಲಿ ಎಲೆಕ್ಟ್ರಿಕ್ ಏರ್ ಟ್ಯಾಕ್ಸಿಗಳು  ಕಾರ್ಯಾರಂಭ ಮಾಡುವ ಸಾಧ್ಯತೆ ಜಾಸ್ತಿಇದೆ. ಇದರ ಮುಂದಿನ ಕಾರ್ಯವಿಧಾನಗಳನ್ನು ಆಯಾ ಕಾಲಘಟ್ಟದಲ್ಲಿ ಕಾಣಿಸಿಕೊಳ್ಳುವ ಸಮಯವೇ  ವಿವರಿಸುವ ಸಾಧ್ಯತೆ ಹೆಚ್ಚಾಗಿದೆ, ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. 
 
                  2023 ರ ನವೆಂಬರ್ ನಲ್ಲಿ  IGE ಮತ್ತು ಆರ್ಚರ್ ನಡುವೆ ಒಂದು ಒಪ್ಪಂದ ಮಾಡಿಕೊಂಡಿದ್ದವು.  ಆ ಒಪ್ಪಂದದ ಪ್ರಕಾರ ಆರ್ಚರ್‌ನ 200 ಎಲೆಕ್ಟ್ರಿಕ್ ಟೇಕ್-ಆಫ್ ಮತ್ತು ಲ್ಯಾಂಡಿಂಗ್ (eVTOL) ವಿಮಾನಗಳನ್ನು ಭಾರತೀಯ ಮಾರುಕಟ್ಟೆಗೆ ಖರೀದಿಸಲು ಹಣಕಾಸು ಒದಗಿಸುವ ಕುರಿತು ಮಾತುಕತೆಯಾಗಿತ್ತು.  ಈ ಎಲೆಕ್ಟ್ರಿಕ್ ಏರ್ ಟ್ಯಾಕ್ಸಿ ವಿಮಾನಗಳಿಗೆ  12 ರೋಟರ್‌ಗಳನ್ನು ಹೊಂದಿದ್ದು, ಸುಮಾರು 1 ಬಿಲಿಯನ್ ಡಾಲರ್ ವೆಚ್ಚವಾಗಲಿದೆ. ವಿಮಾನವು ನಾಲ್ಕು ಪ್ರಯಾಣಿಕರು ಮತ್ತು ಪೈಲಟ್ ಅನ್ನು ಹೊತ್ತೊಯ್ಯ ಬಹುದಾದ ಸಾಮರ್ಥ್ಯ ಇರಲಿದೆ .  ಇದು ಆರು-ಬ್ಯಾಟರಿ ಪ್ಯಾಕ್‌ನೊಂದಿಗೆ ಅಳವಡಿಸಲ್ಪಟ್ಟಿದ್ದು, 30-40 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗಲಿದೆ ಎನ್ನುವ ಪ್ರಾಥಮಿಕ ಮಾಹಿತಿಗಳು ಲಬ್ಯವಾಗುತ್ತಿದೆ.
              ಈ ಕುರಿತು ಆರ್ಚರ್ ಏವಿಯೇಷನ್ ​​ಸಂಸ್ಥಾಪಕ ಮತ್ತು ಸಿಇಒ ಆಡಮ್ ಗೋಲ್ಡ್‌ಸ್ಟೈನ್ ಅವರು ಮಾತನಾಡಿ  ಯುಎಸ್ ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ನೊಂದಿಗೆ ಚರ್ಚೆಗಳು ನಡೆಯುತ್ತಿವೆ, ಮತ್ತು ಅದರ ವಿಮಾನಗಳಿಗೆ ಪ್ರಮಾಣೀಕರಣ ಪ್ರಕ್ರಿಯೆಯು ಮುಂದುವರಿದ ಹಂತದಲ್ಲಿದೆ ಎಂದಿದ್ದಾರೆ.  ಮುಂದಿನ ವರ್ಷ ಪ್ರಮಾಣೀಕರಣವನ್ನು ನಿರೀಕ್ಷಿಸಲಾಗಿದೆ ಮತ್ತು ಅದು ಜಾರಿಯಾದ ನಂತರ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಪ್ರಮಾಣೀಕರಣದ ಸೌಕರ್ಯಕ್ಕಾಗಿ ಈ  ಪ್ರಕ್ರಿಯೆಯನ್ನು ಪ್ರಾರಂಭಿಸುವ ಭರವಸೆಯನ್ನು ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಆರ್ಚರ್ ಮುಖ್ಯ ವಾಣಿಜ್ಯ ಅಧಿಕಾರಿ ನಿಖಿಲ್ ಗೋಯೆಲ್ ಮಾತನಾಡಿ, ಮೂಲಸೌಕರ್ಯ ಮತ್ತು ವಿಮಾನ ಕಾರ್ಯಾಚರಣೆಗಳ ಇತರ ಅಂಶಗಳಿಗಾಗಿ ವಿವಿಧ ಮುನ್ಸಿಪಾಲಿಟಿಗಳೊಂದಿಗೆ ಚರ್ಚಿಸುತ್ತಿರುವುದಾಗಿ ತಿಳಿಸಿದ್ದಾರೆ.
           ಕ್ರಿಸ್ಲರ್-ಪೋಷಕ ಸ್ಟೆಲಾಂಟಿಸ್, ಬೋಯಿಂಗ್ ಮತ್ತು ಯುನೈಟೆಡ್ ಏರ್‌ಲೈನ್ಸ್ ಸಹಕಾರದೊಂದಿಗೆ ಆರ್ಚರ್ ಏವಿಯೇಷನ್ ​​ಈ ವರ್ಷ ಯುಎಸ್‌ನಲ್ಲಿ ತನ್ನ ಉತ್ಪಾದನಾ ಸೌಲಭ್ಯವನ್ನು ತೆರೆಯಲಿದೆ ಮತ್ತು ಆರಂಭದಲ್ಲಿ ಇದು 650 ವಿಮಾನಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ ಮತ್ತು ಅದನ್ನು 2,000 ವಿಮಾನಗಳಿಗೆ ಹೆಚ್ಚಿಸಲಾಗುವುದು ಎನ್ನುವ ಮಹತ್ವದ ಮಾಹಿತಿಯನ್ನು ಬಹಿರಂಗ ಪಡಿಸಿದೆ. 
 
 
 
 
 
 
 
 
 
 
 
 

Publisher: ಕನ್ನಡ ನಾಡು | Kannada Naadu

Login to Give your comment
Powered by