ನಮ್ಮ ನೆಲದಲ್ಲೇ ತಯಾರಾಗಲಿದೆ ನಮ್ಮ ಬುಲಟೆ ಟ್ರೈನು...!
19 Apr, 2024
ಬೆಂಗಳೂರು : ದೇಶ ಪ್ರಗತಿಯ ಮಾರ್ಗದಲ್ಲಿ ಮುನ್ನಡೆಯತ್ತಿದೆ. ಪ್ರತೀ ದಿನ ಒಂದಿಲ್ಲೊಂದು ವಿನೂತನ ಆವಿಷ್ಕಾರಗಳು ನಮ್ಮ ದೇಶದಲ್ಲಿ ನಡೆಯುತ್ತಲೇ ಇರುವುದು ನಮ್ಮ ದೇಶದ ವಿಶೇಷತೆ. ಉತ್ಪಾದನಾ ಕ್ಷೇತ್ರದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಎಲ್ಲರ ದೃಷ್ಠಿ ತನ್ನತ್ತ ಕೇಂದ್ರಿಕರಿಸಿಕೊಳ್ಳಲು ಕಾರಣವಾಗಿದೆ.
ಈಗಾಗಲೇ ನಮ್ಮಲ್ಲಿ ವಂದೇ ಭಾರತ್ ರೈಲುಗಳ ಕೋಚ್‌ಗಳು ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ದೇಶದಲ್ಲಿಯೇ ಬುಲೆಟ್ ರೈಲುಗಳನ್ನು ನಿರ್ಮಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಭಾರತವು ಸ್ವದೇಶಿ ನಿರ್ಮಿತ ರೈಲುಗಳನ್ನುತಯಾರಿಸಿ ದೇಶಕ್ಕೆ ನೀಡಲಿದೆ. ವಿಶೇಷವೆಂದರೆ ಭಾರತದಲ್ಲಿ ಈಗಾಗಲೇ ಸ್ವದೇಶಿ ನಿರ್ಮಿತ ಬುಲೆಟ್ ರೈಲುಗಳು ಉತ್ಪಾದನೆ ಆರಂಭವಾಗಿದೆ. ಈ ಬುಲೆಟ್ ರೈಲುಗಳು ಭಾರತದಲ್ಲಿ ಹಾಲಿ ಇರುವ ರೈಲುಗಳಿಗಿಂತಲೂ ವೇಗವಾಗಿ ಓಡಲಿವೆ ಎಂದು ಭಾರತೀಯ ರೈಲ್ವೆ ಇಲಾಖೆ ಭರವಸೆ ನೀಡಿದೆ.
ಪ್ರಸ್ತುತ ಕಾಲಘಟ್ಟದಲ್ಲಿ ಭಾರತವು ಪ್ರತಿ ಗಂಟೆಗೆ 250 ಕಿಲೋಮೀಟರ್ (ಕಿಮೀ) ವೇಗದಲ್ಲಿ ಚಲಿಸಬಲ್ಲ ಸಾಮಾರ್ಥ್ಯದ ಬುಲೆಟ್ ರೈಲನ್ನು ನಿರ್ಮಿಸಲಿದೆ. ಈ ಕುರಿತು ಭಾರತೀ ರೈಲ್ವೆ ಇಲಾಖೆ ಉನ್ನತಾಧಿಕಾರಿಗಳು ಎಕನಾಮಿಕ್ ಟೈಮ್ಸ್ ಗೆ ಮಾಹಿತಿ ನೀಡಿದೆ ಎಂದು ವರದಿ ಆಗಿದೆ. ಭಾರತದಲ್ಲಿ ಸ್ವದೇಶಿ ನಿರ್ಮಿತ ಬುಲೆಟ್ ರೈಲುಗಳ ವೇಗವು ಫ್ರೆಂಚ್ TGV ಮತ್ತು ಜಪಾನೀಸ್ ಶಿಂಕನ್‌ಸೆನ್ ಸೇರಿದಂತೆ 250 kmph ವೇಗದಲ್ಲಿ ಚಲಿಸುವ ಪ್ರಪಂಚದ ವಿವಿಧ ಭಾಗಗಳಲ್ಲಿ ಹೆಚ್ಚಿನ ವೇಗದ ರೈಲುಗಳಂತೆಯೇ ಇರುತ್ತದೆ.
ರೈಲ್ವೆ ಇಲಾಖೆಯ ಮೂಲಗಳ ಪ್ರಕಾರ, ಚೆನ್ನೈನಲ್ಲಿರುವ ಭಾರತೀಯ ರೈಲ್ವೆಯ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ಯಲ್ಲಿ ಬುಲೆಟ್ ರೈಲಿನ ವಿನ್ಯಾಸವನ್ನು ಈಗಾಗಲೇ ಸಿದ್ಧಪಡಿಸುವಿಕೆ ಕೆಲಸ ಆರಂಭಗೊಂಡಿದೆ. ಈ ಬುಲೆಟ್ ರೈಲನ್ನು ವಂದೇ ಭಾರತ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗುತ್ತಿದೆ. ವಂದೇ ಭಾರತ್ ಈಗಾಗಲೇ ಗರಿಷ್ಠ 220 ಕಿಮೀ ವೇಗದಲ್ಲಿ ಓಡಬಹುದಾದ ಸಾಮರ್ಥ್ಯ ಹೊಂದಿದೆ ಎಂದು ಅವರು ಮಾಹಿತಿ ನೀಡಿದರು.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು 2024 ರ ಲೋಕಸಭೆ ಚುನಾವಣೆ ಅಂಗವಾಗಿ ಬಿಜೆಪಿಯ ಪ್ರಣಾಳಿಕೆ ಬಿಡುಗಡೆಗೊಳಿಸಿದರು. ಈ ವೇಳೆ ಪ್ರಧಾನಿ ಭಾರತ ಉತ್ತರ, ದಕ್ಷಿಣ, ಪೂರ್ವ ಕಾರಿಡಾರ್‌ಗಳಲ್ಲಿ ಮೇಡ್ ಇನ್ ಇಂಡಿಯಾ ಬುಲೆಟ್ ರೈಲುಗಳು ಸಂಚರಿಸುವ ಬಗ್ಗೆ ಸುಳಿವು ನೀಡಿದರು. ಈ ಮೂಲಕ ಬುಲೆಟ್ ರೈಲಿನ ಕುರಿತ ದೂರದೃಷ್ಟಿಯನ್ನು ಅವರು ಹಂಚಿಕೊಂಡಿದ್ದರು.
ಉತ್ತರ, ದಕ್ಷಿಣ, ಪೂರ್ವ ಕಾರಿಡಾರ್ ಜೊತೆಯಲ್ಲಿ ದೇಶದಲ್ಲಿ ಇನ್ನೂ 3 ಬುಲೆಟ್ ರೈಲು ಕಾರಿಡಾರ್‌ಗಳನ್ನು ಭವಿಷ್ಯದಲ್ಲಿ ನಿರ್ಮಾಣಗೊಳ್ಳಲಿವೆ ಎನ್ನುವ ಮಾಹಿತಿಯನ್ನು ಸಹ ಪ್ರಧಾನಿ ಅವರು ನೀಡಿದರು. ವಾಣಿಜ್ಯ ನಗರಿ ಮುಂಬೈಗೆ ಅಹಮದಾಬಾದ್‌ನಿಂದ ಸಂಪರ್ಕ ಸಾಧಿಸುವ ಮೊದಲ ಬುಲೆಟ್ ಕಾರಿಡಾರ್‌ನ ಕೆಲಸ ಬಹುತೇಕ ಮುಗಿದಿದೆ. ಇನ್ನೂ ಹೊಸ ಬುಲೆಟ್ ರೈಲಿನ ಕಾರ್ಯ ಶೀಘ್ರದಲ್ಲೇ ಆರಂಭಗೊಳ್ಳಲಿದೆ ಎನ್ನಲಾಗುತ್ತಿದೆ.
ಬುಲೆಟ್ ಕಾರಿಡಾರ್‌ಗಳಲ್ಲಿ ಸ್ವದೇಶಿ ತಂತ್ರಜ್ಞಾನ ಭವಿಷ್ಯದ ಬುಲೆಟ್ ರೈಲು ಕಾರಿಡಾರ್‌ಗಳು ಸ್ವದೇಶಿ ತಂತ್ರಜ್ಞಾನ ಮತ್ತು ದೇಶೀಯ ಉತ್ಪಾದನೆಯನ್ನು ಬಳಸಿಕೊಳ್ಳಲಾಗುತ್ತದೆ. ಸದ್ಯ ಗುಜರಾತ್‌ನ ಅಹಮದಾಬಾದ್‌ನಿಂದ ಮಹಾರಾಷ್ಟ್ರದ ಮುಂಬೈ ನಡುವೆ ಸಂಚರಿಸಲು ನಿರ್ಮಿಸಲಾಗುತ್ತಿರುವ ಬುಲೆಟ್ ರೈಲುಗಳು ಜಪಾನ್ ತಂತ್ರಜ್ಞಾನವನ್ನು ಅವಲಂಬಿಸಿವೆ. ಭಾರತೀಯ ರೈಲ್ವೇ ಹಾಲಿ ರೈಲುಗಳ ವೇಗವನ್ನು ಸುಧಾರಿಸುವತ್ತ ಗಮನ ಹರಿಸಲಾಗುತ್ತಿದೆ. ಇದಕ್ಕಾಗಿ ಎರಡು ಟ್ರ್ಯಾಕ್‌ಗಳಿಗೆ ಹಾಲಿ ಟ್ರ್ಯಾಕ್ ಅಭಿವೃದ್ಧಿ ಪಡಿಸಲಾಗಿದೆ. ಸದ್ಯ ವಂದೇ ಭಾರತ್ ರೈಲುಗಳು ಈಗ ಶೂನ್ಯದಿಂದ 100 ಕಿಮೀ ವೇಗವನ್ನು 52 ಸೆಕೆಂಡುಗಳಲ್ಲಿ ತಲುಪುತ್ತಿವೆ. ಆದರೆ ಹಾಲಿ ಇರುವ ಬುಲೆಟ್ ರೈಲುಗಳು ಶೂನ್ಯದಿಂದ 100 ಕಿಮೀ ವೇಗ ತಲುಪಲು 54 ಸೆಕೆಂಡು ತಲುಪುತ್ತಿವೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಹಿಂದೆ ರೈಲ್ವೇ ಖಾತೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ಹಂಚಿಕೊಳ್ಳುತ್ತಾ ದೇಶದ ಮೊದಲ ಬುಲೆಟ್ ರೈಲು 2026 ರಲ್ಲಿ ಉತ್ಪಾದನೆಯಾಗಲಿದೆ. ಈ ರೈಲು ಸೂರತ್‌ನಿಂದ ಗುಜರಾತ್‌ನ ಬಿಲಿಮೋರಾವರೆಗೆ ಸಂಚರಿಸಲಿದೆ ಎಂದು ತಿಳಿಸಿದ್ದನ್ನು ಸ್ಮರಿಸಬಹುದು.
Publisher: ಕನ್ನಡ ನಾಡು | Kannada Naadu