ಕನ್ನಡ ನಾಡು | Kannada Naadu

ಅಯೋಧ್ಯೆಯ ರಾಮಲಲಾನ ಲಲಾಟ ಸ್ಪರ್ಶಿಸಿದ ದಿನಮಣಿ..

17 Apr, 2024

ಅಯೋಧ್ಯೆ :  ನಮ್ಮ ದೇಶದ ಹೆಮ್ಮೆಯ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣದ ನಂತರ, ಮೊದಲ ಬಾರಿಗೆ ರಾಮನವಮಿ ಆಚರಣೆ ಮಾಡಲಾಗಿದೆ. ಶ್ರೀ ರಾಮ ನವಮಿಗಾಗಿ ಕಳೆದ ಕೆಲವು ದಿನಗಳಿಂದ ಅಯೋಧ್ಯೆಯಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು.  ಎಲ್ಲ ವ್ಯವಸ್ಥೆಗಳನ್ನು ಕರಾರುವಕ್ಕಾಗಿ ಮಾಡಲಾಗಿತ್ತು, ಜೊತೆಗೆ  ಈ ನಡುವೆ ನಡೆಸಲಾದ ಸೂರ್ಯರಶ್ಮಿ ಪ್ರಯೋಗ ಕೂಡ ಯಶಸ್ವಿಯಾಗಿದ್ದು, ರಾಮನವಮಿಯಂದು ಸೂರ್ಯ ರಶ್ಮಿ ಶ್ರೀರಾಮನ ಮೂರ್ತಿ ಸ್ಪರ್ಶ ಮಾಡುವ ಮೂಲಕ ಸೂರ್ಯ ತಾನು ತನ್ನ ಕರ್ತವ್ಯ ಪೂರ್ಣಮಾಡಿದ್ದಾನೆ ಎನ್ನುವಂತೆ ಕಂಡು ಬಂದಿತ್ತು. 
ಮಂದಿರ ನಿರ್ಮಾಣವಾದ ನಂತರ ಇದೆ ಮೊದಲ ಬಾರಿ ಅಯೋಧ್ಯೆಯಲ್ಲಿ ರಾಮನವಮಿಯನ್ನು ಆಚರಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಬಾಲರಾಮನ ಹಣೆಯ ಮೇಲೆ ಸೂರ್ಯರಶ್ಮಿ ಸ್ಪರ್ಶಿಸಿದೆ.  ಈ ಪ್ರಯೋಗವನ್ನು  ʻರೂರ್ಕಿಯ ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆಯʼ ತಜ್ಞರ ನೇತ್ರತ್ವದಲ್ಲಿ, ʻಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ʼ ತಜ್ಞರು ಈ ತಂತ್ರಜ್ಞಾನ ಸಿದ್ಧಪಡಿಸಿದ್ದಾರೆ.  ಶ್ರೀ ರಾಮನವಮಿಯಂದು ಬಾಲರಾಮನ ಮೂರ್ತಿಯ ಮೇಲೆ ಮೂರು ಕನ್ನಡಿಗಳ ಸಹಾಯದಿಂದ ಸುಮಾರು ಎರಡೂವರೆ ನಿಮಿಷಗಳ ಕಾಲ ಸೂರ್ಯರಶ್ಮಿ ರಾಮಲಲಾನ ಲಲಾಟವನ್ನು ಸ್ವರ್ಶಿಸಿತು. ಈ ಸುಂದರ ಅಪರೂಪದ ಘಟಣೆಯನ್ನು ದೂರದರ್ಶನ ನೇರ ಪ್ರಸಾರ ಸಹ ಮಾಡಿದ್ದು, ಜಗತ್ತಿನಾದ್ಯಂತ ಜನರು ಈ ತಂತ್ರಜ್ಞಾನದ ಕೌತುಕವನ್ನು ಕಣ್ತುಂಬಿಕೊಂಡಿದ್ದಾರೆ ಎಂದು  ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಕಟಿಸಿದೆ. 

ಸೂರ್ಯರಶ್ಮಿ ನೇರವಾಗಿ ಬಾಲರಾಮನ ಹಣೆಗೆ ಬೀಳುವಂತೆ ಮಾಡಲು ಈ ಹಿಂದೆ ವಿಜ್ಞಾನಿಗಳು ಒಂದು ಪ್ರಯೋಗವನ್ನು ನಡೆಸಿದ್ದು ಅದು ಸಹ ಯಶಸ್ವಿಯಾಗಿತ್ತು. ಸೂರ್ಯರಶ್ಮಿ ರಾಮನನ್ನು ಸ್ಪರ್ಶ ಮಾಡುವ ಸಮಯದಲ್ಲಿ ರಾಮ ಭಕ್ತರಿಗೆ ಮಂದಿರದೊಳಗೆ ಅವಕಾಶ ನೀಡಲಾಗಿತ್ತು. ಜೊತೆಗೆ ದೇವಾಲಯದ ಟ್ರಸ್ಟ್‌ನಿಂದ ಸುಮಾರು 100 ಎಲ್‌ಇಡಿ ಸ್ಕ್ರೀನ್‌ಗಳನ್ನು ಅಳವಡಿಸಲಾಗಿದ್ದು, ಸರ್ಕಾರದಿಂದಲೂ ಸಹ  50 ರಾಮನವಮಿ ಆಚರಣೆ ಲೈವ್​​​​ ಸ್ಕ್ರೀನ್​​ ನೋಡಲು ವ್ಯವಸ್ಥೆ ಮಾಡಲಾಗಿತ್ತು ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯ ಅನಿಲ್ ಮಿಶ್ರಾ ಹೇಳಿದ್ದಾರೆ.
ಹಿಂದೂ ಪಂಚಾಗದ ಮೊದಲ ತಿಂಗಳ ಒಂಬತ್ತನೇ ದಿನದಂದು ಆಚರಿಸಲಾಗುವ ರಾಮ ನವಮಿಯು ಸಾಮಾನ್ಯವಾಗಿ ಮಾರ್ಚ್-ಏಪ್ರಿಲ್‌ ತಿಂಗಳಲ್ಲಿ ಬರುತ್ತದೆ, ಇದು ಭಗವಾನ್ ರಾಮನ ಜನ್ಮವನ್ನು ಸೂಚಿಸುತ್ತದೆ. ಜನವರಿ 22, 2024 ರಂದು ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪಿಸಿದ ನಂತರ ಶ್ರೀ ರಾಮನ ಜನ್ಮವನ್ನು ಗುರುತಿಸುವ ಮೊದಲ ರಾಮನವಮಿ ಇದಾಗಿತ್ತು. 
     ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆಯ (CBRI) ಯೋಜನೆಯ ಮುಖ್ಯ ವಿಜ್ಞಾನಿ ʻಎಸ್ ಕೆ ಪಾಣಿಗ್ರಾಹಿʼ ಅವರು ಮಾತನಾಡಿ, ಒಂದು ವರ್ಷದ ಪ್ರಯತ್ನದ ನಂತರ, ರಾಮನವಮಿಯಂದು ಭಗವಾನ್ ರಾಮನ ಹಣೆಯ ಮೇಲೆ ಸೂರ್ಯಕಿರಣಗಳು ಬೀಳುವಂತೆ ಮಾಡಲು ಸಾಧ್ಯವಾಗಿದೆ. ತಜ್ಞರ ತಂಡವು ಏಪ್ರಿಲ್ 2023 ರಲ್ಲಿ ಈ ಯೋಜನೆಯ ಕೆಲಸವನ್ನು ಪ್ರಾರಂಭಿಸಿತು. ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR), ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್ (CBRI), ರೂರ್ಕಿ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA), ಬೆಂಗಳೂರು, ಇವುಗಳ ವಿಜ್ಞಾನಿಗಳು ಅದನ್ನು ಯಶಸ್ವಿಯಾಗಿ ರೂಪಿಸಿದ್ದಾರೆ ಎಂದು ತಿಳಿಸಿರುತ್ತಾರೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮೂಲಗಳ ಪ್ರಕಾರ, ಸೂರ್ಯನ ಬೆಳಕು ರಾಮಲಲ್ಲಾನ ಹಣೆಯನ್ನು ವೃತ್ತಾಕಾರದಲ್ಲಿ 'ತಿಲಕ' ದಂತೆ ಅಲಂಕರಿಸಿತ್ತು.  ಇದು  ಮಾರು 75 ಮಿಮೀ ಅಳತೆಯ ವ್ಯಾಸದಷ್ಟಿದ್ದು, ಸೂರ್ಯವಂಶಿ ರಾಜನ 'ಸೂರ್ಯ ತಿಲಕ'ವನ್ನು ಸಂಕೇತಿಸುತ್ತದೆ ಎಂದು ಬಣ್ಣಿಸಲಾಗಿದೆ. ಸುಮಾರು 500 ವರ್ಷಗಳ ಬಳಿಕ ರಾಮಮಂದಿರದಲ್ಲಿ ರಾಮಜನ್ಮೋತ್ಸವ ಆಚರಣೆ ನಡೆಯುತ್ತಿದ್ದು,  ಹೂವಿನ ಅಲಂಕಾರ, ಸೂರ್ಯ ತಿಲಕ ಎಲ್ಲವೂ ವಿಶೇಷವಾಗಿ ಆಸ್ತಿಕರ ಗಮನಸೆಳೆಯುತ್ತಿವೆ. 


ಇಂದು ಮಧ್ಯಾಹ್ನ 12 ಗಂಟೆಗೆ ಸೂರ್ಯನ ಕಿರಣಗಳ ತಿಲಕ ರಾಮಲಲಾ (ಬಾಲರಾಮ)ನ ಹಣೆಯಲ್ಲಿ ರಾರಾಜಿಸಿತು. ಸೂರ್ಯನ ಕಿರಣಗಳು ರಾಮಲಲಾನ ಮುಖದ ತೇಜಸ್ಸನ್ನು ಹೆಚ್ಚಿಸಿತು. ಈ ಸೂರ್ಯ ತಿಲಕವು 75 ಮಿ.ಮೀ. ಆಕಾರದಲ್ಲಿ ಇದ್ದು, ಬಾಲರಾಮನ ಹಣೆಯ ಮೇಲೆ ಇದು 4 ರಿಂದ 6 ನಿಮಿಷಗಳ ಕಾಲ ಗೋಚರಿಸಿತ್ತು.

ರಾಮನವಮಿ ಪ್ರಯಕ್ತ ಶ್ರೀ ರಾಮಲಲಾನ ನೈವೇದ್ಯಕ್ಕೆ  ಹಾಗೂ ಪ್ರಸಾದವಾಗಿ ವಿತರಿಸಲು ಶ್ರೀ ಹಂಸ್ ಬಾಬಾ ಆಶ್ರಮದಿಂದ 1,11,111 ಕೆಜಿ ತೂಕದ ಲಾಡುಗಳನ್ನು ಅಯೋಧ್ಯೆ ಕಳಿಸಲಾಗಿತ್ತು. ಈ ಕುರಿತು ಹೆಚ್ಚಿನ ಮಾಹಿತಿ ನೀಡಿದ  ʻಮಿರ್ಜಾಪುರದ ಶ್ರೀ ಹಂಸ್ ಬಾಬಾ ಟ್ರಸ್ಟ್‌ನ ಟ್ರಸ್ಟಿ, ಅತುಲ್ ಕುಮಾರ್ ಸಕ್ಸೇನಾʼ  ಅವರು ಮಾತನಾಡಿ,  'ಕಾಶಿ ವಿಶ್ವನಾಥ ಹಾಗೂ ತಿರುಪತಿ ತಿಮ್ಮಪ್ಪ ದೇಗುಲಯಗಳು ಸೇರಿದಂತೆ ದೇಶದ ಪ್ರತಿಷ್ಟಿತ ದೇವಾಲಯಗಳಿಗೆ ಅಯೋಧ್ಯೆಯ ರಾಮ ಮಂದಿರದಿಂದ  ಲಾಡು ಪ್ರಸಾದವನ್ನು ಕಳುಹಿಸಲಾಗಿದೆ. ಈ ವರ್ಷ ಜನವರಿ 22 ರಂದು ನಡೆದ ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆಯ ದಿನ ಹಂಸ್ ಬಾಬಾ ಆಶ್ರಮ ದಿಂದ ನೈವೇದ್ಯಕ್ಕಾಗಿ 40,000ಕೆಜಿ ತೂಕದ ಲಾಡುಗಳನ್ನು ಕಳುಹಿಸಿತ್ತು ಎನ್ನುವುದನ್ನು ತಿಳಿಸಿದ್ದಾರೆ. 
 
ಟಿ.ಟಿ.ಡಿ ಮಾದರಿ: 

ಈ ದಿನ ತಿರುಪತಿಯಲ್ಲೂ ರಾಮನವಮಿಯ ಹಿನ್ನೆಲೆಯಲ್ಲಿ  ವಿಶೇಷ ಪೂಜೆಗಳು ನೆರವೇರುತ್ತಿದೆ. ಮಾತ್ರವಲ್ಲದೆ  ಶ್ರೀರಾಮ ನವಮಿಯಂದು ಅಯೋಧ್ಯೆ ದೇವಸ್ಥಾನಕ್ಕೆ ಟಿಟಿಡಿ ಉಡುಗೊರೆಯೊಂದನ್ನು ನೀಡಿದೆ.   ಅಯೋಧ್ಯೆಯಲ್ಲಿ ಜನಸಂದಣೆಯನ್ನು ನಿಯಂತ್ರಿಸಲು, ಸರತಿ ಸಾಲು, ನೀರಿನ ಘಟಕ, ಪ್ರವೇಶ ಮತ್ತು ನಿರ್ಗಮನ ಮಾರ್ಗಗಳ ವ್ಯವಸ್ಥೆ ಮಾಡುವ ಬಗ್ಗೆ ರಾಮ ಮಂದಿರ ಟ್ರಸ್ಟ್‌ಗೆ, ತಿರುಮಲ ತಿರುಪತಿ ದೇಗುಲದ (ಟಿಟಿಡಿ) ಎಂಜಿನಿಯರ್‌ಗಳ ತಂಡ ಸಲಹೆಗಳನ್ನು ನೀಡಿದ್ದಾರೆ. ರಾಮ ಮಂದಿರ ಟ್ರಸ್ಟ್ ಆಹ್ವಾನದ ಮೇರೆಗೆ  ಟಿಟಿಡಿ ಎಂಜಿನಿಯರ್‌ಗಳ ತಂಡವೊಂದು ಅಯೋಧ್ಯೆಗೆ ಭೇಟಿ ನೀಡಿ, ದೇಗುಲವನ್ನು ಪರಿಶೀಲನೆ ನಡೆಸಿ ಯಾವ ರೀತಿಯಲ್ಲಿ ವ್ಯವಸ್ಥೆ ಮಾಡಬಹುದು ಎನ್ನುವ ನೀಲಿ ನಕ್ಷೆಯನ್ನು ನೀಡಿತ್ತು. ಆ ಮೂಲಕ  ದೇಗುಲದಲ್ಲಿ ಜನ ಸಂದಣಿ ನಿಯಂತ್ರಿಸುವುದು, ಸರತಿ ಸಾಲು ಮಾಡುವುದು, ನೀರಿನ ಘಟಕ, ಪ್ರವೇಶ ಹಾಗೂ ನಿರ್ಗಮನ ಮಾರ್ಗಗಳ ವ್ಯವಸ್ಥೆ ಮಾಡುವ ಬಗ್ಗೆ ವರದಿಯನ್ನು ಸಲ್ಲಿಸಿತು.            
       ಈ ಕುರಿತು ನಡೆದ ಸಭೆಯಲ್ಲಿ ಊಪಸ್ಥಿತರಿದ್ದ ಶ್ರೀ ರಾಮ ಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಗೋಪಾಲಜಿ ಅವರು ಮಾಹಿತಿ ನೀಡಿದ್ದಾರೆ.   ಅಯೋಧ್ಯೆಯ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ಬಲರಾಮನ ದರ್ಶನಕ್ಕಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಆದರೆ ಭಕ್ತರ ನಿರ್ವಹಣೆ ಸರಿಯಾದ ರೀತಿಯಲ್ಲಿ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಟಿಟಿಡಿಗೆ ಸಹಾಯ ಕೋರಿತ್ತು. ಭಕ್ತರಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಲು, ಸರತಿ ಸಾಲುಗಳ ನಿರ್ವಹಣೆ ಇತ್ಯಾದಿಗಳ ಸಹಾಯ ಮಾಡುವಂತೆ ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ  ಟಿಟಿಡಿ ಇಒ ಧರ್ಮಾ ರೆಡ್ಡಿ ನೇತೃತ್ವದ ಅಧಿಕಾರಿಗಳ ತಂಡ ಅಯೋಧ್ಯೆಗೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿ,  ಅಯೋಧ್ಯೆಯ ರಾಮಮಂದಿರದ ನಿರ್ವಹಣೆಗೆ ತಾಂತ್ರಿಕ ಸಲಹಾ ವರದಿಯನ್ನು ಸಲ್ಲಿಸಿದೆ.  

Publisher: ಕನ್ನಡ ನಾಡು | Kannada Naadu

Login to Give your comment
Powered by