ಬಿಸಿಲ ತಾಪಕ್ಕೆ ಚಿಲ್ಡ್ ಬಿಯರ್ ಮೊರೆಹೋದ ಜನ..!
13 Apr, 2024
ಬೆಂಗಳೂರು : ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಕೆಲವು ಕಡೆಗಳಲ್ಲಿ ಸಣ್ಣ ತುಂತುರು ಮಳೆಯಾದ ಬಗ್ಗೆ ವರದಿಯಾಗುತ್ತಿದೆ. ಆದರೆ ಸುಡುವ ಬಿಸಿಲಿನ ಧಗೆಯಿಂದ ರಾಜ್ಯದ ಬಹುತೇಕ ಜನರು ತತ್ತರ ಗೊಳ್ಳುತ್ತಿದ್ದಾರೆ. ಬಿಸಿಲ ತಾಪ ತಾಳಲಾರದೆ ಆರೋಗ್ಯ ಪ್ರಿಯರು ತಂಪಗಿನ ಆಹಾರ ಪದಾರ್ಥಗಳತ್ತ ಮುಖ ಮಾಡಿದ್ದಾರೆ. ಅದೇ ಆಲ್ಕೋಹಾಲ್ ಪ್ರಿಯರು ತಮ್ಮ ನೆಚ್ಚಿನ ಬಿಯರ್ ಕಡೆ ತಲೆ ಹಾಕುತ್ತಿದ್ದಾರೆ.

ಮಧ್ಯಪ್ರೀಯರ ಈ ನಡೆಯಿಂದ ರಾಜ್ಯದಲ್ಲಿ ಬೀಯರ್ ಮಾರಾಟದಲ್ಲಿ ಗಣನೀಯ ಏರಿಕೆಯಾಗಿದೆ ಎಂದು ಅಂಕಿ ಅಂಶಗಳು ಹೇಳುತ್ತಿವೆ. ಬಿಸಿಲಿನ ತಾಪದಿಂದ ಮನೆಯಲ್ಲಿ ಕೂರಲಾಗದೇ, ಹೊರಗೆ ಹೋಗಲಾರದೆ ಜನ ಹಿಂಸೆ ಅನುಭವಿಸುತ್ತಿದ್ದಾರೆ. ಕಳೆದ 11 ದಿನಗಳಲ್ಲಿ ಬರೋಬ್ಬರಿ 17 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ ಎನ್ನುವ ವರದಿಯನ್ನು ಸ್ವತಃ ಅಬಕಾರಿ ಇಲಾಖೆಯೇ ಭಹಿರಂಗ ಪಡಿಸಿದೆ.
ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಈ ಬಾರಿ ಬಿಸಿಲು ಅಧಿಕವಾಗಿದೆ. ಪರಿಣಾಮ ದಿನೇ ದಿನ ಬಿಸಿಲಿನ ಧಗೆ ಹೆಚ್ಚಾಗುತ್ತಿದೆ. ಹಾಗೇಯೇ ಕಳೆದ ವರ್ಷಕ್ಕಿಂತ ಈ ವರ್ಷ ಬಿಯರ್ ಮಾರಾಟದಲ್ಲಿ ಏರಿಕೆಯಾಗಿ, ದಾಖಲೆ ಬರೆದಿದೆ. ಏಪ್ರಿಲ್ 1 ರಿಂದ ಏಪ್ರಿಲ್ 11 ರವರೆಗೂ ಅಂದರೆ ಕಳೆದ ಹನ್ನೊಂದು ದಿನಗಳಲ್ಲಿ ರಾಜ್ಯದಲ್ಲಿ ವಿವಿಧ ಬ್ರಾಂಡ್ನ ಬಿಯರ್ ಒಟ್ಟಾರೆ 17.67 ಲಕ್ಷ ಲೀಟರ್ಗಳಷ್ಟು ಮಾರಾಟವಾಗಿವೆ. ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಈ ಬಾರಿಯ ಬಿಯರ್ ಮಾರಾಟ ದಾಖಲೆಯ ಹಂತ ದತ್ತ ಮುನ್ನುಗುತ್ತಿದೆ. 2021ರಲ್ಲಿ ಬೇಸಿಗೆಯ ಈ ಅವಧಿಯಲ್ಲಿ 8.83 ಲಕ್ಷ ಲೀಟರ್ ಬಿಯರ್ ಮಾರಾಟವಾಗಿತ್ತು. 2022ರಲ್ಲಿ 9.20 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದ್ದರೇ, 2023 ರ ಈ ಅವಧಿಯಲ್ಲಿ 13.16 ಲಕ್ಷ ಲೀಟರ್ ಬಿಯರ್ ಮಾರಾಟವಾಗಿತ್ತು.
ಭಾರತದ ಹವಾಮಾನ ಇಲಾಖೆಯ ಪ್ರಕಾರ ದೇಶದ ಹೆಚ್ಚಿನ ಭಾಗಗಳಲ್ಲಿ ಏಪ್ರಿಲ್ನಿಂದ ಜೂನ್ವರೆಗೆ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ಇರಲಿದೆ. ಇದರಲ್ಲಿ ರಾಜ್ಯವೂ ಸೇರಿ ಕೊಂಡಿದೆ. ಜೂನ್ವರೆಗೂ ಬಿಸಿಲು ಇರಲಿದೆ. ಮಳೆ ಬಂದರೂ ಕೂಡ ಅದು ಸಾಧಾರಣವಾಗಿರಲಿದೆ ಎಂದು ಐಎಂಡಿ ಅಭಿಪ್ರಾಯ ಪಟ್ಟಿದೆ. ಹೀಗಾಗಿ ಬಿಸಿಲ ತಾಪದಲ್ಲಿ ಯಾವುದೇ ಇಳಿತ ಇರಲು ಸಾಧ್ಯವಿಲ್ಲ ಎನ್ನುವ ಮಾತನ್ನು ಹೇಳಿಕೊಂಡಿದೆ. ಆದ್ದರಿಂದ ಬಿಯರ್ ಮಾರಾಟದಲ್ಲಿ ಮತ್ತಷ್ಟು ಹೆಚ್ಚಾಗುವ ಸಂಭವವಿದೆ ಎಂದು ಅಂದಾಜಿಸಲಾಗುತ್ತಿದೆ.
2023ಕ್ಕೆ ಹೋಲಿಸಿದರೆ ಈ ವರ್ಷ ಇಷ್ಟರಲ್ಲಿಯೇ ಬರೋಬ್ಬರಿ 4.51 ಲಕ್ಷ ಲೀಟರ್ ಬಿಯರ್ ಹೆಚ್ಚು ಮಾರಾಟ ಆಗಿದೆ. ಬಿಸಿಲಿನ ಬೇಗೆ ಜೊತೆಗೆ ಲೋಕಸಭಾ ಚುನಾವಣೆ ಕೂಡ ಕಾಲಿಡುತ್ತಿದೆ. ಎರಡು ಹಂತಗಳಲ್ಲಿ ಚುನಾವಣೆ ನಡೆಲಿದ್ದು, ವಿಧಾನಸಭಾ ಚುನಾವಣೆ ಇರುವಲ್ಲಿ ಕೆಲವು ಕಡೆಗಳಲ್ಲಿ ಮಧ್ಯ ಹಂಚಿಕೆಯೂ ನಡೆಯುತ್ತದೆ. ಹೀಗಾಗಿ ಬಿಯರ್ ಮಾರಾಟದಲ್ಲಿ ಗಣನೀಯ ಪರಿಣಾಮ ಕಾಣಲಿದೆ. ಜೊತೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ, ವಿಧಾನ ಸಭಾ ಚುನಾವಣೆಗಳಲ್ಲಿ ಮದ್ಯ ಮಾರಾಟ ಮತ್ತು ಮದ್ಯದ ಹಂಚಿಕೆ ಅತಿಯಾಗಿರುತ್ತದೆ.

ಆದರೆ, ಲೋಕಸಭಾ ಚುನಾವಣೆಯಲ್ಲಿ ಇದು ತುಂಬಾ ಕಡಿಮೆ ಇರುತ್ತದೆ. ಅಷ್ಟಾಗಿದ್ದರು ಬಿಯರ್ ಜೊತೆಗೆ ಇತರ ಮದ್ಯ ಮಾರಾಟದಲ್ಲೂ ಏರಿಕೆ ಕಂಡು ಬಂದಿದೆ. ಕಳೆದ ವರ್ಷದ ಈ ಅವಧಿಗೆ ಹೋಲಿಸಿದರೆ ರಾಜ್ಯದಲ್ಲಿ 65 ಸಾವಿರ ಬಾಕ್ಸ್ ಭಾರತೀಯ ಮದ್ಯ ಅಧಿಕವಾಗಿ ಮಾರಾಟವಾಗಿದೆ. ಚುನಾವಣಾ ಪ್ರಚಾರ ಬಿರುಸಿನಿಂದ ಮದ್ಯದ ಮಾರಾಟದಲ್ಲಿ ಏರಿಕೆ ಕಂಡು ಬರುವ ಸಾಧ್ಯತೆಯಿದೆ.
ಇನ್ನು, ಬಿಯರ್ ಜೊತೆಗೆ ತಣ್ಣನೆ ಕೂಲ್ ಡ್ರಿಂಗ್ಸ್ಗಳು, ಎಸಿಗಳಿಗೂ ಬೇಡಿಕೆ ಹೆಚ್ಚಿದೆ.
Publisher: ಕನ್ನಡ ನಾಡು | Kannada Naadu