ಕನ್ನಡ ನಾಡು | Kannada Naadu

ತಪ್ಪಿನ ಅರಿವಾಗಿ ಮನ ಮರುಗಿತು.. ಮಾಲ್ಡೀವ್ಸ್‌ನ ಸೊಕ್ಕು ಕರಗಿತು..

13 Apr, 2024

ಬೆಂಗಳೂರು :  ʻಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲʼ ಎನ್ನುವ ಗಾದೆಯ ರೀತಿಯಲ್ಲಿ ಮಾಲ್ಡೀವ್ಸ್‌ನ ವರ್ತನೆಯಾಗಿತ್ತು. ಯಾರದೋ ಮಾತಿಗೆ ಮರುಳಾಗಿ, ಭಾರತ ದೇಶದ ವಿರೋಧಿ ಕಟ್ಟಿಕೊಂಡಿತ್ತು. ಈಗ ಪರಸ್ಥಿತಿ ಉಲ್ಟಾ ಆಗಿ ಬಿಟ್ಟಿದೆ.  ವಾಸ್ತವದಲ್ಲಿ ಮಾಲ್ಡೀವ್ಸ್ ನ ವ್ಯಾಪಾರ ವ್ಯವಹಾರ ಬೀದಿಗೆ ಬಿದ್ದು ನರಳಾಡುತ್ತಿದೆ. 
        ಭಾರತವನ್ನು ಕವಡೆ ಕಾಸಿಗೂ ಕಿಮ್ಮತ್ತೂ ಇಲ್ಲ ಎನ್ನವಂತೆ ಆಡಿಕೊಂಡ, ಇದೇ ಮಾಲ್ಡೀವ್ಸ್ ಗೆ ತನ್ನ ತಪ್ಪಿನ ಅರಿವು ಆಗುತ್ತಿದೆ. ವಿಶ್ವಕ್ಕೆ ಮಾದರಿಯಾಗಲು ಹೊರಟ ಭಾರತವನ್ನು ಎದುರು ಹಾಕಿಕೊಳ್ಳ ಬಾರದಿತ್ತು ಎನ್ನುವ ಸ್ಪಷ್ಟ ಅರಿವು ಆಗದೆ. ಇತ್ತೀಚಿನ ದಿನಗಳಲ್ಲಿ ಆ ದೇಶಕ್ಕೆ ಹೋಗುತ್ತಿದ್ದ ಭಾರತೀಯರ ಸಂಖ್ಯೆ ಭಾರಿ ಕುಸಿತವಾಗಿದೆ. ಕೇವಲ ಪ್ರವಾಸೋದ್ಯಮ ನಂಬಿದ ಮಾಲ್ಡಿವ್ಸ್ ಭಾರತೀಯರ ಕಾಲು ಹಿಡಿದು ಪ್ರವಾಸೋದ್ಯಮವನ್ನ ಉಳಿಸಿಕೊಳ್ಳವ ಪರಸ್ಥಿತಿಗೆ ಬಂದು ಬಿಟ್ಟಿದೆ. ಈ ಹಿನ್ನೆಲೆಯಲ್ಲಿ  ಮಾಲ್ಡೀವ್ಸ್ ಸರಕಾರ ಅಲ್ಲಿನ ಅಧಿಕಾರಿಗಳನ್ನು ಭಾರತಕ್ಕೆ ಕಳಿಸಲು ಸಜ್ಜಾಗಿದೆ. ಆಗಿರುವ ಪ್ರಮಾದವನ್ನು ಮರೆತು ತನ್ನ ವ್ಯಾಪಾರ ವ್ಯವಹಾರವನ್ನು ಮತ್ತೆ ಚೇತರಿಸಿಕೊಳ್ಳಲು ಹೆಣಗಾಡುತ್ತಿದೆ .

          ಅಂದ ಹಾಗೆ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಾತನಾಡಿದ್ದಕ್ಕಾಗಿ  ಮಾಲ್ಡೀವ್ಸ್ ದೇಶಕ್ಕೆ ಈಗಾಗಲೇ ಭಾರತೀಯರು ಸರಿಯಾಗಿ ಬುದ್ಧಿ ಕಲಿಸಿದ್ದಾರೆ. ಪರಿಣಾಮ ಮಾಲ್ಡೀವ್ಸ್ ದೇಶದ ಪ್ರವಾಸೋದ್ಯಮ ಬಾರಿ ನಷ್ಟ ಅನುಭವಿಸುತ್ತಿದೆ. ಅಲ್ಲಿಗೆ ಪ್ರವಾಸಕ್ಕೆಂದು  ಹೋಗುತ್ತಿದ್ದ ಭಾರತೀಯರ ಸಂಖ್ಯೆಯಲ್ಲಿ ಶೇಕಡಾ 30ಕ್ಕೂ ಹೆಚ್ಚು ಕುಸಿತ ಕಂಡಿದೆ. ಇದೇ ಸಮಯಕ್ಕೆ ಮತ್ತೆ ತನ್ನ ದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡಿಕೊಳ್ಳಲು ಮಾಲ್ಡೀವ್ಸ್ ಈಗ ಭಾರತದ ಕಾಲು ಹಿಡಿಯಲು ಮುಂದಾಗಿದೆ.


          2024ರ ಜನವರಿ 1ರಿಂದ 28ರವರೆಗೆ ಒಟ್ಟಾರೆ 1.74 ಲಕ್ಷ ಪ್ರವಾಸಿಗರು ಮಾಲ್ದೀವ್ಸ್‌ಗೆ ಪ್ರವಾಸಕ್ಕೆ ಹೋಗಿದ್ದರು. ಇವರಲ್ಲಿ ಭಾರತೀಯರ ಸಂಖ್ಯೆ, 13,989ಕ್ಕೆ ಕುಸಿತ ಕಂಡಿದೆ.  2023 ರಲ್ಲಿ 17 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಮಾಲ್ಡೀವ್ಸ್ ಪ್ರವಾಸ ಮಾಡಿದ್ದರಂತೆ. ಈ ಪೈಕಿ ಭಾರತ ಮೂಲದ ಸುಮಾರು 2,09,198 ಪ್ರವಾಸಿಗರು ಮಾಲ್ಡೀವ್ಸ್ ದೇಶಕ್ಕೆ ಭೇಟಿ ನೀಡಿದ್ದರು.

     ಈ ಮಧ್ಯ ಭಾರತದ ಜೊತೆಗೆ ಮಾಲ್ಡೀವ್ಸ್ ಹೊಸ ಅಧ್ಯಕ್ಷ ಕಿರಿಕ್ ಶುರು ಮಾಡಿದ ನಂತರ ಆ ದೇಶದ ಆರ್ಥಿಕತೆ ಮತ್ತು ಪ್ರವಾಸೋದ್ಯಮ ಬೀದಿಗೆ ಬಂದಿದೆ. ಹೀಗಾಗಿ ಖುದ್ದು ಮಾಲ್ಡೀವ್ಸ್ ಅಧಿಕಾರಿ ವರ್ಗ ಈಗ ಭಾರತಕ್ಕೆ ಬಂದು ಭಾರತದ ನಗರಗಳಲ್ಲಿ ರೋಡ್ ಶೋ ಮಾಡಿ ಭಾರತೀಯ ಪ್ರವಾಸಿಗರನ್ನ  ಆಕರ್ಷಿಸಲು ಸಜ್ಜಾಗಿದ್ದಾರೆ.


          ಮಾಲ್ಡೀವ್ಸ್ ನಲ್ಲಿ ಸದ್ಯ ವಾಡಿಕೆಯಷ್ಟು ಪ್ರವಾಸಿಗರು ಇಲ್ಲದೇ ಪರದಾಡು ಸ್ಥಿತಿ ಆರಂಭವಾಗಿದೆ.  ಹೀಗಾಗಿ ಈಗ ಮಾಲ್ಡೀವ್ಸ್ ಅಸೋಸಿಯೇಷನ್ ​​ಆಫ್ ಟ್ರಾವೆಲ್ ಏಜೆಂಟ್ಸ್ ಅಂಡ್ ಟೂರ್ ಆಪರೇಟರ್ಸ್ (MATATO) ಹೊಸ ಯೋಜನೆ ಹಾಕಿಕೊಂಡಿದೆ. ಭಾರತೀಯ ಪ್ರವಾಸಿಗರ ಕೊರತೆಯ ನಡುವೆ, ಎರಡೂ ದೇಶಗಳ ನಡುವಿನ ಪ್ರಯಾಣ & ಪ್ರವಾಸೋದ್ಯಮ ಸಹಕಾರ ಹೆಚ್ಚಿಸುವ ಬಗ್ಗೆ ಭಾರತದ ಹೈಕಮಿಷನರ್ ಜೊತೆ ಮಾಟಾಟೊ ಚರ್ಚಿಸಿದ್ದು, ಭಾರತದಲ್ಲಿನ ಪ್ರಮುಖ ನಗರಗಳಲ್ಲಿ ಈಗ ರೋಡ್ ಶೋ ಮಾಡಿ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದೆ. 
           ಮಾಲ್ದೀವ್ಸ್‌ ಮತ್ತು ಭಾರತದ ನಡುವಿನ ಉಭಯ ದೇಶಗಳ ರಾಜತಾಂತ್ರಿಕ ಬಿಕ್ಕಟ್ಟು ಆರಂಭವಾದಾಗಲಿಂದ ಮಾಲ್ಡೀವ್ಸ್‌ಗೆ ಇಂತಹದೊಂದು ನೂತನ ಸಮಸ್ಯೆ ಎದುರಿಸಬೇಕಾಗಿದೆ . ಪರಿಣಾಮ ದ್ವೀಪರಾಷ್ಟ್ರಕ್ಕೆ ಭೇಟಿ ನೀಡುವ ಭಾರತದ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕುಸಿಯುತ್ತ ಸಾಗಿದೆ. 

          ಮಾಲ್ದೀವ್ಸ್‌ಗೆ ಹೋಗುತ್ತಿದ್ದ ವಿದೇಶಿಯರ ಪೈಕಿ ಭಾರತದ ಪ್ರವಾಸಿಗರ ಸಂಖ್ಯೆ ಮೊದಲ ಸ್ಥಾನದಲ್ಲಿ ಇತ್ತು. ಹೀಗಿದ್ದಾಗ ಭಾರತದ ಜೊತೆಗೆ ಮಾಲ್ಡೀವ್ಸ್ ಕಿರಿಕ್ ಶುರುವಾಗಿತ್ತು. ಕಳೆದ 4 ತಿಂಗಳ ಅವಧಿಯಲ್ಲಿ ಮಾಲ್ಡೀವ್ಸ್‌ ನ ಆರ್ಥಿಕ ಪರಸ್ಥಿತಿಯಲ್ಲಿ ಭಾರಿ ಕುಸಿತ ಕಂಡಿದೆ.  ಆರಂಭದಲ್ಲಿ  ಮೊದಲನೇ ಸ್ಥಾನದಲ್ಲಿ ಭಾರತೀಯ ಪ್ರವಾಸಿಗರ ಸಂಖ್ಯೆ ನೇರವಾಗಿ ಈಗ 5ನೇ ಸ್ಥಾನಕ್ಕೆ ಬಂದು ಬಿಟ್ಟಿದೆ.  ಈ ಮೂಲಕ ಭಾರತದ ಜೊತೆ ಕಿರಿಕ್ ಮಾಡಿದ್ದ ಮಾಲ್ಡೀವ್ಸ್ ಹೊಸ ಅಧ್ಯಕ್ಷನಿಗೆ ಈ ಪರಸ್ಥಿತಿ ನಿಜಕ್ಕೂ ಶಾಕ್  ನೀಡಿದೆ. ಹೀಗಾಗಿ ಅದನ್ನ ಸರಿ ಮಾಡಲು ಈಗ ಮಾಲ್ಡೀವ್ಸ್ ದೇಶದ ಅಧಿಕಾರಿಗಳು ಭಾರತಕ್ಕೆ ಬರಲು ಸಜ್ಜಾಗಿದ್ದಾರೆ.

          ಮಾಲ್ಡೀವ್ಸ್ ಗೆ ಈಗ ʻಮಾಡಿದ್ದುಣ್ಣೊ ಮಹರಾಯʼ ಎನ್ನುವ ಗಾದೆ ಮಾತಿನ ಅರಿವು ಆದಂತಿದೆ. ಈ ಮೂಲಕ ಧ್ವೀಪ ರಾಷ್ಟ್ರ  ಒಂದಷ್ಟು ಬುದ್ಧಿ ಕಲಿತಂತೆ ಕಾಣುತ್ತಿದೆ.

Publisher: ಕನ್ನಡ ನಾಡು | Kannada Naadu

Login to Give your comment
Powered by