ಕನ್ನಡ ನಾಡು | Kannada Naadu

ಭಾರತ ಬಂಗಾರದ ಜಿಂಕೆ...!

12 Apr, 2024

 
 
ಬೆಂಗಳೂರು : ಜಾಗತೀಕ ಮಟ್ಟದಲ್ಲಿ ಚಿನ್ನದ ಆಭರಣಗಳ ಗ್ರಾಹಕರನ್ನು ಹೊಂದಿರುವ ವಿಶ್ವದ ಎರಡನೇ ಅತಿ ದೊಡ್ಡ ರಾಷ್ಟ್ರ ಭಾರತ..! ಸಾಮಾನ್ಯವಾಗಿ ಚಿನ್ನದ ಖರಿದಿಯನ್ನು ಹಣದ ಹೂಡಿಕೆ ಎಂದು ಜಗತ್ತಿನಾಧ್ಯಂತ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಆದರೆ  ನಮ್ಮ ದೇಶದಲ್ಲಿ ಮದುವೆಗಳು, ಹಬ್ಬಗಳು ಹಾಗೂ ಕೆಲವು ಸಂಪ್ರದಾಯಗಳು ಸಹ  ಚಿನ್ನ ಖರಿದಿಗೆ ಕಾರಣವಾಗುತ್ತಿದೆ. 
ದೇಶದ ಚಿನಿವಾರ ಮಾರುಕಟ್ಟೆಯಲ್ಲಿ ಇರುವ ಚಿನ್ನಗಳ ಪೈಕಿ ಸಿಂಹಪಾಲು ಚಿನ್ನವನ್ನು ಮದುವೆಗಳಲ್ಲಿ ವಧುವಿಗೆ ತೊಡಿಸುವ ಆಭರಣಗಳಿಗಾಗಿ ಬಳಕೆಯಾಗುತ್ತಿದೆ.  ಇನ್ನೂ ಭಾರತದಲ್ಲಿ ಚಿನ್ನದ ಆಭರಣಗಳ ಬೇಡಿಕೆಯು ಆರ್ಥಿಕ ಬೆಳವಣಿಗೆ, ಆದಾಯದ ಬೆಳವಣಿಗೆ ಮತ್ತು ಸಂಪತ್ತಿನ ವಿತರಣೆಗಾಗಿ ಬಳಕೆಯಾಗುತ್ತಿರುವುದು ಕಂಡು ಬರುತ್ತದೆ. ನಮ್ಮ ದೇಶದ ಜನಸಂಖ್ಯೆಯನ್ನು ಆಧರಸಿ ನೋಡಿದಾಗ ಸುಮಾರು  1.4 ಬಿಲಿಯನ್ ಜನಸಂಖ್ಯೆಗೂ ಹೆಚ್ಚಿನವರು ಚಿನ್ನ ಮತ್ತು ಚಿನ್ನದ ಆಭರಣಗಳ ಖರಿದಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ.   2009 ರಲ್ಲಿಯೇ ಚಿನ್ನ ಖರಿದಿಸುವ ವ್ಯವಹಾರದಲ್ಲಿ ಚೀನಾ ದೇಶವನ್ನು ನಮ್ಮ ಭಾರತ  ಹಿಂದಿಕ್ಕಿತ್ತು.  ನಂತರದ  ದಶಕಗಳಲ್ಲಿ ಜಾಗತೀಕ ಮಟ್ಟದಲ್ಲಿ ಭಾರತವು ಚಿನ್ನದ ಅತಿದೊಡ್ಡ ಗ್ರಾಹಕನಾಗಿದ್ದರಲ್ಲಿ ಆಶ್ಚರ್ಯವೇನಿಲ್ಲ. 
 
ಚಿನ್ನದ ಮಾರುಕಟ್ಟೆಯು ದೇಶದ ಆರ್ಥಿಕ ಮೌಲ್ಯ ಮಾಪನದ ಆಂತರಿಕ ಭಾಗವಾಗಿದೆ. ಚಿನ್ನ ಹಾಗೂ  ಚಿನ್ನದ ಆಭರಣಗಳ ಖರಿದಿಯಲ್ಲಿ ದೇಶದಲ್ಲಿ ಮಹಿಳೆಯರ ಪಾತ್ರ ಗಣನೀಯವಾಗಿದ್ದರೂ, ಕೆಲವು ಪುರುಷರು ಚಿನ್ನ ಖರಿದಿಯಲ್ಲಿ ಒಲವು ತೋರಿಸುವುದು ಕಂಡು ಬರುತ್ತದೆ. ಕೋವಿಡ್‌ ಪೂರ್ವದಲ್ಲಿ ದೇಶದ ಚಿನಿವಾರ ಪೇಟೆಗೆ 2015 ರಲ್ಲಿ US $ 7.6bn , 2019 ರಲ್ಲಿ US $ 12.4bn ರಷ್ಟು ಚಿನ್ನದ ಆಭರಣಗಳನ್ನು  ರಪ್ತು ಮಾಡಿಕೊಳ್ಳಲಾಗಿತ್ತು. ಜಾಗತೀಕ ಮಟ್ಟದ ಶೇ. 90% ರಷ್ಟು ಚಿನ್ನವನ್ನು ಕೇವಲ ಐದು ರಾಷ್ಟ್ರಗಳಲ್ಲಿ ಮಾರಾಟಮಾಡಲಾಗುತ್ತದೆ.  ಇನ್ನೂ ನಮ್ಮ ದೇಶದಲ್ಲಿ ಚಿನ್ನ ದೇವ ರಿಂದ ಮನುಷ್ಯರವರೆಗೆ ಎಲ್ಲರನ್ನು ತನ್ನತ್ತ ಸೇಳೆದುಕೊಳ್ಳುತ್ತದೆ. 
 
ಭಾರದತಲ್ಲಿ ಅತ್ಯಂತ ಅಧಿಕ ಪ್ರಮಾಣದ ಬಂಗಾರವನ್ನು ಮಹಿಳೆಯರು ಖರಿದಿಸಿದರೂ, ಹೆಚ್ಚು ಆಭರಣಗಳನ್ನು ಮೈಮೇಲೆ ಧರಿಸಿಕೊಂಡು ಓಡಾಡುವವರಲ್ಲಿ ಗಂಡಸರೆ ಮುಂದಿದ್ದಾರೆ.  ಅಂತವರನ್ನು ದೇಶದ ಜನರು ಈಗಾಲೇ ಗುರುತಿಸಿಬಿಟ್ಟಿದ್ದಾರೆ. ಭಾರಿ ಪ್ರಮಾಣದ ಚಿನ್ನವನ್ನು ಧರಿಸುವ ಟಾಪ್‌-10 ಬಂಗಾರದ ಮನುಷ್ಯರು ಒಬ್ಬೊಬ್ಬರು ತಲಾ 5 ರಿಂದ 10 ಕೆಜಿ. ಚಿನ್ನಾಭರಣವನ್ನು ಧರಿಸಿ ಓಡಾಡುವ ಹವ್ಯಾಸ ರೂಢಿಸಿಕೊಂಡವರು.  ಭಾರಿ ಚಿನ್ನ ತೊಡುವ ಖಯಾಲಿ ಮಹಾರಾಷ್ಟ್ರದ ಪುಣೆಯ ಜನರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಒಂದು ಅರ್ಥದಲ್ಲಿ ಅಂಥವರನ್ನು ನಡೆದಾಡುವ ಚಿನ್ನದ ಅಂಗಡಿಗಳು ಎಂದೇ ಕರೆಯಬಹುದು.
 
 
ಭಾರಿ ಚಿನ್ನ ಧರಿಸುವ ಚಿನ್ನಮಯರು


 
  • ಹರ್ಷವರ್ಧನ್ ಪಂಡರ್ಕರ್.   

 ಇತನು ಭಾರತದ ಅತ್ಯಂತ ಕಿರಿಯ ವಯಸ್ಸಿನ ಗೋಲ್ಡನ್ ಮ್ಯಾನ್‌ ಎಂದು ಕರೆಸಿಕೊಳ್ಳುತ್ತಾನೆ. ಪುಣೆ ಮೂಲದ ಹರ್ಷವರ್ಧನ್ ಪಂಡರ್ಕರ್, ಯಾವುದಾದರೂ ಕಾರ್ಯಕ್ರಮಕ್ಕೆ ಹೋಗುವಾಗ ಬರೀಬ್ಬರಿ 10ರಿಂದ 12 ಕೆ.ಜಿ. ಬಂಗಾರದ ಆಭರಣಗಳನ್ನು ತನ್ನ ಮೈಮೇಲೆ ಧರಿಸಿಕೊಂಡು ತೆರಳುವುದು ಅವರ ಹವ್ಯಾಸವಾಗಿದೆ. 


  • ದೀಪಕ್‌ ಪೋಕಲೆ. 
ದೀಪಕ್ ಪೋಕಲೆ ಅವರು ಅತಿಹೆಚ್ಚು ಚಿನ್ನಾಭರಣ ಧರಿಸುವುದರಲ್ಲಿ 9ನೇ ಸ್ಥಾನದಲ್ಲಿದ್ದಾರೆ. ಇವರು ಹಲವು ದೊಡ್ಡ ದೊಡ್ಡ ಸರಗಳನ್ನು ಕುತ್ತಿಗೆಗೆ ಧರಿಸುವ ಜೊತೆಗೆ ಒಂದು ಸರಕ್ಕೆ ಪಪ್ಪಾ-9 ಎಂಬ ಹೆಸರಿನ ದಪ್ಪನಾದ ಲಾಕೆಟ್‌ ಧರಿಸಿಕೊಂಡು ಓಡಾಡುತ್ತಾರೆ. ಇನ್ನು ಇವರು ತಮ್ಮ  10 ಬೆರಳುಗಳು ಕೂಡ ಬಂಗಾರದಿಂದ ತುಂಬಿ ತುಳುಕುತ್ತಿರುತ್ತವೆ.
 
 
ದತ್ತಾತ್ರೇಯ ಫುಗೆ 

 
ಮಹಾರಾಷ್ಟ್ರದ ಪುಣೆಯ ಮತ್ತೊಬ್ಬ ವ್ಯಕ್ತಿ ದತ್ತಾತ್ರೇಯ ಫುಗೆ,  ಇವರು ಕೂಡ ಬಂಗಾರದ ಮನುಷ್ಯರಲ್ಲಿ ಒಬ್ಬರಾಗಿದ್ದಾರೆ. ಇವರು ಸುಮಾರು 6.5 ಕೆ.ಜಿ ಚಿನ್ನಾಭರಣಗಳನ್ನು ಹಾಕಿಕೊಂಡು ಓಡಾಡುತ್ತಿದ್ದ ಇವರು ಇತ್ತೀಚೆಗೆ 3.5 ಕೆ.ಜಿ.ಯ ಬಂಗಾರದ ಅಂಗಿಯನ್ನು (Gold Shirt) ಮಾಡಿಸಿಕೊಂಡು ಎಲ್ಲರ ಗಮನ ಸೆಳೆಯುತ್ತಿದ್ದಾರೆ.
 
ಅಕ್ಷಯ್ ಬಾರ್ನೆ 

 ಪುಣೆ ಮೂಲದ ಅಕ್ಷಯ್ ಬಾರ್ನೆ,  ಅವರು ದೇಶದಲ್ಲಿ ಅತಿಹೆಚ್ಚು ಚಿನ್ನಾಭರಣಗಳನ್ನು ಧರಿಸಿ ಓಡಾಡುವವ 10 ಜನರಲ್ಲಿ ಇವರು ಒಬ್ಬರಾಗಿದ್ದಾರೆ. ಇವರು ತಮ್ಮ ಬಳಿ ಐಷಾರಾಮಿ ಕಾರುಗಳನ್ನು ಹೊಂದಿದ್ದು, ಮದುವೆ ಹಾಗೂ ಇತರೆ ಕಾರ್ಯಕ್ರಮಗಳಿಗೆ ಮೈಮೇಲೆ ಸುಮಾರು 3 ರಿಂದ 6 ಕೆ.ಜಿವರೆಗೆ ಚಿನ್ನಾಭರಣಗಳನ್ನ ಧರಿಸಿಕೊಂಡು ಬರುತ್ತಾರೆ. 
 
 
ನಿಶಿಕಾಂತ್ ಮಲ್ಲವ್


ಮಹಾರಾಷ್ಟ್ರ ಪುಣೆ ಮೂಲದ ಮಲ್ಲವ್ ಅಂಡ್ ಸನ್ಸ್ ಪ್ರೈವೇಟ್‌ ಲಿ. ನಿರ್ದೇಶಕರಾದ ನಿಶಿಕಾಂತ್ ಮಲ್ಲವ್ ಬಂಗಾರದ ಆಭರಣಗಳನ್ನು ಧರಿಸಿ ರೀಲ್ಸ್‌ ಮಾಡಿ ತಮ್ಮ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ.
 
 ಆಕಾಶ್ ಮಲ್ಲವ್ 

ಪುಣೆಯ ಮಲ್ಲವ್ ಅಂಡ್ ಸನ್ಸ್ ಪ್ರೈವೇಟ್‌ ಲಿ. ನಿರ್ದೇಶಕರಾದ ನಿಶಿಕಾಂತ್ ಮಲ್ಲವ್ ಅವರ ಸಹೋದರರಾದ ಆಕಾಶ್ ಮಲ್ಲವ್ ಕೂಡ ಚಿನ್ನಾಭರಣ ಧರಿಸುವುದಲ್ಲಿ ನಿಸ್ಸೀಮರು. ಆಕಾಶ್ ಮತ್ತು ನಿಶಿಕಾಂತ್ ಅವರನ್ನು ಗೋಲ್ಡನ್ ಬ್ರದರ್ಸ್‌ ಎಂದು ಕರೆಯಲಾಗುತ್ತದೆ.
 
ಸಂಜಯ್ ಗುಜಾರ್ 

ಸಂಜಯ್ ಗುಜಾರ್ ಅವರು  ಭಾರತೀಯ ಉದ್ಯಮಿ, ನಟ, ರೂಪದರ್ಶಿ ಮತ್ತು ಚಲನಚಿತ್ರ ವಲಯದಲ್ಲಿ ಪೈನಾನ್ಸ್‌ರ್‌ ಎಂದು ಗುರುತಿಸಿಕೊಂಡಿದ್ದಾರೆ. ಇವರೂ ಸಹ  ಮಹಾರಾಷ್ಟ್ರದ ಪುಣೆ ಮೂಲದವರು. ಸಂಜಯ್ ಗುಜಾರ್ ಮತ್ತು  ಭಾರತೀಯ ಉದ್ಯಮಿ ಸನ್ನಿ ವಾಘಚೌರೆ ಅತ್ಯಾಪ್ತ ಸ್ನೇಹಿತನಾಗಿದ್ದಾನೆ. ಇವರಿಬ್ಬರನ್ನುದೇಶದ ಗೋಲ್ಡನ್ ಗೈಸ್ ಎಂದು ಕರೆಯಲಾಗುತ್ತದೆ. 
 
ಪ್ರಶಾಂತ್ ಲಕ್ಷ್ಮಣ್ ಸಪ್ಕಲ್ 

ಇವರೂ ಸಹ  ಪುಣೆ ಮೂಲಕದವರು. ಪ್ರಶಾಂತ್ ಲಕ್ಷ್ಮಣ್ ಸಪ್ಕಲ್ ಅವರು ಕೂಡ ಅತಿಹೆಚ್ಚು ಬಂಗಾರ ಧರಿಸುವ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಇವರು ಮೈಮೇಲೆ ಸಾಮಾನ್ಯ ದಿನಗಳಲ್ಲಿಯೂ ಕನಿಷ್ಟ ಎಂದರೂ 5 ಕೆ.ಜಿ. ಭಂಗಾರವನ್ನು ಧರಿಸಿಕೊಂಡಿರುತ್ತಾರೆ. ಇವರು ಬಡ ಜನರಿಗೆ ಸಹಾಯ ಮಾಡಲೆಂದೇ ಎನ್‌.ಎಸ್‌.ಎಸ್‌ ಎಂಬ ಸಂಸ್ಥೆಯೊಂದನ್ನು ಆರಂಭಿಸಿದ್ದಾರೆ.
 
ವೈಭವ್ ಬೊರಾಟೆ 


ಮೈಮೇಲೆ ಸುಮಾರು 6 ಕೆ.ಜಿಯಿಂದ 8 ಕೆ.ಜಿವರೆಗೆ ಬಂಗಾರವನ್ನು ಧರಿಸುವ ವೈಭವ್ ಬೊರಾಟೆ ಅವರು ಕೂಡ ಭಾರತದ ಚಿನ್ನದ ಮನುಷ್ಯ ಎಂದೇ ಖ್ಯಾತಿಯಾಗಿದ್ದಾರೆ. ಇವರು ಹೆಚ್ಚಾಗಿ ದುಬಾರಿ ಮತ್ತು ಐಷಾರಾಮಿ ಕಾರನ್ನು ಸಂಗ್ರಹಿಸುವ ಹವ್ಯಾಸ ಹೊಂದಿದ್ದಾರೆ.
 
ಸನ್ನಿ ವಾಘಚೌರೆ.


ಸನ್ನಿ ವಾಘಚೌರೆ ಒಬ್ಬ ಭಾರತೀಯ ಉದ್ಯಮಿ ಮತ್ತು ಚಲನಚಿತ್ರ ನಿರ್ಮಾಪಕ. ಪುಣೆಯ ಚಿನ್ನದ ಮನುಷ್ಯ ಎಂದು ಪ್ರಸಿದ್ಧರಾಗಿದ್ದಾರೆ. ಈಗ 34 ವರ್ಷದವರಾಗಿರುವ ಇವರು ಮೈತುಂಬಾ ಚಿನ್ನಾಭರಣ ಧರಿಸುತ್ತಾರೆ. ಇವರು ತಮ್ಮ ಕಾರು, ಶೂಶ್, ಮೊಬೈಲ್ ಕವರ್ ಎಲ್ಲವೂ ಚಿನ್ನದ್ದನ್ನೇ ಮಾಡಿಸಿಕೊಂಡು ದೇಶದ ಜನರ ಗಮನ ಸೇಳೆಯುತ್ತಿದ್ದಾರೆ. 

Publisher: ಕನ್ನಡ ನಾಡು | Kannada Naadu

Login to Give your comment
Powered by