ಕಳೆದ ನಾಲ್ಕು ವರ್ಷಗಳಲ್ಲಿ ದೇಶದಲ್ಲಿ ಬರೋಬ್ಬರಿ 56,701 ಕಿ.ಮೀ. ಹೆದ್ದಾರಿ ನಿರ್ಮಾಣ ಮಾಡಲಾಗಿದೆ ...
11 Apr, 2024
ಬೆಂಗಳೂರು: ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ಹೊಸ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಕಾರ್ಯ ನಿರಂತರ ನಡೆಯುತ್ತಿದೆ. ಇನ್ನೂ ಕೆಲವು ಕಡೆಗಳಲ್ಲಿ ಹಳೆಯ ಹೆದ್ದಾರಿಗಳ ಅಭಿವೃದ್ಧಿ ಕಾರ್ಯಗಳನ್ನು ಸಹ ಕೈಗೆತ್ತಿಕೊಳ್ಳಲಾಗುತ್ತಿದೆ. 2019ರಿಂದ ಇಲ್ಲಿವರೆಗೆ ರಾಷ್ಟ್ರೀಯ ಹೆದ್ದಾರಿ ಪ್ರಧಿಕಾರ ಬರೋಬ್ಬರಿ 56,701 ಕಿ.ಮೀ. ಹೆದ್ದಾರಿಯನ್ನು ಸಿದ್ದಪಡಿಸಿದೆ. ಈ ಕುರಿತು ಹೆದ್ದಾರಿ ಪ್ರಾಧಿಕಾರದ ಮೂಲದಿಂದ ಸ್ಪಷ್ಟ ಮಾಹಿತಿ ಲಭ್ಯವಾಗಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಕಳೆದ ನಾಲ್ಕು ವರ್ಷಗಳಿಂದ ನಿರಂತರ ಹೊಸ ಹೆದ್ದಾರಿ ನಿರ್ಮಾಣ ಅಥವಾ ಇದ್ದ ಹೆದ್ದಾರಿಗಳ ಪುನರ್ ನಿರ್ಮಾಣದಲ್ಲಿ ನಿರಂತರವಾಗಿ ತೊಡಗಿಕೊಂಡಿದೆ. ದೇಶದಲ್ಲಿ 2019-20ರಲ್ಲಿ 10,237 ಕಿಲೋ ಮೀಟರ್‌ನಷ್ಟು ಹೆದ್ದಾರಿ ನಿರ್ಮಾಣ ಮಾಡಲಾಗಿದೆ. 2020-21ರಲ್ಲಿ 13,327 ಕಿಲೋ ಮೀಟರ್‌ನಷ್ಟು ಹೆದ್ದಾರಿ ನಿರ್ಮಾಣ ಮಾಡಿದ್ದು, ಇದು ನಾಲ್ಕುವರ್ಷಗಳಲ್ಲಿ ಅತಿ ಹೆಚ್ಚಿನ ದಾಖಲೆಯಾಗಿದೆ. 2021-22ರಲ್ಲಿ 10,457 ಕಿಲೋ ಮೀಟರ್, 2022-23ರಲ್ಲಿ 10,331 ಕಿಲೋ ಮೀಟರ್ ಹಾಗೂ 2023-24ನೇ ಆರ್ಥಿಕ ವರ್ಷದಲ್ಲಿ 12,349 ಕಿಲೋ ಮೀಟರ್‌ನಷ್ಟು ಹೆದ್ಧಾರಿ ನಿರ್ಮಾಣ ಮಾಡಿದ್ದು, ಇದು ಸಚಿವಾಲಯದ ಇತಿಹಾಸದಲ್ಲಿ ಎರಡನೇ ದೊಡ್ಡ ದಾಖಲೆ ಆಗಿದೆ.
ಇನ್ನೂ 2023-2024ರಲ್ಲಿ 8,581 ಕಿಲೋ ಮೀಟರ್ ಹದ್ದಾರಿ ಪ್ರಜೆಕ್ಟ್‌ಗಳಿಗೆ ಸಚಿವಾಯಲವು ಅನುಮೋದನೆ ನೀಡಿದ್ದು, ಇದಕ್ಕೆ ಖಾಸಗಿ ಹೂಡಿಕೆಯು ಸೇರಿ ಒಟ್ಟು ಬಂಡವಾಳ ವೆಚ್ಚವು 3.01 ಲಕ್ಷ ಕೋಟಿ ಆಗಿದೆ ಎಂದು ಎಂದು ಪ್ರಾಧಿಕಾರದ ಅಧಿಕೃತ ಮೂಲದಿಂದ ಮಾಹಿತಿ ತಿಳಿದು ಬಂದಿದೆ.
ದೇಶದ ಹಲವೆಡೆ ಹೆದ್ದಾರಿಗಳ ಅಭಿವೃದ್ಧಿ ಆಗುತ್ತಲೇ ಇದೆ. ಹಾಗೆಯೇ 2024ರೊಳಗೆ ಅಂದರೆ ಈ ವರ್ಷದೊಳಗೆ ಇನ್ನು 5 ಹೊಸ ಎಕ್ಸ್‌ಪ್ರೆಸ್ ವೇಗಳು ಉದ್ಘಾಟನೆಯಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕಾರ್ಯಹಂತದಲ್ಲಿ ಇರುವ ಹೊಸ ಹೆದ್ದಾರಿಗಳ ಸಂಪೂರ್ಣ ಮಾಹಿತಿಗಳು ಇಂತಿದೆ.

* ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ.
ದಕ್ಷಿಣ ಭಾರತದ ಎರಡು ಬೃಹತ್ ನಗರಗಳನ್ನು ಸಂಪರ್ಕಿಸುವ ಈ ಹೆದ್ದಾರಿಯಿಂದ ಪ್ರಯಾಣದ ಸಮಯವನ್ನು ಕಡಿಮೆ ಆಗಲಿದೆ. ಇದು ಕರ್ನಾಟಕ ಮತ್ತು ತಮಿಳುನಾಡು ನಡುವೆ ವ್ಯಾಪಾರ, ಪ್ರವಾಸೋದ್ಯಮದ ಕೇಂದ್ರಗಳ ಅಭಿವೃದ್ಧಿಗೆ ಸಹಾಯ ಆದಂತಾಗುತ್ತದೆ. ಅಲ್ಲದೆ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುತ್ತದೆ.
* ಮುಂಬೈ-ದೆಹಲಿ ಎಕ್ಸ್‌ಪ್ರೆಸ್‌ವೇ.
ಬಹು ನಿರೀಕ್ಷಿತ ಯೋಜನೆಗಳಲ್ಲಿ ಒಂದಾಗಿದ್ದು, ಇದರಿಂದ ಎರಡು ಪ್ರಮುಖ ಮಹಾನಗರಗಳ ನಡುವಿನ ಪ್ರಯಾಣವನ್ನು ಸುಗಮಗೊಳಿಸಲು ಅನುಕೂಲ ಆದಂತಾಗಲಿದೆ. 1,200 ಕಿಲೋ ಮೀಟರ್‌ಗಳಷ್ಟು ವಿಸ್ತರಿಸಿರುವ ಈ ಎಕ್ಸ್‌ಪ್ರೆಸ್‌ವೇ ಮುಂಬೈ ಮತ್ತು ದೆಹಲಿ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡಲಿದೆ. ಈ ಹೆದ್ದಾರಿ ನಿರ್ಮಾಣದಿಂದ ಪ್ರಯಾಣಿಕರಿಗೆ ಅತ್ಯಾಧುನಿಕ ಸೌಲಭ್ಯಗಳಗಳು ಒದಗಿಸಿದಂತಾಗಿತ್ತದೆ. ಇನ್ನು ಇಲ್ಲಿ ಪ್ರಯಾಣಿಕರಿಗೆ ಉತ್ತಮ ಸೇವೆಗಳು, ವಿಶ್ರಾಂತಿ ವಲಯಗಳನ್ನು ನಿರ್ಮಾಣ ಮಾಡಲಾಗಿದೆ.
*ಕೋಲ್ಕತ್ತಾ-ಜಾರ್ಖಂಡ್ ಎಕ್ಸ್‌ಪ್ರೆಸ್‌ವೇ.
ಪೂರ್ವ ಪ್ರದೇಶದಲ್ಲಿ ಮೂಲಸೌಕರ್ಯವನ್ನು ಹೆಚ್ಚಿಸಲು ಸಹಕಾರಿಯಾಗಲಿದೆ. ಜಾರ್ಖಂಡ್‌ನ ಕೈಗಾರಿಕಾ ಕೇಂದ್ರದೊಂದಿಗೆ ಸಂಪರ್ಕಿಸುವ ಈ ಎಕ್ಸ್‌ಪ್ರೆಸ್‌ವೇ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸಲು, ಹೂಡಿಕೆಗಳ ಆಕರ್ಷಣೆಗೆ ಪ್ರಮುಖ ಪಾತ್ರ ವಹಿಸಲಿದೆ. ಹಾಗೆಯೇ ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್‌ನಲ್ಲಿನ ಪ್ರಮುಖ ಕೇಂದ್ರಗಳನ್ನು ಸಂಪರ್ಕಿಸುವಲ್ಲಿ ಇದರ ಪಾತ್ರ ವಹಿಸಲಿದೆ.
* ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇ
ಈ ಮಾರ್ಗವು ಪ್ರಯಾಣಿಕರ ಸೇವೆಗೆ ಈಗಾಗಲೇ ಲಭ್ಯವಿದ್ದು, ಇನ್ನು ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡಲಿ ಇದನ್ನು ವಿಸ್ತರಣೆ ಮಾಡಲಾಗುತ್ತದೆ. ಈ ವಿಸ್ತರಣೆಯಿಂದ ಮತ್ತಷ್ಟು ನೆರೆಯ ಪ್ರದೇಶಗಳಿಗೆ ಸಂಪರ್ಕ ಸಾಧಿಸಲು ಸಹಾಯ ಆದಂತಾಗುತ್ತದೆ. ಅಲ್ಲದೆ ಘಾಜಿಯಾಬಾದ್ ಮತ್ತು ಮೀರತ್‌ನಂತಹ ಪ್ರದೇಶಗಳಲ್ಲಿ ಅಭಿವೃದ್ಧಿಯನ್ನು ಕಾಣಬಹುದು. ಇನ್ನು ಈ ಯೋಜನೆಯು ನವದೆಹಲಿಯ ಸಂಚಾರ ದಟ್ಟಣೆಯನ್ನು ನಿವಾರಿಸುವ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಬೆಳವಣಿಗೆಯನ್ನು ಉತ್ತೇಜಿಸಲು ಪ್ರಮುಖ ಪಾತ್ರವಹಿಸಲಿದೆ.
* ಅಮೃತಸರ-ಜಾಮ್‌ನಗರ ಎಕ್ಸ್‌ಪ್ರೆಸ್‌ವೇ
ವಾಯುವ್ಯದಲ್ಲಿ ಸಂಪರ್ಕವನ್ನು ಹೆಚ್ಚಿಸಲು ಸಹಾಯ ಆದಂತಾಗಲಿದೆ. ಪಂಜಾಬ್‌ನ ಅತೀ ದೊಡ್ಡ ನಗರವಾದ ಅಮೃತಸರವನ್ನು ಗುಜರಾತ್‌ನ ಜಾಮ್‌ನಗರದ ಕೈಗಾರಿಕಾ ಕೇಂದ್ರದೊಂದಿಗೆ ಈ ಎಕ್ಸ್‌ಪ್ರೆಸ್‌ವೇ ಸಂಪರ್ಕಿಸಲಿದ್ದು, ವ್ಯಾಪಾರ, ಪ್ರವಾಸೋದ್ಯಮದ ಉತ್ತೇಜನಕ್ಕೆ ಸಹಕಾರಿಯಾಗಲಿದೆ. ಅಲ್ಲದೆ ಇಲ್ಲಿ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಇದರ ಪಾತ್ರ ಪ್ರಮುಖವಾಗಿದೆ.
ದೇಶದ ಎಲ್ಲಾ ಹೆದ್ದಾರಿಗಳಲ್ಲಿ, ಯಾವುದೇ ಸಂದರ್ಭದಲ್ಲಿ ರಸ್ತೆ ಅಪಘಾತವಾಗಿ ಗಾಯಗೊಂಡವರಿಗೆ ನಗದುರಹಿತ ಚಿಕಿತ್ಸೆಗೆ ಅವಕಾಶ ಇರುತ್ತದೆ. ಈ ಸಂಬಂಧಿಸಿದಂತೆ ಸರ್ಕಾರವು ಪ್ರಾಯೋಗಿಕ ಯೋಜನೆಗೆ ಚಾಲನೆ ನೀಡಿದೆ. ಈ ಯೋಜನೆಯಡಿಯಲ್ಲಿ ಗಾಯಾಳುಗಳು 1.5ಲಕ್ಷ ರೂ. ದವರೆಗೂ ಚಿಕಿತ್ಸೆ ಪಡೆಯಬಹುದಾಗಿದ ಎನ್ನುವ ಪ್ರಮುಖ ಮಾಹಿತಿಯನ್ನು ಸಹ ಹೆದ್ದಾರಿ ಪ್ರಾಧಿಕಾರದ ಮೂಲಗಳಿಂದ ತಿಳಿದು ಬಂದಿದೆ.
Publisher: ಕನ್ನಡ ನಾಡು | Kannada Naadu