ಭಾರತೀಯ ಷೇರು ಮಾರುಕಟ್ಟೆ ಮೌಲ್ಯವಿಗ 400 ಲಕ್ಷ ಕೋಟಿ ರೂಪಾಯಿ..!
10 Apr, 2024
ಬೆಂಗಳೂರು: ಜಗತ್ತಿನಲ್ಲಿ ಅಮೆರಿಕ, ಯುರೋಪ್ ಸೇರಿದಂತೆ ಹಲವು ದೇಶಗಳ ಷೇರು ಪೇಟೆಯ ಸೂಚ್ಯಂಕ ನೆಲಕಚ್ಚುವಾಗ, ಭಾರತದ ಷೇರು ಪೇಟೆ ಸದ್ದು ಮಾಡುತ್ತಿದೆ. ಅದರಲ್ಲೂ ಈ ಸಮಯದಲ್ಲಿ ಭಾರತೀಯ ಷೇರು ಮಾರುಕಟ್ಟೆ ರಾಕೆಟ್ ವೇಗದಲ್ಲಿ ಮುನ್ನುಗ್ಗುತ್ತಿದೆ. ಹೀಗೆ ಹೂಡಿಕೆದಾರರು ಕೂಡ ಇದರಿಂದ ಖುಷಿಯಾಗಿದ್ದಾರೆ.

ಆರ್ಥಿಕವಾಗಿ ನಮ್ಮ ದೇಶ ಬಲಿಷ್ಠ ರಾಷ್ಟ್ರಗಳಿಗೂ ಚಾಲೆಂಜ್ ಹಾಕುವ ರೀತಿ ಬೆಳೆದು ಬಿಟ್ಟಿದೆ. ಭಾರತ ಈಗಾಗಲೇ ಟಾಪ್ 5 ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಸದ್ಯದಲ್ಲೇ ನಮ್ಮ ದೇಶವನ್ನ 5 ಟ್ರಿಲಿಯನ್ ಆರ್ಥಿಕತೆ ಸ್ಥಾನಕ್ಕೆ ಕೊಂಡೊಯ್ಯಲು ಕೇಂದ್ರ ಸರ್ಕಾರ ಪ್ರಯತ್ನ ಆರಂಭಿಸಿದೆ. ಇದೇ ಸಮಯದಲ್ಲಿ ಷೇರು ಮಾರುಕಟ್ಟೆ ಕೂಡ ಐತಿಹಾಸಿಕ ಮಟ್ಟ ತಲುಪಿದೆ.
ಸದ್ಯ ಷೇರು ಮಾರುಕಟ್ಟೆ ಭಾರಿ ಲಾಭ ಗಳಿಸಿದ್ದು ಸಾರ್ವಕಾಲಿಕ ಏರಿಕೆಯ ಮಟ್ಟ ತಲುಪಿದೆ. ಭಾರತದ ಬಂಡವಾಳ ಮಾರುಕಟ್ಟೆಯ ಪ್ರಮುಖ ಸೂಚ್ಯಂಕಗಳಾದ ಬಿಎಸ್ಇ ಸೆನ್ಸೆಕ್ಸ್ (BSE Sensex) ಸೇರಿ ಎನ್ಎಸ್ಇ ನಿಫ್ಟಿ ಹೊಸ ದಾಖಲೆ ಬರೆಯುತ್ತಿವೆ. ಇಷ್ಟೆಲ್ಲಾ ಸಾಧನೆ ಮಧ್ಯೆ ಈಗ ಷೇರು ಪೇಟೆಯ ಮೌಲ್ಯ ₹400 ಲಕ್ಷ ಕೋಟಿಗೆ ಏರಿಕೆ ಕಾಣುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ. ಇದು ಈ ದೇಶದ ಷೇರು ಪೇಟೆಯ ಬಲವನ್ನು ತೋರಿಸುತ್ತಿದೆ ಎಂಬುವುದು ಷೇರು ಮಾರುಕಟ್ಟೆ ವಿಶ್ಲೇಷಕರ ಅಭಿಪ್ರಾಯ. ಅದ್ರಲ್ಲೂ ಕಳೆದ ಕೆಲವು ತಿಂಗಳಿಂದ ನಿರಂತರವಾಗಿ ಭಾರತೀಯ ಷೇರು ಪೇಟೆ ಲಾಭದ ಮೇಲೆ ಲಾಭ ಮಾಡುತ್ತಿದೆ.
ಮುಂಬೈ ಷೇರು ಪೇಟೆಯ ಸೂಚ್ಯಂಕದಲ್ಲಿ ನೋಂದಾಯಿತ ಕಂಪನಿಗಳ ಮಾರುಕಟ್ಟೆ ಮೌಲ್ಯ ₹400 ಲಕ್ಷ ಕೋಟಿಗೆ ಏರಿಕೆ ಕಂಡು ಇಡೀ ಜಗತ್ತಿನ ಗಮನವನ್ನು ಸೆಳೆದಿದೆ. ಈ ಹಿಂದೆ 2023ರ ಜುಲೈ ತಿಂಗಳಲ್ಲಿ ಎಂ-ಕ್ಯಾಪ್ ₹300 ಲಕ್ಷ ಕೋಟಿ ರೂಪಾಯಿ ದಾಟಿ ದಾಖಲೆ ಬರೆದಿತ್ತು. ಈ ಮಧ್ಯೆ ಇದೀಗ ಇನ್ನೂ ಒಂದು ಹಂತವನ್ನು ದಾಟಿದೆ ಭಾರತೀಯ ಷೇರು ಮಾರುಕಟ್ಟೆ. ಈ ಮೂಲಕ ಭಾರತೀಯ ಷೇರು ಮಾರುಕಟ್ಟೆ ಹೆಜ್ಜೆ ಇಟ್ಟಿರುವುದು ಹೂಡಿಕೆದಾರರ ಸೆಳೆಯುತ್ತಿದೆ. ಹೆಚ್ಚು ದುಡ್ಡು ಓಡಾಡುವ ಜಾಗ! ದೇಶದ ಆರ್ಥಿಕತೆಯಲ್ಲಿ ಹೆಚ್ಚು ದುಡ್ಡು ಓಡಾಡುವ ಜಾಗ ಷೇರು ಮಾರುಕಟ್ಟೆ ಅಂತಾರೆ.
ಆದರೆ ಈ ಮಾತು ಅದೆಷ್ಟು ನಿಜಾನೋ ಅಥವಾ ಅದೆಷ್ಟು ಸುಳ್ಳೋ ಗೊತ್ತಿಲ್ಲ. ಆದರೂ ಷೇರು ಪೇಟೆ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತ ಇದೆ. ಈಗಲೂ ಅದೇ ರೀತಿ ಹೂಡಿಕೆ ಮಾಡಿದವರಿಗೆಲ್ಲ ಭರ್ಜರಿ ಹಣವೂ ಸಿಗುತ್ತಿದೆ. ಮತ್ತೊಂದು ಕಡೆ ಮುಂದಿನ ವರ್ಷಗಳಲ್ಲಿ ಭಾರತೀಯ ಷೇರು ಪೇಟೆ ಮತ್ತಷ್ಟು ಮೇಲೆ ಅಂದರೆ ಉನ್ನತ ಹಂತಕ್ಕೆ ತಲುಪುವ ನಿರೀಕ್ಷೆ ಇದೆ. ಹೀಗಾಗಿಯೇ ಭಾರತೀಯ ಹೂಡಿಕೆದಾರರು ಈ ಬೆಳವಣಿಗೆಯಿಂದ ಖುಷಿಯಾಗಿದ್ದಾರೆ.
Publisher: ಕನ್ನಡ ನಾಡು | Kannada Naadu