ಕನ್ನಡ ನಾಡು | Kannada Naadu

ಈಶ್ವರಪ್ಪಗೆ ಕೈ ಮುಗಿದು ಕೇಳಿಕೊಳ್ತೀನಿ, ನೋವು ಮರೆತು ಪಕ್ಷದೊಂದಿಗೆ ಕೈಜೋಡಿಸಿ ಎಂದ ಬಿ.ವೈ.ವಿಜಯೇಂದ್ರ

07 Apr, 2024

 ಬೆಂಗಳೂರು : ಪುತ್ರ ಕಾಂತೇಶ್ ಗೆ ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಬಂಡಾಯ ಸಾರಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಬಿಜೆಪಿಗೆ ಇಕ್ಕಟ್ಟಿನ ಸ್ಥಿತಿ ಎದುರಾಗಿದೆ. ಯಾರ ಮನವೊಲಿಕೆಗೂ ಬಗ್ಗದ ಈಶ್ವರಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಖಚಿತ ಎಂದಿದ್ದಾರೆ.

ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ನೋವು ಮರೆತು ಪಕ್ಷದೊಂದಿಗೆ ಕೈ ಜೋಡಿಸಿ ಎಂದು ಮನವಿ ಮಾಡಿದ್ದಾರೆ.

ಈಶ್ವರಪ್ಪನವರಿಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಏನೇ ನೋವುಗಳಿದ್ದರೂ ಎಲ್ಲವನ್ನೂ ಮರೆತು ಪಕ್ಷದೊಂದಿಗೆ ಕೈಜೋಡಿಸಿ. ಬಿ.ವೈ.ರಾಘವೇಂದ್ರ ಗೆಲುವಿಗೆ ಬೆಂಬಲಿಸಿ ಎಂದು ಮನವಿ ಮಾಡಿದ್ದಾರೆ.

ಒಟ್ಟಾರೆ ಈಶ್ವರಪ್ಪ ಮನವೊಲಿಕೆಗೆ ಕೊನೆ ಹಂತದ ಪ್ರಯತ್ನ ನಡೆದಿದೆ. ಕೊನೇ ಕ್ಷಣದಲ್ಲಿ ಈಶ್ವರಪ್ಪ ತಮ್ಮ ನಿರ್ಧಾರ ಬದಲಿಸಲಿಸಿ ರಾಘವೇಂದ್ರಗೆ ಬೆಂಬಲ ಕೊಡುತ್ತಾರಾ? ಕಾದುನೋಡಬೇಕಿದೆ.

Publisher: ಕನ್ನಡ ನಾಡು | Kannada Naadu

Login to Give your comment
Powered by