ಬೆಳಗಾವಿ: ಲೋಕಸಭಾ ಕ್ಷೇತ್ರ ದಿಂದ ಸ್ಪರ್ಧಿಸುವುದಾಗಿ ಹೇಳಿದ್ದ ಕಿತ್ತೂರು ದೇಗುಲ ಹಳ್ಳಿ -ಅಂಬಡಗಟ್ಟಿ
ಮಡಿವಾಳೇಶ್ವರ ಮಠದ ವೀರೇಶ್ವ ರ ಸ್ವಾಮೀಜಿ ಇದೀಗ ಕ್ಷೇತ್ರ ಬದಲಿಸುವ ತಿರ್ಮಾನ ಮಾಡಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರದ ಎಂಟು ಮತಕ್ಷೇತ್ರದಲ್ಲಿ ನನ್ನ ಭಕ್ತರಿದ್ದಾರೆ. ಅವರ ಒತ್ತಾಯದಿಂದ
ಬೆಳಗಾವಿ ಲೋಕಸಭಾ ಕ್ಷೇತ್ರ ದಿಂದ ಸ್ಪರ್ಧೆ ನಡೆಸುವುದಾಗಿ ಸ್ವಾಮೀಜಿ ಆರಂಭದಲ್ಲಿ ಹೇಳಿದ್ದರು. ಈಗ ಮೊದಲ ನಿರ್ಧಾರವನ್ನು ಬದಲಿಸಿರುವ ಸ್ವಾಮೀಜಿ, ಕಿತ್ತೂರು ಮತ ಕ್ಷೇತ್ರವು ಉತ್ತರ ಕನ್ನಡ ಲೋಕಸಭಾ ವ್ಯಾಕ್ತಿಗೆ ಬರುತ್ತಿರುವುದರಿಂದ ತಾವು ಈ ಕ್ಷೇತ್ರ ದಿಂದ ಸ್ಪರ್ಧಿಸುತ್ತಿದ್ದೇನೆ ಎಂದು ಘೋಷಿಸಿದ್ದಾರೆ. ಮಠದ ಸ್ವಾಮೀಜಿಯಾಗಿ ಸೇವೆ ಸಲ್ಲಿಸುತ್ತಿರುವ ನಾನು ಸಮಾಜ ಸೇವೆಮಾಡಬೇಕು. ಉತ್ತಮ ಆಡಳಿತ ನೀಡುವ ಉದ್ದೇಶ ದಿಂದ ಚುನಾವಣಾ ಕಣಕ್ಕಿ ಳಿಯುತ್ತಿದ್ದೇನೆ. ಇದ ನನ್ನ ವೈಯಕ್ತಿಕ ಹಾಗೂ ಭಕ್ತರ ಇಚ್ಛೆಯಾಗಿದೆ ಎಂದು ಅವರು ಸ್ಪ ಷ್ಟ ಪಡಿಸಿದ್ದಾರೆ.
ಈಗಾಗಲೇ ಕಿತ್ತೂರು ಹಾಗೂ ಖಾನಾಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಭೆ ನಡೆಸಲಾಗಿದ್ದು , ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಜನ ಸದಾ ನನ್ನೊಂದಿಗೆ ಇದ್ದು ಚುನಾವಣೆಯಲ್ಲಿ ಬೆಂಬಲಿಸುವುದಾಗಿ ವಿಶ್ವಾಸ ನೀಡಿದ್ದಾರೆ ಎಂದು
ಸ್ವಾಮೀಜಿ ಸ್ಪಷ್ಟ ಪಡಿಸಿದ್ದಾರೆ.
ಧಾರವಾಡ ಲೋಕಸಭಾ ಕ್ಷೇತ್ರ ದಲ್ಲಿ ಪ್ರಹ್ಲಾದ ಜೋಶಿ ವಿರುದ್ಧ ದಿಂಗಾಲೇಶ್ವ ರ ಸ್ವಾಮೀಜಿ ಸ್ಪರ್ಧಿಸುತ್ತಿದ್ದಾರೆ. ಆದರೆ, ನನಗೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಒಂದೇ. ಜನ ಸೇವೆ ಮಾಡುವ ಉದ್ದೇಶ ದಿಂದ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿ ಳಿಯುತ್ತಿದ್ದೇ ನೆ ಎಂದು ತಿಳಿಸಿದ್ದಾರೆ.
Publisher: ಕನ್ನಡ ನಾಡು | Kannada Naadu