ಕಾಂಗ್ರೆಸ್ ಘೋಷಿಸಿರುವ 25 ಗ್ಯಾರಂಟಿ ಯೋಜನೆಗಳಲ್ಲಿ ಇರುವುದೇನು?
07 Apr, 2024
ಕಾಂಗ್ರೆಸ್ 2024ರ ಲೋಕಸಭೆ ಚುನಾವಣೆಗೆ ಒಟ್ಟಾರೆ 25 ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ. ಅವುಗಳೇನು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
- ಮಹಾಲಕ್ಷ್ಮೀ ಯೋಜನೆಯಡಿ ಪ್ರತಿ ಬಡ ಕುಟುಂಬಕ್ಕೆ ಯಾವುದೇ ಷರತ್ತುಗಳಿಲ್ಲದೇ ವರ್ಷಕ್ಕೆ 1 ಲಕ್ಷ ರೂ. ಹಣ ವರ್ಗಾವಣೆ
- ಪ್ರತೀ ತಾಲೂಕಿನಲ್ಲಿ ಒಂದು ಸರ್ಕಾರಿ ಸಮುದಾಯ ಕಾಲೇಜು, 12ನೇ ತರಗತಿವರೆಗೆ ಎಲ್ಲರಿಗೂ ಉಚಿತ, ಶೈಕ್ಷಣಿಕ ಸಾಲ ಮನ್ನಾ
- 10 ವರ್ಷಗಳ ಅವಧಿಯಲ್ಲಿ 23 ಕೋಟಿ ಮಂದಿಯನ್ನು ಬಡತನದಿಂದ ಮೇಲಕ್ಕೆ ಎತ್ತುವ ಭರವಸೆ
- ಜಾತಿ/ಉಪಜಾತಿಗಳ ಹಾಗೂ ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ಅರಿಯಲು ದೇಶದಾದ್ಯಂತ ಜಾತಿಗಣತಿಯನ್ನು ನಡೆಸುವುದು
- 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರತಿ ಡಿಪ್ಲೊಮಾ, ಪದವೀಧರೆನಿಗೆ ವರ್ಷಕ್ಕೆ 1 ಲಕ್ಷ ರೂ. ಜತೆಗೆ ಅಪ್ರೆಂಟಿಷಿಪ್. ಇದಕ್ಕಾಗಿ ಅಪ್ರೆಂಟಿಷಿಫ್ ಕಾಯಿದೆ ಜಾರಿ
- ಆರೋಗ್ಯ ರಕ್ಷಣೆಗಾಗಿ ರಾಜಸ್ಥಾನ ಮಾದರಿಯಲ್ಲಿ 25 ಲಕ್ಷ ರೂ.ವರೆಗೆ ನಗದು ರಹಿತ ವಿಮಾ ಯೋಜನೆ ದೇಶಾದ್ಯಂತ ಜಾರಿಗೆ ಸಂಕಲ್ಪ
- ಜಮ್ಮು-ಕಾಶ್ಮೀರ, ಪುದುಚೆರಿಗೆ ರಾಜ್ಯದ ಸ್ಥಾನಮಾನ ನೀಡಲಾಗುವುದು
- ನಗರ ಪ್ರದೇಶಗಳ ಬಡವರಿಗೆ ಉದ್ಯೋಗ ಖಾತರಿ ಯೋಜನೆ ಜಾರಿ
- ವಿವಿಧ ಹಂತಗಳ ಕೇಂದ್ರ ಸರ್ಕಾರದ 30 ಲಕ್ಷ ಹುದ್ದೆಗಳ ಭರ್ತಿಗೆ ಕ್ರಮ
- 2025ರಿಂದ ಕೇಂದ್ರ ಸರ್ಕಾರದ ಉದ್ಯೋಗದಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲು
- ರಾಷ್ಟ್ರೀಯ ಕನಿಷ್ಠ ಕೂಲಿ ಅನುಸಾರ, 11 ಎಂ-ನರೇಗಾ ಯೋಜನೆಯಡಿ ದಿನಗೂಲಿ ಮೊತ್ತವನ್ನು 400 ರೂ.ಗೆ ಹೆಚ್ಚಿಸುವುದು
- ಬಡವರ ಹಿತ ರಕ್ಷಿಸಲು ಜಿಎಸ್ಟಿ ಕಾನೂನುಗಳಲ್ಲಿ ಆಮೂಲಾಗ್ರ ಬದಲಾವಣೆ
- ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಸಮುದಾಯಗಳ ಮೀಸಲಾತಿಯನ್ನು ಶೇ. 50ಕ್ಕೆ ಹೆಚ್ಚಿಸಲು ಸಾಂವಿಧಾನಿಕ ಕಾನೂನು ತಿದ್ದುಪಡಿ ತರುವುದು
- ಎಲ್ಲಾ ಜಾತಿ ಮತ್ತು ಸಮುದಾಯಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ. 10ರಷ್ಟು ಮೀಸಲಾತಿ ಒದಗಿಸಲಾಗುವುದು
- ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ (MSP) ಕಾನೂನು ಖಾತರಿ ನೀಡುವುದು. ಕೃಷಿ ಬೆಲೆ ಮತ್ತು ದರ ಆಯೋಗ ಸ್ವಾಯತ್ತ ಸಂಸ್ಥೆಯಾಗಿ ಮಾರ್ಪಾಡು
- ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ರಾಜ್ಯ ಸ್ಥಾನಮಾನವನ್ನು ತಕ್ಷಣವೇ ಮರುಸ್ಥಾಪಿಸುವುದು
- ಅಗ್ನಿಪಥ ಯೋಜನೆಯನ್ನು ರದ್ದುಗೊಳಿಸುವುದು. ಮೊದಲಿನಂತೆ ಸಶಸ್ತ್ರಪಡೆಗಳಲ್ಲಿ ನೇಮಕಾತಿ ಪ್ರಕ್ರಿಯೆ ಮುಂದುವರಿಕೆ.
- ಸರ್ಕಾರ, ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ನಿಯಮಿತ ಉದ್ಯೋಗಗಳ ಗುತ್ತಿಗೆಯನ್ನು ರದ್ದುಗೊಳಿಸುವುದು. ಅಂತಹ ನೇಮಕಾತಿಗಳನ್ನು ಕ್ರಮಬದ್ಧಗೊಳಿಸುವುದನ್ನು ಖಚಿತಪಡಿಸುವುದು
- ಕೇಂದ್ರ ಸರ್ಕಾರದಲ್ಲಿ ವಿವಿಧ ಹಂತಗಳಲ್ಲಿ ಮಂಜೂರಾದ ಹುದ್ದೆಗಳಲ್ಲಿ ಸುಮಾರು 30 ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು
- ಸರ್ಕಾರಿ ಉದ್ಯೋಗಗಳು ಹಾಗೂ ಪರೀಕ್ಷೆಗಳ ಅರ್ಜಿ ಶುಲ್ಕಗಳ ರದ್ದು
- ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮದಡಿ (ಎನ್ಎಸ್ಎಪಿ) ಹಿರಿಯ ನಾಗರಿಕರು, ವಿಧವೆಯರು ಮತ್ತು ಅಂಗವಿಕಲ ವ್ಯಕ್ತಿಗಳ ಪಿಂಚಣಿಗೆ ಕೇಂದ್ರವು ನೀಡುವ 200-500 ರೂ. ನೆರವಿನ ಮೊತ್ತವನ್ನು ₹1,000ಕ್ಕೆ ಏರಿಸಲಾಗುವುದು
- 21 ವರ್ಷ ಒಳಗಿನ ಪ್ರತಿಭಾವಂತ ಮತ್ತು ಉದಯೋನ್ಮುಖ ಕ್ರೀಡಾಪಟುಗಳಿಗೆ ತಿಂಗಳಿಗೆ ₹10,000 ಕ್ರೀಡಾ ವಿದ್ಯಾರ್ಥಿವೇತನ ನೀಡುವುದು
- ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಮೀಸಲಾತಿ. ಮಹಿಳೆಯರಿಗೆ ಮೂರನೇ ಒಂದು ಭಾಗದ ಮೀಸಲಾತಿಯು 2029ರಲ್ಲಿ ಚುನಾಯಿತವಾಗುವ ಲೋಕಸಭೆಗೂ ಅನ್ವಯಿಸುತ್ತದೆ
- ಮೀನುಗಾರರ ಸಮುದಾಯಗಳಿಗೆ ಡೀಸೆಲ್ ಸಬ್ಸಿಡಿ ಮರುಸ್ಥಾಪನೆ. ಮೀನುಗಾರಿಕೆ ವೇಳೆ ಮೃತರೆಂದು ದೃಢವಾದರೆ ಮೀನುಗಾರರಿಗೆ ಮೂರು ತಿಂಗಳೊಳಗೆ ಪ್ರಮಾಣ ಪತ್ರ ವಿತರಣೆ
- ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಆಕ್ಟ್ 1978ಕ್ಕೆ ತಿದ್ದುಪಡಿ. ಮಾಧ್ಯಮ ಸ್ವಯಂ ನಿಯಂತ್ರಣ ವ್ಯವಸ್ಥೆ ಬಲಪಡಿಸಲು, ಪತ್ರಿಕೋದ್ಯಮ ಸ್ವಾತಂತ್ರ್ಯ ರಕ್ಷಿಸಲು, ಸಂಪಾದಕೀಯ ಸ್ವಾತಂತ್ರ್ಯ ಎತ್ತಿಹಿಡಿಯಲು ಮತ್ತು ಸರ್ಕಾರದ ಹಸ್ತಕ್ಷೇಪದಿಂದ ರಕ್ಷಿಸಲು ಕ್ರಮ
Publisher: ಕನ್ನಡ ನಾಡು | Kannada Naadu