Article
ಕುಸಿದು ಬಿದ್ದ 120 ಅಡಿ ಉದ್ದದ ರಥ; ಪಾರಾದ ಭಕ್ತರು
ಘಟನೆಯಲ್ಲಿ ಭಕ್ತರಿಗೆ ಯಾವುದೇ ಹೆಚ್ಚಿನ ಹಾನಿಯಾಗಿಲ್ಲ. ಸಾವಿರಾರು ಭಕ್ತರು ಬೃಹತ್ ಆಕಾರದ ಮತ್ತು ಅತಿ ಎತ್ತರದ ರಥವನ್ನು ಎಳೆಯುತ್ತಿದ್ದರು. 120 ಅಡಿ ಎತ್ತರ ಇದ್ದ ಕಾರಣ ಎಲ್ಲಾ ಕಡೆಯಿಂದ ಹಗ್ಗ ಕಟ್ಟಿ, ಸಮತೋಲನ ಕಾಪಾಡಿಕೊಳ್ಳಲು ಭಕ್ತರು ಪ್ರಯತ್ನಿಸಿದರು. ಆದರೆ ಒಂದು ಹಂತದಲ್ಲಿ ಸಮತೋಲನ ಕಳೆದುಕೊಂಡ ರಥ ಕುಸಿದು ಬಿದ್ದಿದೆ.
ಘಟನೆಯಲ್ಲಿ ಯಾವ ಭಕ್ತರಿಗೂ ಗಾಯವಾಗಿಲ್ಲ. ಟ್ಯ್ರಾಕ್ಟರ್ ಮತ್ತು ಎತ್ತಿನ ಗಾಡಿಗಳನ್ನು ಬಳಸಿ ಕುಸಿದಿದ್ದ ರಥವನ್ನು ಮತ್ತೆ ಮೇಲೆತ್ತಲಾಯಿತು. ವರ್ಷಕ್ಕೊಮ್ಮೆ ನಡೆಯುವ ಹುಸ್ಕೂರು ಮದ್ದೂರಮ್ಮನ ಜಾತ್ರೆಯಲ್ಲಿ ರಥೋತ್ಸವ ಪ್ರಮುಖ ಆಕರ್ಷಣೆಯಾಗಿದೆ.
ಒಂದು ವರ್ಷದ ಹಿಂದೆ ನೂರಕ್ಕೂ ಹೆಚ್ಚು ಈ ರೀತಿಯ ರಥಗಳನ್ನು ಉತ್ಸವಕ್ಕಾಗಿ ಅಲಂಕರಿಸಲಾಗುತ್ತಿತ್ತು. ಆದರೆ, ಇತ್ತೀಚೆಗೆ ರಥಗಳ ಸಂಖ್ಯೆಯನ್ನು ಕಡಿಮಾಡಲಾಗಿದ್ದು, 10 ರಿಂದ 15 ಕ್ಕೆ ಇಳಿದಿದೆ.
