ಬೆಂಗಳೂರು: ಆನೇಕಲ್ ಬಳಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ 120 ಅಡಿ ಎತ್ತರದ ದೇವಾಲಯದ ರಥ ಶನಿವಾರ ಕುಸಿದು ಬಿದ್ದಿದೆ. ಹುಸ್ಕೂರು ಮದ್ದೂರಮ್ಮ ದೇವಸ್ಥಾನದ ವಾರ್ಷಿಕ ಜಾತ್ರೆಯಲ್ಲಿ 10ಕ್ಕೂ ಹೆಚ್ಚು ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಂಡಿದ್ದ ವೇಳೆ ಘಟನೆ ನಡೆದಿದೆ.
ಘಟನೆಯಲ್ಲಿ ಭಕ್ತರಿಗೆ ಯಾವುದೇ ಹೆಚ್ಚಿನ ಹಾನಿಯಾಗಿಲ್ಲ. ಸಾವಿರಾರು ಭಕ್ತರು ಬೃಹತ್ ಆಕಾರದ ಮತ್ತು ಅತಿ ಎತ್ತರದ ರಥವನ್ನು ಎಳೆಯುತ್ತಿದ್ದರು. 120 ಅಡಿ ಎತ್ತರ ಇದ್ದ ಕಾರಣ ಎಲ್ಲಾ ಕಡೆಯಿಂದ ಹಗ್ಗ ಕಟ್ಟಿ, ಸಮತೋಲನ ಕಾಪಾಡಿಕೊಳ್ಳಲು ಭಕ್ತರು ಪ್ರಯತ್ನಿಸಿದರು. ಆದರೆ ಒಂದು ಹಂತದಲ್ಲಿ ಸಮತೋಲನ ಕಳೆದುಕೊಂಡ ರಥ ಕುಸಿದು ಬಿದ್ದಿದೆ.
ಘಟನೆಯಲ್ಲಿ ಯಾವ ಭಕ್ತರಿಗೂ ಗಾಯವಾಗಿಲ್ಲ. ಟ್ಯ್ರಾಕ್ಟರ್ ಮತ್ತು ಎತ್ತಿನ ಗಾಡಿಗಳನ್ನು ಬಳಸಿ ಕುಸಿದಿದ್ದ ರಥವನ್ನು ಮತ್ತೆ ಮೇಲೆತ್ತಲಾಯಿತು. ವರ್ಷಕ್ಕೊಮ್ಮೆ ನಡೆಯುವ ಹುಸ್ಕೂರು ಮದ್ದೂರಮ್ಮನ ಜಾತ್ರೆಯಲ್ಲಿ ರಥೋತ್ಸವ ಪ್ರಮುಖ ಆಕರ್ಷಣೆಯಾಗಿದೆ.
ಒಂದು ವರ್ಷದ ಹಿಂದೆ ನೂರಕ್ಕೂ ಹೆಚ್ಚು ಈ ರೀತಿಯ ರಥಗಳನ್ನು ಉತ್ಸವಕ್ಕಾಗಿ ಅಲಂಕರಿಸಲಾಗುತ್ತಿತ್ತು. ಆದರೆ, ಇತ್ತೀಚೆಗೆ ರಥಗಳ ಸಂಖ್ಯೆಯನ್ನು ಕಡಿಮಾಡಲಾಗಿದ್ದು, 10 ರಿಂದ 15 ಕ್ಕೆ ಇಳಿದಿದೆ.
Publisher: ಕನ್ನಡ ನಾಡು | Kannada Naadu