ಬೆಳಗಾವಿ : ಇಲ್ಲಿನ ಪ್ರಸಿದ್ಧ ಆದಿತ್ಯ ಮಿಲ್ಕ್ ಮಾಲಿಕ ಶಿವಕಾಂತ ಸಿದ್ನಾಳ ನಿಧನರಾಗಿದ್ದಾರೆ. ಅವರಿಗೆ 49 ವರ್ಷ ವಯಸ್ಸಾಗಿತ್ತು.
ಮಾಜಿ ಸಂಸದ ದಿ. ಎಸ್.ಬಿ.ಸಿದ್ನಾಳ ಅವರ ಪುತ್ರ ಹಾಗೂ ವಿಆರ್ ಎಲ್ ಸಮೂಹದ ಚೇರಮನ್ ವಿಜಯ ಸಂಕೇಶ್ವರ ಅವರ ಅಳಿಯರಾಗಿದ್ದ ಶಿವಕಾಂತ ಸಿದ್ನಾಳ ಕೆಲಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಶನಿವಾರ ಮಧ್ಯಾಹ್ನ 1.30ರ ಹೊತ್ತಿಗೆ ಬೆಳಗಾವಿಯ ತಮ್ಮ ಮನೆಯಲ್ಲಿ ನಿಧನರಾದರು. ಅವರಿಗೆ ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿ ಇದ್ದಾರೆ.
ವಿಜಯ ಸಂಕೇಶ್ವರ ಅವರು ಬೆಂಗಳೂರಿನಿಂದ ಆಗಮಿಸುತ್ತಿದ್ದು, ಅವರು ಬಂದ ನಂತರ ಅಂತ್ಯಕ್ರಿಯೆಯ ಕುರಿತು ನಿರ್ಧರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
Publisher: ಕನ್ನಡ ನಾಡು | Kannada Naadu