ಕನ್ನಡ ನಾಡು | Kannada Naadu

ಕಾಂಗ್ರೆಸ್ ನಾಯಕರು, ಸುಳ್ಳಿನ ಮೇಲೆ ಸುಳ್ಳು ಹೇಳಿ ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದೆ..

06 Apr, 2024



ಬೆಂಗಳೂರು : ರಾಮೇಶ್ವರಂ ಕೆಫೆ ಬ್ಲಾಸ್ಟ್ ವಿಚಾರ ಇಡೀ ದೇಶದ ಗಮನ ಸೆಳೆದಿತ್ತು, ಮಾತ್ರವಲ್ಲ ಜಾಗತಿಕ ಮಟ್ಟದಲ್ಲೂ ಸದ್ದು ಮಾಡಿತ್ತು. ಇಂತಹ ಪ್ರಕರಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಭಾರಿ ತಿಕ್ಕಾಟ ನಡೆಯುತ್ತಲೇ ಇದೆ. ಈಗ ಕೂಡ ಅಷ್ಟೇ ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ಹಿರಿಯ ಮುಖಂಡ ಆರ್‌. ಅಶೋಕ್ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪವನ್ನು ಈಗ ಮಾಡಿದ್ದಾರೆ.



'ರಾಮೇಶ್ವರಂ ಕೆಫೆ' ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು. ಅದ್ರಲ್ಲೂ ರಾಮೇಶ್ವರಂ ಕೆಫೆ ಒಳಗೆ ಸಂಭವಿಸಿದ ಭೀಕರ ಸ್ಫೋಟ ಎಲ್ಲರನ್ನೂ ನಡುಗಿಸಿಬಿಟ್ಟಿತ್ತು. ಆದ್ರೆ ಹೀಗೆ ಕೋಟಿ ಕೋಟಿ ದುಡಿಯುವ ಪ್ರತಿಷ್ಠಿತ ಹೋಟೆಲ್‌ನಲ್ಲಿ ಇಂತಹ ಸ್ಫೋಟ ಸಂಭವಿಸಿದ್ದು ಸಂಚಲನ ಸೃಷ್ಟಿಸಿದೆ. ತನಿಖೆ ಪ್ರಗತಿಯಲ್ಲಿ ಇರುವ ಸಮಯದಲ್ಲೇ ಮಹತ್ವದ ಬೆಳವಣಿಗೆ ಒಂದು ನಡೆದಿದ್ದು, ಈ ಘಟನೆ ಬಗ್ಗೆ ಆರ್‌. ಅಶೋಕ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಹಾಗೇ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.



ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ' ಈ ಬಗ್ಗೆ ಟ್ವೀಟ್ ಮಾಡಿರುವ ಆರ್. ಅಶೋಕ್, 'ಅದು ಬೆಂಗಳೂರಿನಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಘಟನೆ ಇರಬಹುದು ಅಥವಾ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಘಟನೆ ಇರಬಹುದು, ಹೇಗಾದರೂ ಮಾಡಿ ತಪ್ಪಿತಸ್ಥರನ್ನು ರಕ್ಷಣೆ ಮಾಡಲೇ ಬೇಕು ಎಂದು ಹಪಾಹಪಿ ಪಡುತ್ತಿರುವ ಕಾಂಗ್ರೆಸ್ ನಾಯಕರು, ಸುಳ್ಳಿನ ಮೇಲೆ ಸುಳ್ಳು ಹೇಳಿ ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಲೇ ಇದ್ದಾರೆ. FSL ವರದಿ ಬರುವ ಮುನ್ನವೇ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿಯೇ ಇಲ್ಲ ದೇಶದ್ರೋಹಿಗಳ ಪರ ವಕಾಲತ್ತು ವಹಿಸಿದ್ದ ಕಾಂಗ್ರೆಸ್ ನಾಯಕರು, ಬಾಂಬ್ ಬ್ಲಾಸ್ಟ್ ಆದ ಕೂಡಲೇ ಅದು ಕುಕ್ಕರ್ ಸ್ಫೋಟ, ಲವ್ ಇಂಟೆನ್ಸಿಟಿ ಬಾಂಬ್, business rivalry ಇಂದ ಮಾಡಿರುವ ಕೃತ್ಯ ಎಂದು ಕಥೆ ಕಟ್ಟಲು ಹೊರಟಿದ್ದರು.' ಎಂದು ಆರೋಪ ಮಾಡಿದ್ದಾರೆ. ಹಾಗೇ ಆರ್. ಅಶೋಕ್ ಅವರು ಕಾಂಗ್ರೆಸ್ ವಿರುದ್ಧ ತಮ್ಮ ಆರೋಪವನ್ನ ಮುಂದುವರಿಸಿ, 'NIA ವಿಚಾರಣೆ ನಡೆಯುತ್ತಿರುವಾಗ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಈಗ ಹೊಸ ಸುಳ್ಳೊಂದನ್ನ ಹರಿಬಿಟ್ಟಿರುವ ಕಾಂಗ್ರೆಸ್ ಪಕ್ಷ, ಸಾಕ್ಷಿ ವಿಚಾರಣೆಗೂ, ಆರೋಪಿ ವಿಚಾರಣೆಗೂ ವ್ಯತ್ಯಾಸ ತಿಳಿಯದೆ ಜನರನ್ನು ದಿಕ್ಕು ತಪ್ಪಿಸಲು ಪ್ರಯತ್ನ ಮಾಡುತ್ತಿದೆ.

ವಿಚಾರಣೆ ಪೂರ್ಣವಾಗುವ ಮುನ್ನವೇ ಈ ರೀತಿ ಹೇಳಿಕೆಗಳನ್ನು ನೀಡಿ ದುಂಬಾಲು ಬೀಳುತ್ತಿರುವ ಕಾಂಗ್ರೆಸ್ ನಾಯಕರ ನಡೆ ನೋಡಿದರೆ ಉಗ್ರರನ್ನು ರಕ್ಷಿಸಲು ಹೊರಟಿರುವುದು ಸ್ಪಷ್ಟವಾಗುತ್ತದೆ.' ಎಂದಿದ್ದು ಸಂಚಲನ ಸೃಷ್ಟಿ ಮಾಡಿದೆ.



ಇನ್ನೂ ಎಷ್ಟು ದಿನ ಫೈಟಿಂಗ್?

ಒಟ್ನಲ್ಲಿ 'ರಾಮೇಶ್ವರಂ ಕೆಫೆ' ಸ್ಫೋಟ ಪ್ರಕರಣ ಸಂಭವಿಸಿ ಹಲವು ದಿನಗಳೇ ಕಳೆದಿದ್ದರೂ ಈ ಘಟನೆ ಮಾತ್ರ ಇನ್ನೂ ಹಸಿಯಾಗೇ ಇದೆ. ಅಲ್ಲದೆ ಈ ವಿಚಾರವಾಗಿ ರಾಜಕೀಯ ಫೈಟ್ ಕೂಡ ಜೋರಾಗಿದ್ದು, ಇದು ಇನ್ನೂ ಎಷ್ಟು ದಿನ ರಾಜಕೀಯ ತಿಕ್ಕಾಟಕ್ಕೆ ಬಳಕೆ ಆಗುತ್ತೊ ಅನ್ನೋದನ್ನ ಕಾದು ನೋಡಬೇಕಿದೆ.

Publisher: ಕನ್ನಡ ನಾಡು | Kannada Naadu

Login to Give your comment
Powered by