ಕನ್ನಡ ನಾಡು | Kannada Naadu

ಸಾಹಿತಿ, ವ್ಯಂಗ್ಯಚಿತ್ರಗಾರ, ಅಂಕಣಬರಹಗಾರ ವಿರಾಜ್ ಅಡೂರು ಇವರಿಗೆ ‘ಗಡಿನಾಡ ಚೈತನ್ಯ -2024’ ಪ್ರಶಸ್ತಿ

06 Apr, 2024

ಮಂಜೇಶ್ವರ : ಸಾಹಿತಿ, ವ್ಯಂಗ್ಯಚಿತ್ರಗಾರ, ಪತ್ರಕರ್ತ, ಅಂಕಣಬರಹಗಾರ, ಸಂಘಟಕ, ಕೃಷಿಕ, ಶಿಬಿರ ಸಂಪನ್ಮೂಲ ವ್ಯಕ್ತಿಯಾಗಿ ಸಮಾಜದ ವಿವಿಧ ಉನ್ನತ ಕ್ಷೇತ್ರಗಳಲ್ಲಿ ಸದಾ ತೊಡಗಿಸಿಕೊಂಡಿರುವ ಕಾಸರಗೋಡು ಜಿಲ್ಲೆಯ ಅಡೂರು ಗ್ರಾಮದ ಪ್ರಶಾಂತ ರಾಜ ವಿ ತಂತ್ರಿ (ವಿರಾಜ್ ಅಡೂರು) ಅವರಿಗೆ ದಿನಾಂಕ 01-04-2024ರ ಸೋಮವಾರದಂದು ‘ಗಡಿನಾಡ ಚೈತನ್ಯ -2024’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವರ್ಕಾಡಿ ಕಾವಿ ಸುಬ್ರಹ್ಮಣ್ಯ ಕ್ಷೇತ್ರದ ಬ್ರಹ್ಮಕಲಶದ ಸಂದರ್ಭದಲ್ಲಿ ಕಾಸರಗೋಡಿನ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕಂತಿಕ ಸಂಘದ ವತಿಯಿಂದ ನಡೆದ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ವಿರಾಜ್ ಅಡೂರು ಅವರ ಗಡಿನಾಡಿನಲ್ಲಿ ಕನ್ನಡ ಭಾಷೆಯ ಕುರಿತ ಕಾಳಜಿ ಹಾಗೂ ಸಮಾಜಮುಖಿ ಕೆಲಸಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಿಲಾಯಿತು. ಕಾರ್ಯಕ್ರಮದಲ್ಲಿ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದ ಅಧ್ಯಕ್ಷೆ ಡಾ.ವಾಣಿಶ್ರೀ ಕಾಸರಗೋಡು, ಕಾರ್ಯದರ್ಶಿ ಗುರುರಾಜ್ ಕಾಸರಗೋಡು, ಜಯಂತಿ ಪಿ. ರಾಜ್, ಆದ್ಯಂತ್ ಅಡೂರು, ಉಷಾ ಸುಧಾಕರನ್, ವಿದುಷಿ ರೇಖಾ ದಿನೇಶ್ ಮಂಜೇಶ್ವರ, ಕಾವಿ ಸುಬ್ರಹ್ಮಣ್ಯ ಕ್ಷೇತ್ರದ ಆಡಳಿತ ಮಂಡಳಿಯ ಮುಖಂಡರಾದ ಪ್ರಭಾಕರ ರೈ, ವಿಕ್ರಂ ದತ್ತ, ಡಾ. ಶಂಕರ್ ಕೆ. ಎಸ್. ಮೊದಲಾದವರು ಉಪಸ್ಥಿತರಿದ್ದರು.

Publisher: ಕನ್ನಡ ನಾಡು | Kannada Naadu

Login to Give your comment
Powered by