ಕನ್ನಡ ನಾಡು | Kannada Naadu

ಏಪ್ರಿಲ್ 25ರಿಂದ ಮೇ 9 ರ ವರೆಗೆ ಅರೆಹೊಳೆಯಲ್ಲಿ ‘ಋತುಮಾನ’ ರಂಗ ತರಬೇತಿ ಕಾರ್ಯಾಗಾರ

06 Apr, 2024

ಕುಂದಾಪುರ : ಅರೆಹೊಳೆ ಪ್ರತಿಷ್ಠಾನ ಮತ್ತು ನಂದಗೋಕುಲ ಜಂಟಿಯಾಗಿ ಆಯೋಜಿಸುತ್ತಿರುವ 15 ದಿನಗಳ ವಸತಿ ಸಹಿತ ರಂಗ ತರಬೇತಿ ಕಾರ್ಯಾಗಾರ ಕಾಲದ ಜೊತೆಗಿನ ಕಲಿಕೆಯ ‘ಋತುಮಾನ’ವನ್ನು ದಿನಾಂಕ 25-04-2024ರಿಂದ 09-05-2024ರವರೆಗೆ ಅರೆಹೊಳೆ ನಂದಗೋಕುಲ ರಂಗ ಶಿಕ್ಷಣ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.

ಶಿಬಿರದ ವಿಶೇಷತೆಗಳು :
• ಎನ್.ಎಸ್.ಡಿ., ನೀನಾಸಂ ಹಾಗೂ ರಂಗಾಯಣ ಪರಿಣಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ
• ಸೌಪರ್ಣಿಕಾ ನದಿ ತಟದ ಮೇಲಿನ ಸುಸಜ್ಜಿತ ರಂಗ ಮಂದಿರದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ
• ಶಿಬಿರಾರ್ಥಿಗಳಿಗೆ ನಾಟಕದ ತಯಾರಿ
• ಸುಂದರ ಹಳ್ಳಿಯ ಪರಿಸರದಲ್ಲಿ ದಿನ ಪೂರ್ತಿ ಕಾರ್ಯಾಗಾರ
• 15 ವರ್ಷ ಮೇಲ್ಪಟ್ಟ ಆಸಕ್ತರಿಗೆ ಮಾತ್ರ

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : ಉಜ್ಜಲ್ ಯು. ವಿ. 9900772221 ಮತ್ತು ಅರೆಹೊಳೆ ಸದಾಶಿವ ರಾವ್ 9632794477

Publisher: ಕನ್ನಡ ನಾಡು | Kannada Naadu

Login to Give your comment
Powered by