ಕನ್ನಡ ನಾಡು | Kannada Naadu

ಅಹಿಂದ ಘಟಕದ ಕಾರ್ಯಧ್ಯಕ್ಷರಾಗಿ GD. ಮಂಜುನಾಥ್…

06 Apr, 2024

ಶಿವಮೊಗ್ಗ : ಕರ್ನಾಟಕ ಸರ್ಕಾರದ ಶಿಕ್ಷಣ ಸಚಿವರು ಮಧು ಬಂಗಾರಪ್ಪನವರ ಆಪ್ತರಾದ GD ಮಂಜುನಾಥ್ ರವರನ್ನು ಅಹಿಂದ ಘಟಕದ ಶಿವಮೊಗ್ಗ ಜಿಲ್ಲಾ ಕಾರ್ಯಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಅಹಿಂದ ಘಟಕದ ರಾಜ್ಯಾಧ್ಯಕ್ಷರಾದ ಪ್ರಭುಲಿಂಗ ದೊಡ್ಡಣ್ಣಿ ರವರು ಜಿ ಡಿ ಮಂಜುನಾಥ್ ರವರನ್ನು ಕಾರ್ಯಾಧ್ಯಕ್ಷರಾಗಿ ನೇಮಕ ಮಾಡಿ ತಕ್ಷಣ ಜಾರಿಗೆ ಬರುವಂತೆ ಆದೇಶ ಹೊರಡಿಸಿದ್ದಾರೆ. ಇವರು ಪ್ರಸ್ತುತ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Publisher: ಕನ್ನಡ ನಾಡು | Kannada Naadu

Login to Give your comment
Powered by