Article
ಚುನಾವಣೆ ರಥಕ್ಕೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಂದ ಚಾಲನೆ…
ಮತದಾನ ಜಾಗೃತಿ ರಥವು ಜಿಲ್ಲೆಯಲ್ಲಿ ಕಳೆದ ಬಾರಿಯ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಮತದಾನವಾದ 148 ಮತಗಟ್ಟೆಗಳಲ್ಲಿ ಹಾಗೂ ನಗರ ಪ್ರದೇಶದಲ್ಲಿ ಹೆಚ್ಚು ಜನ ಸೇರುವ ಸ್ಥಳಗಳಲ್ಲಿ 10 ದಿನಗಳ ಕಾಲ ಮತದಾನದ ಕುರಿತು ವಿವಿಧ ವಿಡಿಯೋ ಹಾಗೂ ಮಾಹಿತಿ ನೀಡುವ ಮೂಲಕ ಜಾಗೃತಿ ಮೂಡಿಸಲಿದೆ.
ಇದೇ ವೇಳೆ ಜಿಲ್ಲಾಧಿಕಾರಿಗಳು ಚುನಾವಣಾ ಐಕಾನ್‍ಗಳಿಗೆ ಚುನಾವಣಾ ಪ್ರತಿಜ್ಞಾ ವಿಧಿ ಪೋಸ್ಟರ್‍ನ್ನು ನೀಡಿ, ಚುನಾವಣಾ ಪ್ರತಿಜ್ಞಾ ವಿಧಿ ಬೋಧಿಸಿದರು.
ಈ ವೇಳೆ ಜಿ.ಪಂ ಸಿಪಿಓ ಗಾಯತ್ರಿ, ತಹಶೀಲ್ದಾರ್ ಪ್ರದೀಪ್, ಜಿಲ್ಲಾಡಳಿತ, ಜಿ.ಪಂ ಅಧಿಕಾರಿ, ಸಿಬ್ಬಂದಿಗಳು ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಿಂದ ಆಯ್ಕೆಯಾದ ಚುನಾವಣಾ ಐಕಾನ್‍ಗಳಾದ ದೀಕ್ಷಿತ್, ಜ್ಯೋತಿ, ಡಾ.ಶುಭ್ರತಾ ಕೆ.ಎಸ್, ನಿವೇದನ್ ನೆಂಪೆ ಪಾಲ್ಗೊಂಡಿದ್ದರು.
