ಕನ್ನಡ ನಾಡು | Kannada Naadu

ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 30 ಲಕ್ಷ ನಗದು ಹಾಗೂ 2 ಲಕ್ಷ ಮೌಲ್ಯದ ಸೀರೆಗಳ ವಶ.

05 Apr, 2024

ಕಲಬುರಗಿ : ಕಾರಿನಲ್ಲಿ ಸಾಗಿಸುತ್ತಿದ್ದ 30 ಲಕ್ಷ ರೂ ನಗದು ಹಾಗೂ ಎರಡೂವರೆ ಲಕ್ಷ ರೂ.ಗಳ ಮೌಲ್ಯದ ಸೀರೆಗಳನ್ನು ಚೆಕ್ ಪೋಸ್ಟ್‌ ಬಳಿ ಸಿಬ್ಬಂದಿಗಳು ಪತ್ತೆ ಹಚ್ಚಿರುವ ಘಟನೆ ಜಿಲ್ಲೆಯ ಸೇಡಂ ತಾಲ್ಲೂಕಿನ ಮುಧೋಳ ಪೊಲೀಸ್ ಠಾಣೆಯ ವ್ಯಾಪ್ತಿಯ ಚೆಕ್ ಪೋಸ್ಟ್‌ ನಲ್ಲಿ  ನಡೆದಿದೆ.
ಕಾರಿನಲ್ಲಿದ್ದವರ ಮಾಹಿತಿಯ ಪ್ರಕಾರ ಕಾರಿನಲ್ಲಿ ಹಣ ಹಾಗೂ ಸೀರೆಗಳನ್ನು ತೆಲಂಗಾಣದ ನಾರಾಯಣಪೇಟ್‍ಗೆ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಯಾವುದೇ ದಾಖಲೆಗಳು ಇರದೇ ಇದ್ದುದರಿಂದ ಹಣ ಹಾಗೂ ಸೀರೆಗಳನ್ನು ಪೋಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಮುಧೋಳ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಿಸಲಾಗಿದೆ.

Publisher: ಕನ್ನಡ ನಾಡು | Kannada Naadu

Login to Give your comment
Powered by