ಕನ್ನಡ ನಾಡು | Kannada Naadu

ನದಿಗೆ ನೀರು ಹರಿಸಿದ ಸಚಿವ ಸತೀಶ್ ಜಾರಕಿಹೊಳಿ ಅವರನ ಕ್ರಮಕ್ಕೆ ಅಭಿನಂದನೆ

05 Apr, 2024



ಬೆಳಗಾವಿ:  ಹಿರಣ್ಯಕೇಶಿ ಜಲಾಶಯ ಆಶ್ರಯಿಸಿರುವ ರೈತರಿಗೆ, ಜನರಿಗೆ ಕುಡಿವ ನೀರು ನೀಡಲು ವ್ಯವಸ್ಥೆ ಮಾಡಲಾಗಿದೆ. ಈ ಕುರಿತು
ಕ್ರಮ ಕೈಗೊಳ್ಳಲು ಲೋಕೋಪಯೋಗಿ ಸಚಿವ ಸತೀಸ್ ಜಾರಕಿಹೊಳಿ ಅವರು  ಅಧಿಕಾರಿಗಳೀಗೆ ಸೂಕ್ತ ಸೂಚನೆ ನೀಡಿದ್ದರು. ಸಚಿವರ ಸೂಚನೆಯಂತೆ  ಇಂದು  ಹುಕ್ಕೇ ರಿ ತಾಲೂಕಿನ ಯರನಾಳ ಬ್ಯಾ ರೇಜನಿಂದ ಹಿರಣ್ಯ ಕೇಶಿ ನದಿಗೆ ನೀರು ಬಿಡಲಾಗಿದೆ.  ಅದಕ್ಕಾಗಿ   10 ಎಚ್.ಪಿ. ಸಾಮರ್ಥ್ಯ ದ 3 ಮೋಟಾರುಗಳನ್ನು ಅಳವಡಿಸಿ  ಹಿರಣ್ಯ ಕೇಶಿ ನದಿಗೆ ನೀರನ್ನು ಹರಿಸಲಾಗಿದೆ.


ಈ ವೇಳೆ ರೈತ ಮುಖಂಡ ಮಹಾಂತೇಶ  ಮಗದುಮ್‌ ಅವರು ಮಾತನಾಡಿ, ಬರಗಾಲದಿಂದ ತತ್ತರಿಸಿರುವ ಹಿರಣ್ಯ ಕೇಶಿ ನದಿಯ
ಸುತ್ತಮುತ್ತಲಿನ 12 ಗ್ರಾಮಗಳಿಗೆ ಸಾಕಷ್ಟು ತೊಂದರೆಯಾಗಿದೆ.  ಹಿರಣ್ಯ ಕೇಶಿ ನದಿಯ ಸುತ್ತಮುತ್ತಲಿನ ಗ್ರಾಮಗಳ  ಭಾಗದ ರೈತರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಕಲ್ಪಿ ಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಸೂಕ್ತ ರೀತಿಯಲ್ಲಿ ಅಧಿಕಾರಿಗಳು  ಸ್ಪಂದಿಸಿರಲಿಲ್ಲ.  ಅಲ್ಲದೇ 12 ಗ್ರಾಮಗಳ ರೈತರು ಸೇರಿ ಹಿರಣ್ಯಕೇಶಿ ನದಿಗೆ ನೀರು ಹರಿಸುವಂತೆ ಹೋರಾಟ ಮಾಡಿದರೂ ಯಾವುದೇ ಲಾಭವಾಗಿರಲಿಲ್ಲ. ನಮ್ಮ ಹೋರಾಟ ಹಾಗೂ ಇಲ್ಲಿನ ವಾಸ್ತವ ಸ್ಥಿತಿಯನ್ನು ಗಮನಿಸಿದ  ಸಚಿವ ಸತೀಶ್ ಜಾರಕಿಹೊಳಿ ಅವರಿಗೆಮಾಹಿತಿ ತಿಳಿಸಿದಾಗ ನಮ್ಮ ಸಮಸ್ಯೆಗೆ ತಕ್ಷಣ ಸೂಕ್ತವಾಗಿ  ಸ್ಪಂದಿಸಿದ ಸಚಿವರು ಹುಕ್ಕೇ ರಿ ತಾಲೂಕಿನ ಯರನಾಳ ಬ್ಯಾರೇಜನಿಂದ ಹಿರಣ್ಯ ಕೇಶಿ ನದಿಗೆ ನೀರು ಹರಿಸುವಂತೆ ಸೂಚನೆ ನೀಡಿ ನೀರಿನ ವ್ಯವಸ್ಥೆ ಮಾಡಿಸಿದ್ದಾರೆ.  ರೈತರ ಪರವಾಗಿ ಹೆಚ್ಚು ಮುತವರ್ಜಿ ವಹಿಸಿ ಯರನಾಳ ಬ್ಯಾ ರೇಜನಿಂದ ಹಿರಣ್ಯ ಕೇಶಿ ನದಿಗೆ ನೀರು ಹರಿಸಿ ರೈತರ  ಕಣ್ಣೀ ರನ್ನು ಒರೆಸುವ ಕೆಲಸಮಾಡಿದ್ದಾರೆ.  ರೈತರ ಸಮಸ್ಯೆಗೆ ಸ್ಪಂದಿಸಿದ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಈ ಭಾಗದ ವಿವಿಧ ಗ್ರಾಮಗಳ ರೈತರು ನೆನೆಸಿಕೊಳ್ಳುತ್ತಿದ್ದಾರ ಎಂದು ಹೇಳಿದರು.
ಪ್ರಸ್ತುತ  ಯರನಾಳ ಬ್ಯಾ ರೇಜನಿಂದ ಹಿರಣ್ಯಕೇಶಿ ನದಿಗೆ ನೀರು ಹರಿಸುವದರಿಂದ  ಬರಗಾಲದಿಂದ ತತ್ತರಿಸಿರುವ ಯರನಾಳ, ಮದಮಕ್ಕನಾಳ, ಯರಗಟ್ಟಿ , ಬಸ್ತವಾಡ, ಬಡಕುಂದ್ರಿ , ಗೌಡವಾಡ, ಕುರಣಿ, ಅರ್ಜುನವಾಡ, ಕೋಚರಿ, ಚಿಕ್ಕಾ ಲಗುಡ್ಡ , ಹೆಬ್ಬಾ ಳ ಹಾಗೂ ಮಸರಗುಪ್ಪಿ ಸೇರಿ ಇತರೆ ಭಾಗದ ರೈತರಿಗೆ ನೀರಿನ ತೊಂದರೆ ನಿಭಾಯಿಸಿದಂತಾಗಿದೆ. 

Publisher: ಕನ್ನಡ ನಾಡು | Kannada Naadu

Login to Give your comment
Powered by