ಬೆಂಗಳೂರು : ರಸ್ತೆಯಲ್ಲಿ ಹೋಗುತ್ತಿದ್ದ ಕೋಲೆ ಬಸವ ಎಕಾಏಕಿ ಬೈಕ್ ಸವಾರನಿಗೆ ಗುದ್ದಿದ್ದು, ಆತ ಈಚರ್ ವಾಹನದ ಕೆಳಗೆ ಬಿದ್ದ ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನಲ್ಲಿ ನಡೆದಿದೆ. ಮಹಾಲಕ್ಷ್ಮೀ ಲೇಔಟ್ ಸ್ವಿಮ್ಮಿಂಗ್ ಪೂಲ್ ಬಳಿ ಈ ಅಪಘಾತ ಸಂಭವಿಸಿದೆ. ಅಪಘಾತದ ಭೀಕರ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ನಡೆದು ಬರುತ್ತಿದ್ದ ಕೋಲೆ ಬಸವ ಎದುರಿನಿಂದ ಬರುತ್ತಿದ್ದ ಬೈಕ್ ಸವಾರನಿಗೆ ಗುದ್ದಿದೆ. ಬೈಕ್ ಸವಾರ ಎದುರಿನಿಂದ ಬರುತ್ತಿದ್ದ ಐಷರ್ ವಾಹನದ ಕೆಳಗೆ ಬಿದ್ದಿದ್ದಾನೆ. ಈಚರ್ ವಾಹನ ಚಾಲಕ ತಕ್ಷಣ ಬ್ರೇಕ್ ಹಾಕಿದ್ದರಿಂದ ಬೈಕ್ ಸವಾರ ಬದುಕುಳಿದಿದ್ದಾನೆ. ಸಿಸಿಟಿವಿಯಲ್ಲಿ ಸೆರೆಯಾದ ಭಯಾನಕ ಅಪಘಾತದ ದೃಶ್ಯ ಎದೆ ಝಲ್ ಎನಿಸುವಂತಿದೆ.
Publisher: ಕನ್ನಡ ನಾಡು | Kannada Naadu