ಮೂಡಲಗಿ : ಈ ಸುಡು ಬೆಸಿಗೆಯಲ್ಲಿ ಮಳೆಯ ಮಾತೇ ಇಲ್ಲದಾದಾಗ, ಘಟಪ್ರಭ ನದಿಗೆ ನೀರು ತುಂಬಿ ಹರಿಯುತ್ತಿದೆ. ಪರಿಣಾಮ ಸುಣಧೋಳಿ ಸೇತುವೆ ಸಂಚಾರ ಸ್ಥಗಿತವಾಗಿದೆ. ಇದು ಒಂದು ಕ್ಷಣದಲ್ಲಿ ಎಲ್ಲರೂ ಚಿಂತೆಗೆ ಕಾರಣವಾದ ಸನ್ನಿವೇಶ ನಡೆದು ಹೊಗಿದ್ದು, ವಾಸ್ತವದ ಸಂಗತಿ ತಿಳಿದು ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಬೇಸಿಗೆ ಹಿನ್ನಲೆ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ನೀರು ಬೀಡುಗಡೆ ಮಾಡಲಾಗಿದೆ.
ಹಿನ್ನಲೆ ಇಂದು ತಾಲೂಕಿನ ಸುಣಧೋಳಿ-ಮೂಡಲಗಿಗೆ ಸಂಪರ್ಕ ಕಲ್ಪಿಸುವ ಸುಣಧೋಳಿ ಸೇತುವೆಯು ಕೆಲ ಕಾಲ ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿತ್ತು.
ಸುಣಧೋಳಿಯ ಬಳಿಯ ಘಟಪ್ರಭಾ ನದಿಯ ಸೇತುವೆಗೆ ಗೇಟ್‌ಗಳನ್ನು ಹಾಕಿರುವುದರಿಂದ ಸೇತುವೆ ಮೇಲೆ ನೀರು ಹರಿದು ಬರುತ್ತಿದೆ. ಇದರಿಂದ ಸದ್ಯ ಸೇತುವೆ ಮೇಲಿನ ಸಂಚಾರ ಸ್ಥಗಿತಗೊಳಿಸಿ ತಹಶಿಲ್ದಾರ ಬಿ.ಎಸ್ ಕಡಕಬಾವಿ ಸೂಚನೆ ನೀಡಿದ್ದಾರೆ
Publisher: ಕನ್ನಡ ನಾಡು | Kannada Naadu