ಕೋಲಾರ : ಲೋಕಸಭಾ ಕ್ಷೇತ್ರದ ಚುನಾವಣೆ ದಿನೇ ದಿನೇ ರಂಗೇರುತ್ತಿದೆ. ಸದ್ಯ ಇಂದು ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟಿರುವ ಚಿಂತಾಮಣಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಂದು ಜೆಡಿಎಸ್ ಬಿಜೆಪಿ ಕಾರ್ಯಕರ್ತರ ಸಮಾವೇಶ ನಡೆಸಿದ್ದು ಕಾರ್ಯಕ್ರಮದಲ್ಲಿ ಸಂಸದ ಮುನಿಸ್ವಾಮಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ನನ್ನು ಅವನೊಬ್ಬ ಹುಚ್ಚ ವೆಂಕಟ್ ಇದ್ದಾನೆ ತಲೆ ಬುರಡೆ ಇಲ್ಲಾ ಎಂದು ಟಾಂಗ್ ಕೊಟ್ಟಿದ್ದಾರೆ.
ನಗರದ ಕೆಎಂಡಿ ಕಲ್ಯಾಟ ಮಂಟಪದಲ್ಲಿ ಇಂದು ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಸಮಾವೇಶವನ್ನು ಚಿಂತಾಮಣಿ ಬಿಜೆಪಿ ಮುಖಂಡ ದೇವನಹಳ್ಳಿ ಗೋಪಿ ನೇತೃತ್ವದಲ್ಲಿ ಆಯೋಜನೆ ಮಾಡಲಾಗಿತ್ತು. ಇನ್ನೂ ಸಮಾವೇಶ ಸಭೆಯಲ್ಲಿ ಮಾತನಾಡಿದ ಸಂಸದ ಮುನಿಸ್ವಾಮಿ ಈ ಬಾರೀ ಇದೇ ತಿಂಗಳ 26 ರಂದು ಧರ್ಮ ಹಾಗೂ ಅಧರ್ಮಕ್ಕೆ ಯುದ್ದ ನಡೆಯುತ್ತಿದ್ದು ದೇಶದ ರಕ್ಷಣೆಗೆ ನರೇಂದ್ರ ಮೋದಿಗೆ ಮತ ನೀಡುವಂತೆ ಮತಯಾಚನೆ ನಡೆಸಿದ್ದಾರೆ. ಈ ಹಿಂದೆ ಜೆಡೆಎಸ್ ಕಾಂಗ್ರೆಸ್ ನ ಮೈತ್ರಿ ಕಹಿಯಾಗಿತ್ತು ಆದರೆ ಈಗ ಬಿಜೆಪಿ ಜೆಡಿಎಸ್ ಸಿಹಿಯಾಗಿದೆ. ಒಂದು ಕಡೆ ಲೋಕಸಭಾ ಕ್ಷೇತ್ರಕ್ಕೆ ಕೆಹೆಚ್ ಮುನಿಯಪ್ಪ ತನ್ನ ಕುಟುಂಬಕ್ಕೆ ಟಿಕೆಟ್ ಎಂದರೆ ಮತ್ತೆ ಕೆಲವರು ವಿರೋಧ ವ್ಯಕ್ತ ಪಡಿಸಿದ್ದರು. ಈಗ ಹೊರಗಿನ ಮೂರನೇ ಅವರಿಗೆ ಟಿಕೆಟ್ ಸಿಕ್ಕಿದೆ. ಅದೇ ರೀತಿ ಕೈ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿ ಮುಜುಗರಕ್ಕೆ ಒಳಪಟ್ಟಿದ್ದರು ಎರಡು ಬಾರೀ ನಾಮಪತ್ರ ಸಲ್ಲಿಸಿದ್ದಾರೆಂದು ಆರೋಪ ಮಾಡಿದ್ದಾರೆ. ಆದರೆ ಬಿಜೆಪಿ ಅಭ್ಯರ್ಥಿ ಮಲ್ಲೇಶ್ ಬಾಬು ಸರಳ ಸಜ್ಜನಿಕೆಯವರು ಕ್ಷೇತ್ರದಲ್ಲಿ ಸೇವೆ ಮಾಡುತ್ತಾರೆ. ಈ ಬಾರೀ ಮಲ್ಲೇಶ್ ಅವರು ಗೆದ್ದರೆ ಮುಂದೆ ಎನ್ ಡಿಎ ಅಭ್ಯರ್ಥಿಯಾಗಿ ಜೆಕೆ ಕೃಷ್ಣಾರೆಡ್ಡಿ ಎಂಎಲ್ಎ ಆಗ್ತಾರೆ ಆದರಿಂದ ಮೈತ್ರಿ ಅಭ್ಯರ್ಥಿಗೆ ನಾವೆಲ್ಲಾ ಶ್ರಮವಹಿಸಿ ಮತ ನೀಡಿ ಪಾರ್ಲಿಮೆಂಟ್ ಗೆ ಕಳುಹಿಸಬೇಕಾಗಿದೆ ಎಂದು ತಿಳಿಸಿದರು. ಇನ್ನೂ ಚಿಕ್ಕಬಳ್ಳಾಪುರ ದಲ್ಲಿ ಹುಚ್ಚವೆಂಕಟ್ ಒಬ್ಬ ಇದ್ದಾನೆ ಅವನು ಮಾತನಾಡಿದ್ರೆ ತಲೆ ಬುಡ ಗೋತ್ತಾಗಲ್ಲಾ, ಕಾಂಗ್ರೆಸ್ ಸರ್ಕಾರ ಬಂದು 8 ತಿಂಗಳಾಗಿದೆ ಏನು ಅಭಿವೃದ್ದಿ ಮಾಡಿಲ್ಲಾ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಗೆ ಟಾಂಗ್ ಕೊಟ್ಟಿದ್ದಾರೆ.
ಸಿದ್ದರಾಮಯ್ಯ ನವರು ಸಾಲ ಮಾಡಿ ನಮ್ಮನ್ನೆಲ್ಲಾ ಸಾಲಗಾರರನ್ನಾಗಿ ಮಾಡಿದ್ದಾರೆ. 10 ಕೆಜಿ ಅಕ್ಕಿ ಅಂದ್ರು, ಪ್ರೀ ಕರೆಂಟ್ ಅಂದ್ರು ಕತ್ತಲೆ ಭಾಗ್ಯ ಕೊಟ್ಟಿದ್ದಾರೆ ಆದರಿಂದ ನಾವು ಕಾಂಗ್ರೆಸ್ ಗೆ ಮತ ನೀಡದೆ ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಎಂದು ಮತಯಾಚಿಸಿದ್ದಾರೆ. ಇನ್ನು ನಾನು ಸಹಾ ಲೋಕಸಭಾ ಚುನಾವಣೆಗೆ ಆಕ್ಟೀವ್ ಆಗಿದ್ದೆ ಆದರೆ ಪಕ್ಷದ ಸೂಚನೆಯಂತೆ ನಾನು ಮಲ್ಲೇಶ್ ಬಾಬುಗೆ ಟಿಕೆಟ್ ಕೊಡಿಸಿದ್ದೀನಿ ಮಲ್ಲೇಶ್ ಬಾಬು ನನಗೆ ಸ್ವಂತ ತಮ್ಮನಾಗಿದ್ದಾನೆ. ನನಗೆ ಮತ ನೀಡಿದಂತೆ ಈ ಬಾರೀ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು ಅವರನ್ನು ಗೆಲ್ಲಿಸಿಕೊಂಡು ಬರಬೇಕೆಂದು ಸಂಸದ ಮುನಿಸ್ವಾಮಿ ತಿಳಿಸಿದ್ದಾರೆ.
ಇನ್ನೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬೀಳಲಿದ್ದು ಮುಂದೆ ರಾಜ್ಯದಲ್ಲಿಯೂ ಮೈತ್ರಿ ಸರ್ಕಾರ ರಚನೆಯಾಗಲಿದೆ ಎಂದು ಸಂಸದ ಎಸ್ ಮುನಿಸ್ವಾಮಿ ಭವಿಷ್ಯವನ್ನು ನುಡಿದಿದ್ದಾರೆ.
Publisher: ಕನ್ನಡ ನಾಡು | Kannada Naadu