ಲೋಕಸಭಾ ಚುನಾವಣೆ 2024-ಅಬಕಾರಿ ಅಕ್ರಮಗಳ ಕುರಿತು ಮಾಹಿತಿ ನೀಡಲು ಶುಲ್ಕ ರಹಿತ ದೂರವಾಣಿ
05 Apr, 2024
ಬೆಂಗಳೂರು : ಲೋಕಸಭಾ ಚುನಾವಣೆ – 2024ನ್ನು ಮುಕ್ತ ಹಾಗೂ ಶಾಂತಿಯುತವಾಗಿ ನಡೆಸುವ ದೃಷ್ಟಿಯಿಂದ ಹಾಗೂ ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೇ ನಿರ್ಭೀತಿಯಿಂದ ಮತ ಚಲಾಯಿಸಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಅಬಕಾರಿ ಇಲಾಖೆಯು ಎಲ್ಲಾ ರೀತಿಯ ಕ್ರಮಗಳಿಗೆ ಸಾರ್ವಜನಿಕರ ಸಹಕಾರವನ್ನು ಕೋರಲಾಗಿದೆ ಎಂದು ಬೆಂಗಳೂರು ಉತ್ತರ ವಿಭಾಗ (ಜಾರಿ ಮತ್ತು ತನಿಖೆ) ಅಬಕಾರಿ ಜಂಟಿ ಅಯುಕ್ತರು ತಿಳಿಸಿದ್ದಾರೆ.
ರಾಜ್ಯ ಮತ್ತು ರಾಷ್ಟ್ರೀಯ ಕಾನೂನಿನಲ್ಲಿ ನಿಷೇಧಿಸಲ್ಪಟ್ಟ ಎನ್‍ಡಿಪಿಎಸ್ ವಸ್ತುಗಳ ಮಾರಾಟ, ದಾಸ್ತಾನು, ಸಾಗಾಣಿಕೆ, ಸೇವನೆ ಹಾಗೂ ಅನಧಿಕೃತ ನಕಲಿ ಕಳ್ಳಬಟ್ಟಿ, ಸೇಂದಿ, ರಕ್ಷಕರ ಸಿಬ್ಬಂದಿಗಳಿಗೆ ಮಾತ್ರ ಮಾರಾಟ ಮಾಡಬಹುದಾದ ಮದ್ಯವು ಸೇರಿದಂತೆ ಅನಧಿಕೃತವಾಗಿ ಮಾರಾಟ / ತಯಾರಿಕೆ ಇತ್ಯಾದಿ ಮದ್ಯ ತಯಾರಿಕೆ, ದಾಸ್ತಾನು, ಮಾರಾಟ ಮತ್ತು ಸಾಗಾಣಿಕೆ ಅಥವಾ ಅಬಕಾರಿ ಸಂಬಂಧಿತ ಯಾವುದೇ ಪದಾರ್ಥಗಳು ಕಂಡು ಬಂದಲ್ಲಿ ಸಾರ್ವಜನಿಕರು ಶುಲ್ಕ ರಹಿತ ದೂರವಾಣಿ ಸಂಖ್ಯೆ 1800–425–1285 (ಟೋಲ್ ಫ್ರೀ) ಗೆ ಅಥವಾ ಇ-ಮೇಲ್ ವಿಳಾಸ
jcebangnorth@gmail.com ಮೂಲಕ ದೂರು/ ಮಾಹಿತಿ /ಸುಳಿವು ನೀಡಲು ಸಂಪರ್ಕಿಸಬಹದು. ಅಥವಾ ಅಬಕಾರಿ ಜಂಟಿ ಆಯುಕ್ತರ ಕಚೇರಿ (ಜಾರಿ ಮತ್ತು ತನಿಖೆ) ಬೆಂಗಳೂರು ಉತ್ತರ ವಿಭಾಗ, ಬೆಂಗಳೂರು ಹೊಸ ಸಾರ್ವಜನಿಕ ಕಚೇರಿ ಕಟ್ಟಡಗಳ ಸಂಕೀರ್ಣ, ಕೆ.ಆರ್.ವೃತ್ತ, ನೃಪತುಂಗ ರಸ್ತೆ, ಬೆಂಗಳೂರು – 560001 ಅಥವಾ ದೂರವಾಣಿ ಸಂಖ್ಯೆ: 080-22210285 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Publisher: ಕನ್ನಡ ನಾಡು | Kannada Naadu