ಕನ್ನಡ ನಾಡು | Kannada Naadu

ಬೆಳಗಾವಿಯಲ್ಲಿ ಮಕ್ಕಳಿಗಾಗಿ ವಿಶೇಷ ಧಾರ್ಮಿಕ ಶಿಕ್ಷಣ ಶಿಬಿರ

04 Apr, 2024

ಕನ್ನಡನಾಡು ವರದಿ

ಬೆಳಗಾವಿ: ಸನಾತನ ಸಂಸ್ಕೃತಿಯ ಉಳಿವಿಗಾಗಿ ಮಕ್ಕಳಿಗಾಗಿ ಧಾರ್ಮಿಕ ಶಿಕ್ಷಣ ನೀಡುವ ಉದ್ದೇಶ ದಿಂದ ಹಲವಾರು ವರ್ಷಗಳಿಂದ ಬೆಳಗಾವಿ ನಗರದ ವಿಶ್ವ ಮಧ್ವ ಮಹಾ ಪರಿಷತ್ ಸಂಸ್ಥೆಯು ಪ್ರತಿ ವರ್ಷ ಬೇಸಿಗೆ ರಜೆಯ ಕಾಲದಲ್ಲಿ ರಾಣಿ ಚನ್ನಮ್ಮ ನಗರ ಬಡಾವಣೆಯ ಶ್ರೀ ಸತ್ಯ ಪ್ರಮೋದ ಸಭಾಗ್ರಹದಲ್ಲಿ ಧಾರ್ಮಿಕ ಶಿಬಿರ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

ಈ ಹಿನ್ನೆಲೆಯಲ್ಲಿ ಈ ವರ್ಷ ದಿನಾಂಕ 31-03-2024 ರಿಂದ 10-04-2024ರ ವರಗೆ ಹಮ್ಮಿಕೊಂಡಿದೆ. ಪಂ. ಪ್ರಮೋದಚಾರ್ಯ ಕಟ್ಟಿ ಯವರ ನೇತೃತ್ವದಲ್ಲಿ ಪಂ. ಶ್ರೀನಿಧಿ ಆಚಾರ್ಯ ಜಮನೀಸ್, ಪಂ.ಶ್ರೀನಿಧಿ ಆಚಾರ್ಯ ಬಲ್ಲರವಾಡ, ಪಂ. ಸಮೀರಾಣಾಚಾರ್ಯ ಪಾಂಗ್ರಿ, ವೈಭವ ಅಂಬೇಕರ ರವರು ವಿದ್ಯಾರ್ಥಿಗಳಿಗೆ ಸಂಧ್ಯಾವಂದನೆ, ಸ್ತೋತ್ರ -ಮಂತ್ರ ಪಠಣ,ವ್ಯಯಾಮ, ಯೋಗ,ಮುಂತಾದ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಬೋಧನೆ ಮಡುತ್ತಾರೆ.

ವಿದ್ಯಾರ್ಥಿಗಳಿಗೆ ಉಚಿತ ಊಟ ಉಪಹಾರ ವೆವಸ್ಥೆ ಕಲ್ಪಿಸಲಾಗಿದ್ದು ನರಸಿಂಹ ಸವದತ್ತಿ, ಅಚ್ಚುತ ಪ್ರಯಾಗ, ರಾಜೀವ ಜೋಶಿ, ಶೇಷಗಿರಿ ಕುಲಕರ್ಣಿ, ಶ್ರೀಧರ ಹಲಗತ್ತಿ, ಸುನಿಲ್ ಯಾರ್ದಿ, ರಾಘವೇಂದ್ರ ಕಟ್ಟಿ, ಪ್ರಸನ್ನ ಕುಲಕರ್ಣಿ, ಪ್ರಲ್ಹಾದ ವೈದ್ಯ ಮುಂತಾದವರು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದಾರೆ.

Publisher: ಕನ್ನಡ ನಾಡು | Kannada Naadu

Login to Give your comment
Powered by