Prashanth Hebbar | Bangalore

ಯಾರೀತ ಬಿಲ್‌ ಬ್ರೈಸನ್, ಈತನ ನಿವೃತ್ತಿ ಸುದ್ದಿ ಕೇಳಿ ಅಭಿಮಾನಿಗಳು ಮರುಗಿದ್ದೇಕೆ

28 Sep, 2023

ನಮ್ಮ ದೇಶದಲ್ಲಿ ಸಚಿನ್‌ ಟೆಂಡುಲ್ಕರ್‌ನ ನಿವೃತ್ತಿ ಸುದ್ದಿ ಕೇಳಿ ಅಥವಾ ಧೋಣಿಯ ನಿವೃತ್ತಿ ಸುದ್ದಿ ಕೇಳಿ ಮರುಗಿದ ಬಹಳ  ಜನರನ್ನ ನೋಡಿದ್ದೇವೆ ಆದರೆ ಇದೆ ವಾರ ಬ್ರಿಟನ್ ನ ʻಬಿಲ್‌ ಬ್ರೈಸನ್ʼ ಎಂಬ ಲೇಖಕನ ನಿವೃತ್ತಿ ಸುದ್ದಿ ಅವರ ಅಭಿಮಾನಿಗಳಲ್ಲಿ ಗದ್ದಲವೆಬ್ಬಿಸಿತು. ಬ್ರೈಸನ್ ಇನ್ನು ಬರೆಯುವುದಿಲ್ಲವಂತೆ, ಇವರು ತಮ್ಮ ಲೇಖನಿಯನ್ನು ಯಾವತ್ತಿಗೂ ಕೆಳಗಿಟ್ಟುಬಿಟ್ಟಿದ್ದಾರಂತೆ ಎಂದೆಲ್ಲಾ ಜನ ಮಮ್ಮಲಮರುಗಿದರು.

ಅದರಲ್ಲಿಯೂ, ದೆಹಲಿಯ Hindustan Times ಅಂತೂ "Bill Bryson is retiring, woe be us", ಅಂತ ಸಾರಿತು. ನನಗೂ, ʻಓ ಬ್ರೈಸನ್ ಇನ್ನು ಬರೆಯುವುದೇ ಇಲ್ಲವಲ್ಲ,ʼ ಎಂದು ಬೇಸರವಾಯಿತು. ನನಗೆ ನೆನಪಿದ್ದ ಹಾಗೆ ಈ ರೀತಿಯಾಗಿ ಒರ್ವ ಬರಹಗಾರ ಇಷ್ಟೋಂದು ಸುದ್ದಿ ಗದ್ದಲದಿಂದ ನಿವೃತ್ತಿ ಹೋಂದುತ್ತಿರುವುದು ಇದು ಮೋದಲನೆಯ ಬಾರಿ. ಹಾಗಾದರೆ ಈ ಬ್ರೈಸನ್ ರಲ್ಲಿ ಅಂತಹಾ ವಿಷೇಶತೆ ಏನಿದೆ?


ಛಾಯಾಚಿತ್ರ: https://now.uiowa.edu/2016/05/author-bill-bryson-receive-honorary-degree-ui

ಬ್ರೈಸನ್ ವಿಶಿಷ್ಟವಾದ ಲೇಖಕರೇ ಸರೀ. ಇವರು ಶುರುವಿನಲ್ಲಿ ಪತ್ರಕರ್ತರಾಗಿದ್ದು ಆಮೇಲೆ ʻಟ್ರಾವೆಲಾಗ್ʼ‌ ಹಾಗೂ ವೈಜ್ಞಾನಿಕ ಲೇಖಕರಾಗಿ ಪ್ರಜ್ವಲಿಸಿದರು. ಅಫ್‌ ಕೋರ್ಸ್‌, ನಾನು ಇಲ್ಲಿ ಬ್ರೈಸನ್ ನ ಜೀವನ ಚರಿತ್ರೆ ಕೋಡಲಿಚ್ಚಿಸುತ್ತಿಲ್ಲ. ಅವರು ಜಗತ್ತನ್ನು ನೋಡುವ ಶೈಲಿಯನ್ನು ತಮ್ಮ ಮುಂದಿಡಲಿಚ್ಚಿಸುತ್ತೇನೆ.

ʼʼI came from Des Moines. Somebody had to.'' ಇದು ಬ್ರೈಸನ್ ನ ''The Lost Continent'' ಎನ್ನುವ ಟ್ರಾವೆಲಾಗ್ ಕಾದಂಬರಿಯ ಮೋದಲನೆಯ ಸಾಲು. ಅವರ ಆ ಮೋದಲನೆಯ ವಾಕ್ಯದಲ್ಲಿ ಅಡಗಿದೆ ಇಡೀ ಕಥೆಯ ಸ್ವಾರಸ್ಯ. ʼʼSomebody had to,'' ಅಂದ್ರೆ ಏನರ್ಥ. ಒಂದು ಕಡೆ, ಆ ವಾಕ್ಯದಲ್ಲಿ ಏನೋ ಸಸ್ಪೆನ್ಸ್‌ ಅಡಗಿದ ಹಾಗಿದ್ರೆ, ಮತ್ತೋಂದು ಕಡೆ ಬಹಳ ತಮಾಷೆಯಾಗಿ ಕಂಡುಬರುತ್ತದೆ. ಒಂದು ರೀತಿಯಲ್ಲಿ ಈ ವಾಕ್ಯ ಮುಂಬರುವ ಪುಟಗಳು ಹೇಗಿರಬಹುದು ಎಂದು ಸುಳಿವು ಕೋಡುತ್ತಿರುವಂತಿದೆ. The Lost Continent ನಲ್ಲಿ, ಬ್ರೈಸನ್ ಅಮೇರಿಕದ ಸಣ್ಣ ಪುಟ್ಟ ಹಳ್ಳಿಗಳು, ಹೈವೇ ಜೀವನವಾಧಾರಿತ ಸಣ್ಣ ಟೌನ್ ಗಳು ಹೇಗೆ ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿವೆ ಎನ್ನುವುದರ ಚಿತ್ರಣ ತಮ್ಮದೇ ಆದ ಹಿಲಾರಿಯಸ್‌ ವೇ ನಲ್ಲಿ ಬಿಡಿಸುತ್ತಾರೆ.

ಇನ್ನು ಅವರ ʼʼA Walk in the Woods,'' ಕಾದಂಬರಿಯ ಓಪನಿಂಗ್‌ ಹೇಗಿದೆ ನೊಡಿ: Not long after I moved with my family to a small town in New Hampshire I happened upon a path that vanished into a wood on the edge of town.  ಆಡಂಬರವಿಲ್ಲದ, ಡೈರೆಕ್ಟ್‌ ಮಾತು. ಹೀಗೆ ಶುರು ಮಾಡುತ್ತ  ಅಮೇರಿಕದ ಅತ್ಯಂತ ಕಠಿಣವಾದ ಟ್ರೆಕ್ಕಿಂಗ್ ‌ ಟ್ರೇಲ್‌ ಅನ್ನಿಸಿಕೋಂಡಿರುವ ಅಪಲೇಚಿಯನ್‌ ಟ್ರೇಲ್‌ ನಲ್ಲಿ ತಾವು ನಡೆದು ಆ ಟ್ರೆಕ್ಕಿಂಗನ್ನು ಮುಗಿಸಿದ ಕಥೆಯನ್ನು ಹೇಳುತ್ತಾರೆ. ಅತೀ ರೋಮಾಂಚ‌ಕಾರಿಯಾಗಿಯೂ, ಪ್ರತೀ ಪುಟದಲ್ಲಿಯೂ ಒಮ್ಮೆಯಾದರೂ ನಗಿಸಿದೇ ಇರದ ಬರವಣಿಗೆಯದು.

ಬ್ರೈಸನ್ ನ ನಾನೋದಿದ ಮತ್ತೊಂದು  ಕೃತಿಯೆಂದರೆ, ʼʼA Really Short History of Nearly Everything.ʼʼ ಇದು ನಮ್ಮ ಜಗತ್ತಿನ ಒಂದು ಕಿರು ಪರಿಚಯ. ಸಣ್ಣ ಮಕ್ಕಳ (ಹಾಗೂ ದೋಡ್ಡ ಮಕ್ಕಳಿಗೂ ಕೂಡ) ಮನಸ್ಸಿಗೆ ನಾಟುವಂತೆ  ಸ್ವಾರಸ್ಯಕರವಾಗಿ ಬರೆದಿದ್ದಾರೆ.




ಬ್ರೈಸನ್ ರಂತಹ ಬರಹಗಾರರು ನಮ್ಮಲ್ಲಿ ಯಾರಿರಬಹುದು ಎಂದು ಯೋಚಿಸಿದರೆ ನನಗೆ ನೆನಪಾಗುವುದು ನಮ್ಮ ಬಿ.ಜಿ.ಎಲ್.‌ ಸ್ವಾಮಿಯವರು. ಅವರ ʼಹಸುರು ಹೋನ್ನುʼ, ʼನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕ, 'ಸಸ್ಯ ಪುರಾಣ,' ʼಬೃಹದಾರಣ್ಯಕ,ʼ ʼಕಾಲೇಜು ರಂಗ,ʼ ಒಂದೇ ಎರಡೇ,  ಎಲ್ಲವೂ ಅಧ್ಭತ ಕೃತಿಗಳು. ನಾನಾದರೋ ಬಿ.ಜಿ.ಎಲ್.‌ ಸ್ವಾಮಿಯವರು ಬ್ರೈಸನ್ ಗಿಂತ ಒಂದುಗೈ ಮೇಲೆ ಎಂದು ಭಾವಿಸುವೆ. ಸ್ವಾಮಿಯವರ ಬಗ್ಗೆ ಮುದೆಂದಾದರು ಒಮ್ಮೆ ಬರೆಯುತ್ತೇನೆ.

ಬ್ರೈಸನ್ ನಿವೃತ್ತಿ ಸುದ್ದಿ ಅವರ ಓದುಗರಲ್ಲಿ ಇಷ್ಟು ಟರ್ಬ್ಯಲೆಂಸ್‌ ಮೂಡಿಸಿದ್ದನ್ನು ನೋಡಿ ಖುಷಿಯಾಯಿತು. ಬ್ರೈಸನ್ ರಂತಹ ಮತ್ತೊಬ್ಬ ಬರಹಗಾರ ಎಂದರೆ ಡಾಗ್ಲಸ್‌ ಆಡಮ್ಸ್.‌ ಅವರ ಬಗ್ಗೆಯೂ ಒಮ್ಮೆ ಸಂದರ್ಭ ಬಂದಾಗ ಬರೆಯುತ್ತೇನೆ.

ಅಲ್ಲಿಯವರೆಗೆ ಬ್ರೈಸನ್ ರ ಕೃತಿಗಳನ್ನು ಖಂಡಿತಾ ಓದಿ, ಆನಂದಿಸಿರಿ.

ಮತ್ತೆ ಭೇಟಿಯಾಗೋಣ.

Publisher: Prashanth Hebbar | Bangalore

Login to Give your comment
Powered by