ಕನ್ನಡ ನಾಡು | Kannada Naadu

ಸ್ಪರ್ಧಾತ್ಮಕ ಪರೀಕ್ಷೆಗಳ ಸ್ಪರ್ಧಾರ್ಥಿಗಳು ಸಮಗ್ರ ಓದಿಗೆ ಒತ್ತು ನೀಡಿ - ಮಲ್ಲಿಕಾರ್ಜುನ ಬಾಲದಂಡಿ

09 Feb, 2026

ಮೈಸೂರು / ಬೆಂಗಳೂರು : ಯುಪಿಎಸ್‍ಸಿ ಮತ್ತು ಕೆಪಿಎಸ್‍ಸಿ ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳು ಕಠಿಣ ಸವಾಲು. ಇದೊಂದು ಸುದೀರ್ಘ ಪಯಣ. ಹೀಗಾಗಿ ಒಂದೇ ವಿಷಯದ ಕಡೆ ಗಮನಹರಿಸದೆ ಸಮಗ್ರ ಓದಿಗೆ ಒತ್ತು ನೀಡಿ ಎಂದು ಜಿಲ್ಲಾ ಪೊಲೀಸ್ ವರಿμÁ್ಠಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.


ಅವರು ಇಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಏರ್ಪಡಿಸಿದ್ದ ಐಎಎಸ್ ಮತ್ತು ಕೆಎಎಸ್ ಪರೀಕ್ಷೆಗಳ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಮತ್ತು ಇಂಟರ್‍ನೆಟ್‍ನಿಂದ ಎಲ್ಲ ಮಾಹಿತಿ ಸುಲಭವಾಗಿ ಸಿಗುತ್ತಿದ್ದರೂ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಕಠಿಣ ಪರಿಶ್ರಮ, ತಾಳ್ಮೆ ಮತ್ತು ನಿರಂತರ ಪ್ರಯತ್ನ ಅಗತ್ಯ. ಎμÉ್ಟೀ ಬುದ್ಧಿವಂತಿಕೆ ಇದ್ದರೂ ನಿರಂತರ ಓದು ಇರಬೇಕು. ಯುವಕರು ಮನಸ್ಸಿಟ್ಟು ಪ್ರಯತ್ನ ಮಾಡಿದಾಗ ಎಂತಹ ಹುದ್ದೆಯಾದರೂ ಪಡೆಯಬಹುದು. ಹೀಗಾಗಿ ನಿಮ್ಮ ಸಮಯವನ್ನು ಸಂಪೂರ್ಣವಾಗಿ ಬಳಕೆಮಾಡಿಕೊಂಡು ಯಶಸ್ಸುಗಳಿಸಿ ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.

ಹಿಂದಿನ ದಿನಗಳಿಗೆ ಹೋಲಿಸಿದರೆ ಇಂದು ಸ್ಪರ್ಧೆ ತೀವ್ರವಾಗಿದ್ದು, ಒಂದು ಹುದ್ದೆಗೆ ಅನೇಕ ಅಭ್ಯರ್ಥಿಗಳು ಅರ್ಜಿ ಹಾಕುತ್ತಾರೆ. ಕಳೆದ ಅನೇಕ ವರ್ಷಗಳಿಂದ ರಾಜ್ಯ ಸರ್ಕಾರ ಅನೇಕ ಪರೀಕ್ಷೆಗಳನ್ನು ನಡೆಸದಿದ್ದರೂ, ಇದೀಗ ಎಲ್ಲವನ್ನೂ ಆಯೋಜಿಸಲು ತೀರ್ಮಾನಿಸಿದೆ. ಒಳಮೀಸಲಾತಿ ಗೊಂದಲಗಳು ಬಹುತೇಕ ಪರಿಹಾರವಾಗಿವೆ. ಅಭ್ಯರ್ಥಿಗಳು ಸಾಮಾಜಿಕ ಮಾಧ್ಯಮ ಮತ್ತು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ, ಓದಿಗೆ ಗಮನ ಹರಿಸಬೇಕು. ಶ್ರೀಮಂತರು ಅಥವಾ ದುಡ್ಡು ಇರುವವರಿಗೆ ಮಾತ್ರ ಸರ್ಕಾರಿ ಕೆಲಸ ಸಿಗುತ್ತದೆ ಎಂಬ ನಕಾರಾತ್ಮಕ ಚಿಂತನೆ ಬೇಡ. ಕುರಿ ಕಾಯುವವರು, ಬಡ ಕಾರ್ಮಿಕರೂ ಮತ್ತು ಅವರ ಮಕ್ಕಳು ಸಹ ಯುಪಿಎಸ್‍ಸಿ ಪಾಸ್ ಮಾಡಿರುವ ಉದಾಹರಣೆಗಳಿವೆ ಎಂದು ಹೇಳಿದರು.

ಕಾಲೇಜಿನ ಯುವಕರು ಕ್ಯಾಂಪಸ್‍ಗಳಲ್ಲಿ ಇನ್ನಿತರ ಕೆಟ್ಟ ಚಟುವಟಿಕೆಗಳಿಗೆ ಬಲಿಯಾಗದೆ ಓದಿನ ಕಡೆ ಗಮನಹರಿಸಿ. ಸಾಮಾಜಿಕ ಮಾಧ್ಯಮದ ಹಿಂದೆ ಓಡದೆ ನಿಮ್ಮ ಗುರಿ ಹಿಂದೆ ಓಡಿ ಎಂದರು.
ಆಡಳಿತ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕಿ ಸಾಧನಾ ಎ. ಪೋಟೆ ಅವರು ಮಾತನಾಡಿ, ಯುಪಿಎಸ್‍ಸಿ ಅಂತಹ ಪರೀಕ್ಷೆಗಳಲ್ಲಿ ಕನ್ನಡದ ಯುವಕ, ಯುವತಿಯರು ಹೆಚ್ಚೆಚ್ಚು ಪಾಲ್ಗೊಂಡು ಕೆಲಸಗಿಟ್ಟಿಸಿ, ರಾಜ್ಯದ ಹಿರಿಮೆಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ಕರೆ ನೀಡಿದರು.

ಸ್ಮರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವವರು ಮುಖ್ಯವಾಗಿ ಶ್ರದ್ಧೆಯಿಂದ ಕಠಿಣವಾಗಿ ನಿರಂತರವಾಗಿ ಅಭ್ಯಸಿಸಿ. ಪಠ್ಯಕ್ರಮದ ಎಲ್ಲ ಅಂಶಗಳನ್ನು ತಿಳಿದಿರಬೇಕು. ಮೊದಲು ಪೂರ್ವಭಾವಿ ಪರೀಕ್ಷೆಗೆ ಒತ್ತು ನೀಡಿ, ಬಳಿಕ ಮುಖ್ಯ ಪರೀಕ್ಷೆಗೆ ಗಮನಹರಿಸಿ. ಎನ್‍ಸಿಆರ್‍ಟಿ ಪುಸ್ತಕದ 7, 8, 9ನೇ ತರಗತಿಯ ಪಠ್ಯಕ್ರಮವನ್ನು ಪೂರ್ಣ ಪಟ್ಟಿಯಾಗಿ ಓದಿಕೊಳ್ಳಿ. ಅದೇ ನಿಮಗೆ ತಳಮಟ್ಟದ ಅಡಿಪಾಯ. ಇದು ನಿಮಗೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗಲಿದೆ ಎಂದು ಸಲಹೆ ನೀಡಿದರು.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾμÁ ವೈವಿಧ್ಯತೆಯನ್ನು ಸಮರ್ಥವಾಗಿ ಬಳಸುವುದು ಅಭ್ಯರ್ಥಿಯ ಯಶಸ್ಸಿಗೆ ಪ್ರಮುಖ ಅಡಿಪಾಯ. ಕರ್ನಾಟಕದಲ್ಲಿ, ಪರೀಕ್ಷೆಗಳು ಕೇವಲ ಜ್ಞಾನವನ್ನμÉ್ಟೀ ಅಲ್ಲದೆ, ಅಭ್ಯರ್ಥಿಯ ಭಾμÁ ಪ್ರಾವೀಣ್ಯತೆಯನ್ನೂ ಓರೆಗೆ ಹಚ್ಚುತ್ತವೆ. ಮೊದಲನೆಯದಾಗಿ, ದ್ವಿಭಾμÁ ಪ್ರಶ್ನೆಪತ್ರಿಕೆಗಳು (ಕನ್ನಡ ಮತ್ತು ಇಂಗ್ಲೀμï) ಇರುವುದರಿಂದ, ಅಭ್ಯರ್ಥಿಯು ಪಾರಿಭಾಷಿಕ ಶಬ್ದಗಳ ಮೇಲೆ ಹಿಡಿತ ಸಾಧಿಸುವುದು ಅವಶ್ಯಕ. ಎರಡನೆಯದಾಗಿ, ಕಡ್ಡಾಯ ಕನ್ನಡ ಪತ್ರಿಕೆಯು ಆಡಳಿತಾತ್ಮಕ ಕೆಲಸಕ್ಕೆ ಅಗತ್ಯವಿರುವ ಭಾμÁ ಕೌಶಲ್ಯವನ್ನು ಪರೀಕ್ಷಿಸುತ್ತದೆ.

ಪ್ರಾದೇಶಿಕ ಭಾμÉಗಳ ವೈವಿಧ್ಯತೆಯು ಸಂದರ್ಶನದ ಹಂತದಲ್ಲಿ ಸ್ಥಳೀಯ ಸಮಸ್ಯೆಗಳನ್ನು ವಿವರಿಸಲು ಮತ್ತು ಜನರೊಂದಿಗೆ ಸಂವಹನ ನಡೆಸಲು ಪೂರಕವಾಗಿರುತ್ತದೆ. ಭಾμÁ ವೈವಿಧ್ಯತೆಯು ವಿವಿಧ ಸಾಹಿತ್ಯಿಕ ಮತ್ತು ಐತಿಹಾಸಿಕ ಹಿನ್ನೆಲೆಗಳನ್ನು ಅರಿಯಲು ಸಹಾಯ ಮಾಡುತ್ತದೆ, ಇದು ಸಾಮಾನ್ಯ ಜ್ಞಾನ ಪತ್ರಿಕೆಯಲ್ಲಿ ಹೆಚ್ಚಿನ ಅಂಕಗಳಿಸಲು ಸಹಕಾರಿಯಾಗಲಿದೆ ಎಂದು ಸಲಹೆ ನೀಡಿದರು.

ಕೆಎಸ್‍ಒಯು ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಮಾತನಾಡಿ, ನಿಮ್ಮನ್ನು ನೀವು ನಂಬಿ ಓದಿನ ಕಡೆ ಗಮನಹರಿಸಿ, ನಾನು ಐಪಿಎಸ್, ಐಎಎಸ್/ಕೆಎಎಸ್ ಆಗಬೇಕು ಎಂದು ಕನಸು ಇಟ್ಟುಕೊಂಡು ಅದರ ಕಡೆ ಹೆಚ್ಚು ಗಮನಹರಿಸಿ. ನೀವು ನಮ್ಮ ವಿಶ್ವವಿದ್ಯಾನಿಲಯಕ್ಕೆ ತರಬೇತಿ ಪಡೆಯಲು ಬಂದಿದ್ದೀರಿ ಪರೀಕ್ಷೆಯಲ್ಲಿ ಯಶಸ್ಸುಗಳಿಸಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯ ಪರೀಕ್ಷಾಂಗ ಕುಲಸಚಿವ ಪ್ರೊ. ಸಿ.ಎಸ್. ಆನಂದ್ ಕುಮಾರ್, ಹಣಕಾಸು ಅಧಿಕಾರಿ ಡಾ. ಎಸ್. ನಿರಂಜನ್ ರಾಜ್, ಅಧ್ಯಯನ ಕೇಂದ್ರದ ಡೀನ್ ಡಾ. ಎನ್.ಆರ್. ಚಂದ್ರೇಗೌಡ, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಿದ್ದೇಶ್ ಹೊನ್ನೂರ್, ಗಣೇಶ್ ಕೆ.ಜಿ.ಕೊಪ್ಪಲ್ ಉಪಸ್ಥಿತರಿದ್ದರು.

Publisher: ಕನ್ನಡ ನಾಡು | Kannada Naadu

Login to Give your comment
Powered by