ಕನ್ನಡ ನಾಡು | Kannada Naadu

ಶ್ರೇಯಾ ಮಹೇಶ್ ರಂಗ ಪ್ರವೇಶದ ಸಂಭ್ರಮ: ಭಾರತದ ಕಲೆ–ಸಂಸ್ಕೃತಿ ವೈಭವಕ್ಕೆ ನ್ಯಾ. ಗೋಪಾಲಗೌಡ ಕೊಂಡಾಟ

04 Feb, 2026


ಬೆಂಗಳೂರು: ಕಲೆ, ಸಾಹಿತ್ಯ, ನಾಟ್ಯ ಹಾಗೂ ಸಂಸ್ಕಾರಗಳ ವಿಚಾರದಲ್ಲಿ ಭಾರತ ದೇಶವು ಇಡೀ ಪ್ರಪಂಚದಲ್ಲಿಯೇ ಶ್ರೀಮಂತ ರಾಷ್ಟ್ರವೆಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ನ್ಯಾ. ಗೋಪಾಲಗೌಡ ಅಭಿಪ್ರಾಯಪಟ್ಟರು.


ಮಲ್ಲೇಶ್ವರಂನ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಆಯೋಜಿಸಲಾಗಿದ್ದ ವಕೀಲರಾದ ಆರ್. ಮಹೇಶ್ ಮತ್ತು ಆಶಾ ದಂಪತಿಗಳ ಸುಪುತ್ರಿ ಕು. ಶ್ರೇಯಾ ಮಹೇಶ್ ಅವರ ರಂಗ ಪ್ರವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತವು ಆರ್ಥಿಕ ಅಥವಾ ಇತರ ಕೆಲವು ಕ್ಷೇತ್ರಗಳಲ್ಲಿ ಎಲ್ಲಾ ವಿಭಾಗಗಳಲ್ಲೂ ಶ್ರೀಮಂತಿಕೆಯನ್ನೂ ಹೊಂದಿರದೇ ಇರಬಹುದು. ಆದರೆ ಕಲೆ ಮತ್ತು ಸಂಸ್ಕೃತಿಯ ವಿಷಯದಲ್ಲಿ ನಮ್ಮ ದೇಶ ಎಂದಿಗೂ ಹಿಂದೆ ಬಿದ್ದಿಲ್ಲ. ಸಾವಿರಾರು ವರ್ಷಗಳ ಪರಂಪರೆ, ಸಂಸ್ಕಾರ, ಸಾಹಿತ್ಯ ಮತ್ತು ನಾಟ್ಯ ಪರಂಪರೆ ನಮ್ಮ ಹೆಮ್ಮೆಯಾಗಿದೆ ಎಂದು ಅವರು ಹೇಳಿದರು.

ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಹೊಸ ಪೀಳಿಗೆಯಲ್ಲಿ ಪರಂಪರೆಯ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

Publisher: ಕನ್ನಡ ನಾಡು | Kannada Naadu

Login to Give your comment
Powered by