ಕನ್ನಡ ನಾಡು | Kannada Naadu

ಸರ್ಕಾರಿ ವೈದ್ಯರುಗಳು ಖಾಸಗಿ ಸೇವೆಗಳ ನಿಯಂತ್ರಣಕ್ಕೆ ಕ್ರಮ- ಸಚಿವ ದಿನೇಶ್ ಗುಂಡೂರಾವ್

29 Jan, 2026



ಬೆಂಗಳೂರು,  ಸರ್ಕಾರಿ ಆಸ್ಪತ್ರೆಯ ವೇಳೆಯ ನಂತರ ಖಾಸಗಿ ವೃತ್ತಿ ಮಾಡಲು ಈ ಹಿಂದೆ ಸರ್ಕಾರ ಅನುಮತಿ ನೀಡಲಾಗಿತ್ತು. ಸರ್ಕಾರಿ ವೈದ್ಯರುಗಳು ಕೊರತೆಯ ಕಾರಣ ಸರ್ಕಾರಿ ಆಸ್ಪತ್ರೆಗಳ ಸೇವೆ ಕುಂಠಿತವಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗಳ ಸೇವೆಯನ್ನು ಬಲಪಡಿಸಬೇಕಿದೆ. ಈಗಾಗಲೇ ಚಾಲ್ತಿಯಲ್ಲಿರುವ ಸರ್ಕಾರಿ ಸದರಿ ಸುತ್ತೋಲೆಯನ್ನು ಪರಿಷ್ಕರಿಸಿ ಸರ್ಕಾರಿ ಆಸ್ಪತ್ರೆಯ ವೇಳೆಯ ನಂತರ ವೈದ್ಯರುಗಳು ಎಮರ್ಜೆನ್ಸಿ ಕೇಸುಗಳನ್ನು ತೆಗೆದುಕೊಳ್ಳಬಾರದು. ಒಳರೋಗಿಗಳ ಸೇವೆ, ಕನ್ಸಲ್ಟೇಷನ್ ಸೇವೆಗೆ ಮಾತ್ರ ಸೀಮಿತಗೊಳಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ದಿನೇಶ್ ಗುಂಡೂರಾವ್ ತಿಳಿಸಿದರು.

ಇಂದು ವಿಧಾನಸಭೆಯ ಸದನದ ಪ್ರಶ್ನೋತ್ತರ ವೇಳೆಯಲ್ಲಿ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಇವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದ ಎಲ್ಲಾ ಸಮುದಾಯ ಆರೋಗ್ಯ ಕೇಂದ್ರಗಳು, ಸಾರ್ವಜನಿಕ ಆಸ್ಪತ್ರೆಗಳು, ಉಪವಿಭಾಗೀಯ ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆಗಳು ಮತ್ತು ಪ್ರಮುಖ ಸರ್ಕಾರಿ ಆಸ್ಪತ್ರೆಗಳು ದಿನದ 24 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸುತ್ತಿದ್ದು, ತುರ್ತು ಚಿಕಿತ್ಸೆಗಾಗಿ ವೈದ್ಯರು ಸದಾಕಾಲ ಲಭ್ಯವಿರಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ಆಡಳಿತ ಸುಧಾರಣೆ ಆಯೋಗವು ಶಿಫಾರಸ್ಸು ಮಾಡಿರುವಂತೆ ಸರ್ಕಾರಿ ವೈದ್ಯರುಗಳು ಸರ್ಕಾರಿ ಕೆಲಸಗಳಿಗೆ ತೊಂದರೆಯಾಗದಂತೆ ಖಾಸಗಿ ನಿರ್ವಹಿಸಬೇಕು ಎಂದರು.

ಇತ್ತೀಚೆಗೆ ಹಲವು ದೂರುಗಳು ದಾಖಲಾದ ಹಿನ್ನೆಲೆಯಲ್ಲಿ ಇದಕ್ಕೆ ಕಡಿವಾಣ ಹಾಕಲು ಸರ್ಕಾರಿ ವೈದ್ಯರುಗಳ ಖಾಸಗಿ ಸೇವೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಯೋಚಿಸಿ ಈ ಹಿಂದೆ ಇದ್ದ ಸುತ್ತೋಲೆಯನ್ನು ಪರಿಷ್ಕರಿಸಲಾಗುತ್ತಿದೆ. ವೈದ್ಯರುಗಳ ತಮ್ಮ ಖಾಸಗಿ ಸೇವೆಯನ್ನು ಸರ್ಕಾರಕ್ಕೆ ಕಡ್ಡಾಯವಾಗಿ ಘೋಷಿಸಬೇಕು ಎಂದು ವಿಧಾನಸಭೆಯಲ್ಲಿ ತಿಳಿಸಿದರು.

Publisher: ಕನ್ನಡ ನಾಡು | Kannada Naadu

Login to Give your comment
Powered by