CreamA Cream article
Article

ಜನಸೇವೆಯ ಮೂಲಕ ಎನ್.ಆರ್. ರಮೇಶ್ ಜನ್ಮದಿನಾಚರಣೆ: ಸಮಾಜಮುಖಿ ಕಾರ್ಯಕ್ರಮಗಳ ಅಬ್ಬರ

ಕನ್ನಡ ನಾಡು

ಬೆಂಗಳೂರು : ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷರು ಹಾಗೂ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕರಾದ ಶ್ರೀ ಎನ್.ಆರ್. ರಮೇಶ್ ಅವರ ಜನ್ಮದಿನಾಚರಣೆಯನ್ನು ಅವರ ಅಭಿಮಾನಿಗಳು ಮತ್ತು ‘ಎನ್.ಆರ್.ಆರ್ ಯುವ ಬ್ರಿಗೇಡ್’ ವತಿಯಿಂದ ಹತ್ತಾರು ಜನಪರ ಹಾಗೂ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಮುಖ್ಯಾಂಶಗಳು:

ಈ ಸಂದರ್ಭದಲ್ಲಿ ಮಾತನಾಡಿದ ಬ್ರಿಗೇಡ್‌ನ ಪದಾಧಿಕಾರಿಗಳು, "ಜನ್ಮದಿನವು ಕೇವಲ ಆಚರಣೆಯಾಗದೆ ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುವ ವೇದಿಕೆಯಾಗಬೇಕು ಎಂಬ ಶ್ರೀ ಎನ್.ಆರ್. ರಮೇಶ್ ಅವರ ಆಶಯದಂತೆ ಈ ಎಲ್ಲಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ" ಎಂದರು. ಬರುವ ಜನವರಿ 18ರ ಭಾನುವಾರದಂದು ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಅಭಿಮಾನಿಗಳು ಹಾಗೂ ಡಾ. ರಾಜ್‌ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ಸದಸ್ಯರು ಆಗಮಿಸಿ ಶುಭ ಕೋರಲಿದ್ದಾರೆ.

Read More