

ಜ. 17 ರಂದು ತುಮಕೂರಿನಲ್ಲಿ ಜಗದ್ಗುರು ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ ಅವರ ದಿವ್ಯ ‘ಪಾದುಕಾ ದರ್ಶನ’ ಹಾಗೂ ಪ್ರವಚನ ಕಾರ್ಯಕ್ರಮ

ತುಮಕೂರು: “ಗುರುಬ್ರಹ್ಮ ಗುರುರ್ವಿಷ್ಣು, ಗುರುದೇವೋ ಮಹೇಶ್ವರ, ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ” ಎಂಬ ಪವಿತ್ರ ಶ್ಲೋಕದಂತೆ, ಅಧ್ಯಾತ್ಮದ ಬೆಳಕಿನಿಂದ ಭಕ್ತರ ಬಾಳನ್ನು ಬೆಳಗುತ್ತಿರುವ ಸನಾತನ ಹಿಂದೂ ಧರ್ಮದ ಪ್ರಬಲ ಧರ್ಮಗುರುಗಳು ಹಾಗೂ ನಾಣಿಜಧಾಮದ ತಪೋನಿಧಿಗಳಾದ ಜಗದ್ಗುರು ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ ಅವರ ದಿವ್ಯ ಪಾದುಕೆಗಳ ದರ್ಶನೋತ್ಸವವು ಇದೀಗ ಕಲ್ಪತರು ನಾಡು ತುಮಕೂರಿನಲ್ಲಿ ನೆರವೇರಲಿದೆ.
ಜಗದ್ಗುರು ರಾಮಾನಂದಾಚಾರ್ಯ ದಕ್ಷಿಣ ಪೀಠ ನಾಣಿಜಧಾಮದ (ರತ್ನಾಗಿರಿ) ಈ ಮಂಗಲಕರ “ಪಾದುಕಾ ದರ್ಶನ ಕಾರ್ಯಕ್ರಮ”ವು ಇದೇ ಬರುವ ಜನವರಿ 17, 2026ರ ಶನಿವಾರದಂದು ನಗರದ ಬಿ.ಎಚ್. ರಸ್ತೆಯ ಭೀಮಸಂದ್ರದಲ್ಲಿರುವ “ಶ್ರೀ ಗಣಪತಿ ಕಲ್ಯಾಣ ಮಂಟಪ”ದಲ್ಲಿ ಅದ್ದೂರಿಯಾಗಿ ಆಯೋಜನೆಗೊಂಡಿದೆ. ಅಂದು ಬೆಳಿಗ್ಗೆ 9 ಗಂಟೆಯಿಂದಲೇ ಕಾರ್ಯಕ್ರಮಗಳು ಆರಂಭವಾಗಲಿದ್ದು, ಸದ್ಗುರುಗಳ ಪವಿತ್ರ ಪಾದುಕೆಗಳ ದರ್ಶನ ಹಾಗೂ ಭಕ್ತರ ಆತ್ಮೋದ್ಧಾರಕ್ಕಾಗಿ ಗುರುಗಳ ಅಮೃತಮಯ ಪ್ರವಚನವು ನಡೆಯಲಿದೆ. ಈ ಪವಿತ್ರ ಕಾರ್ಯಕ್ರಮದ ಅಂಗವಾಗಿ ಸಂಸ್ಥಾನದ ವತಿಯಿಂದ ವಿವಿಧ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಳ್ಳಲಾಗಿದೆ.
ರಾಮಾನಂದ ಸಂಪ್ರದಾಯದ ತುಮಕೂರು ಜಿಲ್ಲಾ ಸೇವಾ ಸಮಿತಿಯ ಸಾರಥ್ಯದಲ್ಲಿ ನಡೆಯುವ ಈ ಆಧ್ಯಾತ್ಮಿಕ ಸತ್ಸಂಗಕ್ಕೆ ಸಮಸ್ತ ಸದ್ಭಕ್ತರು ತಮ್ಮ ಸಕುಟುಂಬ ಸಪರಿವಾರ ಹಾಗೂ ಬಂಧು ಮಿತ್ರರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಈ ದಿವ್ಯ ಸನ್ನಿಧಿಯಲ್ಲಿ ಪಾದುಕೆಗಳ ದರ್ಶನ ಪಡೆದು ಗುರುಗಳ ಆಶೀರ್ವಾದಕ್ಕೆ ಪಾತ್ರರಾಗಬೇಕೆಂದು ಸಮಿತಿಯು ಪತ್ರಿಕಾ ಪ್ರಕಟಣೆಯ ಮೂಲಕ ಭಕ್ತಿಯ ಆಮಂತ್ರಣ ನೀಡಿದೆ.
ಕಾರ್ಯಕ್ರಮದ ವಿವರಗಳು:

Publisher: ಕನ್ನಡ ನಾಡು | Kannada Naadu