ಕನ್ನಡ ನಾಡು | Kannada Naadu

ಅದ್ದೂರಿಯಾಗಿ ಸಂಪನ್ನಗೊಂಡ ಯು.ಕೆ. ನವೀನ್ ಡ್ಯಾನ್ಸ್ ಸ್ಟುಡಿಯೋದ 3ನೇ ವರ್ಷದ ವಾರ್ಷಿಕೋತ್ಸವ

30 Dec, 2025

ಬೆಂಗಳೂರು: ಯು.ಕೆ. ನವೀನ್ ಡ್ಯಾನ್ಸ್ ಸ್ಟುಡಿಯೋದ ಮೂರನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಸ್ಯಾಂಡಲ್‌ವುಡ್‌ನ ಹಿರಿಯ ಪೋಷಕ ನಟರಾದ ಶ್ರೀ ಶರತ್ ಲೋಹಿತಾಶ್ವ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಈ ವಿಶೇಷ ಸಂದರ್ಭದಲ್ಲಿ ಟಾಲಿವುಡ್ ನಟಿ ಸಾಯಿ ರಮ್ಯಾ ತೋಟ, ಪ್ರಸಿದ್ಧ ನಾಟ್ಯ ಕಲಾವಿದೆ ಡಾ. ರಚನಾ ಪಾಯಲ್, ಪಾಲಿಕೆಯ ಮಾಜಿ ಸದಸ್ಯ ಶ್ರೀ ಸಂಗಾತಿ ವೆಂಕಟೇಶ್, ಜೀ ನ್ಯೂಸ್ ಸುದ್ದಿ ಸಂಪಾದಕ ಶ್ರೀ ರವಿ, ಡಾ. ದೇವರಾಜ್, ಸಂಪರ್ಕಾಧಿಕಾರಿ ಶಂಕರ್ ಎಸ್.ಎನ್., ಡಾ. ಪದ್ಮನಾಭನ್, ನವೀನ್ ಮಾಸ್ಟರ್, ವಿನೋದ್ ಮಾಸ್ಟರ್, ಶ್ರುತಿ ಜಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಮೂರನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಯು.ಕೆ. ನವೀನ್ ಡ್ಯಾನ್ಸ್ ಸ್ಟುಡಿಯೋದ ವಿದ್ಯಾರ್ಥಿಗಳಿಂದ ಪ್ರದರ್ಶಿಸಲಾದ ನೃತ್ಯ ಪ್ರದರ್ಶನಗಳು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. 

ಶಿಸ್ತು, ಪ್ರತಿಭೆ ಮತ್ತು ನಿರಂತರ ಪರಿಶ್ರಮದ ಫಲವಾಗಿ ಯು.ಕೆ. ನವೀನ್ ಡ್ಯಾನ್ಸ್ ಸ್ಟುಡಿಯೋ ಕಳೆದ ಮೂರು ವರ್ಷಗಳಲ್ಲಿ ನೃತ್ಯ ಕ್ಷೇತ್ರದಲ್ಲಿ ತನ್ನದೇ ಆದ ಹೆಗ್ಗುರುತನ್ನು ನಿರ್ಮಿಸಿದೆ.

Publisher: ಕನ್ನಡ ನಾಡು | Kannada Naadu

Login to Give your comment
Powered by