ಕನ್ನಡ ನಾಡು | Kannada Naadu

ಸಮ ಸಮಾಜ ನಿರ್ಮಾಣ ನಮ್ಮ ಸಂವಿಧಾನ ಮತ್ತು ಅಂಬೇಡ್ಕರ್ ಅವರ ಆಶಯವಾಗಿತ್ತು : ಮುಖ್ಯಮಂತ್ರಿ ಸಿದ್ದರಾಮಯ್ಯ

27 Nov, 2025


ಬೆಂಗಳೂರು : ಸಮ ಸಮಾಜ ನಿರ್ಮಾಣ, ಅಸಮಾನತೆ ನಿವಾರಣೆ ಅಂಬೇಡ್ಕರ್ ರಚಿಸಿದ ಸಂವಿಧಾನದ ಆಶಯವಾಗಿತ್ತು ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಸಂತ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿಂದು ಹಮ್ಮಿಕೊಂಡಿದ್ದ  "ಸಂವಿಧಾನ ದಿನಾಚರಣೆ – 2025’ ರ ಕಾರ್ಯಕ್ರಮವನ್ನು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಂ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ, ನಗಾರಿ ಬಾರಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದ  ಮುಖ್ಯಮಂತ್ರಿಗಳು, We the people of India ಎನ್ನುವುದೇ ನಮ್ಮ ಸಂವಿಧಾನದ ಮೂಲ ಮಂತ್ರ ಎಂದು ಹೇಳಿದರು.



ಅಂಬೇಡ್ಕರ್ ಅವರ ಸಂವಿಧಾನಕ್ಕೆ ಮೊದಲು ದೇಶದಲ್ಲಿ ಅಲಿಖಿತ ಮನುಸ್ಮøತಿ ಇತ್ತು. ಮನುಸ್ಮøತಿಯಲ್ಲಿದ್ದ ಮನುಷ್ಯ  ವಿರೋಧಿ, ಸಮಾನತೆ ವಿರೋಧಿ  ನಿಯಮಗಳಿಗೆ ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಅವಕಾಶ ಇಲ್ಲದಂತಾಯಿತು. ಅದಕ್ಕೇ ಮನುವಾದಿಗಳು ನಮ್ಮ ಸಂವಿಧಾನವನ್ನು ವಿರೋಧಿಸುತ್ತಿದ್ದಾರ, ದೇಶದಲ್ಲಿರುವ ಸಂವಿಧಾನ ವಿರೋಧಿ ಮನುವಾದಿಗಳನ್ನು ಗುರುತಿಸುವ ಅವಶ್ಯಕತೆ ಇದೆ ಎಂದರು.

ಈ ದೇಶದ ಜನತೆಗೆ ಹೊಂದುವಂತಹ ಸಂವಿಧಾನ ಬೇಕು ಎನ್ನುವ ಬಗ್ಗೆ ಒಂದು ವರ್ಷ ಕಾಲ ಸಂವಿಧಾನ ಸಭೆಯಲ್ಲಿ ಸಮಗ್ರ ಚರ್ಚೆ ನಡೆದ  ಬಳಿಕ ಅಂಗೀಕರಿಸಲಾಗಿದೆ. ಫೆಡರಲ್, ಯೂನಿಟರಿ, ರಿಟನ್, ಅನ್ ರಿಟರ್ನ್ ಸಂವಿಧಾನಗಳು ವಿಶ್ವದಲ್ಲಿವೆ. ನಮ್ಮದು ರಿಟನ್ (ಲಿಖಿತ) ಸಂವಿಧಾನ. ನಮ್ಮ ದೇಶದಲ್ಲಿರುವಷ್ಟು ಜಾತಿ, ಧರ್ಮಗಳು ಬೇರೆ ಯಾವ ದೇಶದಲ್ಲೂ ಇಲ್ಲ. ಹೀಗಾಗಿ ಈ ನೆಲಕ್ಕೆ ಒಪ್ಪಿಗೆಯಾಗುವ ಸಂವಿಧಾನವನ್ನು ಅಂಬೇಡ್ಕರ್ ನೀಡಿದ್ದಾರೆ ಎಂದರು.

ಮನುವಾದಿಗಳು ಸಂವಿಧಾನ ಅಂಬೇಡ್ಕರ್ ಅವರಿಂದ ಆಗಿಲ್ಲ ಎಂದು ವಾದಿಸುತ್ತಾರೆ. ಆದರೆ ಅಂಬೇಡ್ಕರ್ ಅವರೇ ಸಂವಿಧಾನ ಶಿಲ್ಪಿ ಎನ್ನುವುದನ್ನು ಮರೆಯಬಾರದು. ಈ ದೇಶದ ಜಾತಿ ವ್ಯವಸ್ಥೆ ಮತ್ತು ಅಪಾಯಗಳು ಅಂಬೇಡ್ಕರ್ ಅವರಿಗೆ ಅರ್ಥ ಆಗಿತ್ತು. ಅದಕ್ಕೇ ನಮ್ಮ ಸಂವಿಧಾನದಲ್ಲಿ ಮೀಸಲಾತಿಯನ್ನು ಸೇರಿಸಿದರು.  ಜಾತಿ ವ್ಯವಸ್ಥೆ ಇರುವವರೆಗೂ ಮೀಸಲಾತಿ ಇರಬೇಕು ಎಂದು ಹೇಳಿದ್ದಾರೆ ಎಂದರು.

ಸ್ವಾತಂತ್ರ್ಯ, ಸಮಾನತೆ, ಭಾತೃತ್ವ ಭಾವನೆ ಸಂವಿಧಾನದ ಆಶಯ. ಆದರೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷ  ಆದರೂ ಸಂವಿಧಾನದ ಆಶಯ ಈಡೇರಿಲ್ಲ. ಬಸವಣ್ಣನವರಾದಿಯಾಗಿ ಎಲ್ಲಾ ಮಹಾತ್ಮರು ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದರು ಪಟ್ಟಭದ್ರಾ ಹಿತಾಶಕ್ತಿಗಳು ಜಾತಿ ವ್ಯವಸ್ಥೆ ಹೋಗಲು ಬಿಡುತ್ತಿಲ್ಲ. ಬಡವರಿಗೆ, ತಳ ಸಮುದಾಯದವರಿಗೆ,  ಶೂದ್ರ ವರ್ಗದವರಿಗೆ ಆರ್ಥಿಕ ಶಕ್ತಿ ಬಂದಾಗ ಮಾತ್ರ ಜಾತಿ ವ್ಯವಸ್ಥೆ ಹೋಗುತ್ತದೆ ಎಂದರು.

ಸಂವಿಧಾನ ರಚನಾ  ಸಭೆಯಲ್ಲಿ ಅಂಬೇಡ್ಕರ್ ಮಾಡಿದ ಕೊನೆಯ ಭಾಷಣದ ಎಚ್ಚರಿಕೆಯ ಮಾತುಗಳನ್ನು ಪ್ರತಿಯೊಬ್ಬರೂ ಮನವರಿಕೆ ಮಾಡಿಕೊಳ್ಳಬೇಕು. ಅಸಮಾನತೆ ಇರುವ ದೇಶದಲ್ಲಿ ಸಮಾನತೆ ಸುಲಭವಾಗಿ ಬರುವುದಿಲ್ಲ.  ದಲಿತರನ್ನು, ಶೂದ್ರರನ್ನು ಹಿಂದುಳಿದವರನ್ನು, ಮುಸ್ಲಿಂರನ್ನು, ಅಲ್ಪಸಂಖ್ಯಾತರನ್ನು ದ್ವೇಷಿಸಿ ಎಂದು ನಮ್ಮ ಧರ್ಮವೂ ಸೇರಿದಂತೆ  ಯಾವ ಧರ್ಮವೂ ಹೇಳುವುದಿಲ್ಲ.

ಸಂವಿಧಾನ ಅಂಗೀಕಾರಕ್ಕೆ 285 ಮಂದಿ ಸದಸ್ಯರಲ್ಲಿ 284 ಮಂದಿ ಪೂರ್ತಿ ಸಹಿ ಹಾಕಿದರು. ಒಬ್ಬರು ಮಾತ್ರ ಹಾಕಲಿಲ್ಲ. ಹೀಗಾಗಿ ಬಹುತೇಕ ಎಲ್ಲರಿಗೂ ಒಪ್ಪಿಗೆ ಆಗುವಂತಹ ಸಂವಿಧಾನವನ್ನು ಅಂಬೇಡ್ಕರ್ ರಚಿಸಿದರು. ಸಂವಿಧಾನ ರಚನೆಯಾದಾಗ 390 ವಿಧಿಗಳಿದ್ದು, 8 ಷೆಡ್ಯೂಲ್ ಗಳು ಇದ್ದವು.  ಈಗ 448 ವಿಧಿಗಳು, 12 ಷೆಡ್ಯೂಲ್‍ಗಳು ಇವೆ.  ಸಂವಿಧಾನ ಜಾರಿಯಾದ ಮೇಲೆ ಇಲ್ಲಿಯವರೆಗೆ 106 ಬಾರಿ ತಿದ್ದುಪಡಿಯಾಗಿದೆ ಎಂದರು.

ಸಂವಿಧಾನದ ಸಮಾನತೆಯ ಆಶಯವನ್ನು ಈಡೇರಿಸುವ ಸಲುವಾಗಿಯೇ ನಾನು ಮೊದಲ ಬಾರಿ ಮುಖ್ಯಮಂತ್ರಿಯಾಗಿ ಹಲವು ಭಾಗ್ಯಗಳನ್ನು ಜಾರಿ ಮಾಡಿದೆ. ತುತ್ತು ಅನ್ನಕ್ಕಾಗಿ ಯಾರೂ ಯಾರ ಮನೆ ಮುಂದೆಯೂ ನಿಲ್ಲಬಾರದು ಎನ್ನುವ ಆಶಯದಿಂದ ಅನ್ನಭಾಗ್ಯ ತಂದೆ, ಯಾರ ಮನೆ ಮಕ್ಕಳೂ ಬರಿಗಾಲಿನಲ್ಲ್ಲಿ ಶಾಲೆಗೆ ಹೋಗಬಾರದು ಎನ್ನುವ ಕಾರಣದಿಂದ ಶೂ ಭಾಗ್ಯ ತಂದೆ. ಎಲ್ಲಾ ಭಾಗ್ಯಗಳ ಹಿಂದೆ ಹಾಗೂ ಈಗ ಜಾರಿ ಮಾಡಿರುವ ಐದೂ ಗ್ಯಾರಂಟಿಗಳ ಹಿಂದೆ ಅಸಮಾನತೆ ನಿವಾರಿಸುವ ಮತ್ತು ಸರ್ವರಿಗೂ ಆರ್ಥಿಕ ಶಕ್ತಿ ಬರಲಿ ಎನ್ನುವ ಆಶಯ ಇದೆ ಎಂದರು.



ಇದೇ ಸಂದರ್ಭದಲ್ಲಿ ಚಿತ್ರ ಕಲಾ ಸ್ಪರ್ಧೆಯಲ್ಲಿ ವಿಜೇತರಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೊದಲನೆ ಬಹುಮಾನ ರೂ.50 ಸಾವಿರ, ದ್ವಿತೀಯ ಬಹುಮಾನ  30 ಸಾವಿರ ರೂ., ತೃತೀಯ ಬಹುಮಾನ 20 ಸಾವಿರ ರೂ.ಗಳನ್ನು ಹಾಗೂ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮೊದಲ ಬಹುಮಾನ 1 ಲಕ್ಷ ರೂ., ದ್ವಿತೀಯ ಬಹುಮಾನ 50 ಸಾವಿರ ರೂ. ತೃತೀಯ ಬಹುಮಾನ 25 ಸಾವಿರ ರೂ.ಗಳ ನಗದು ಬಹುಮಾನ ವಿತರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಹೆಚ್.ಸಿ.ಮಹದೇವಪ್ಪ ಅವರು, ಶ್ರೇಷ್ಠವಾದ ಸಂವಿಧಾನ ಜಾರಿಗೆ ಬಂದು 76 ವರ್ಷಗಳಾಯಿತು.  ಇಂದು 76ನೇ ಸಂವಿಧಾನ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ.   ಶೈಕ್ಷಣಿಕವಾಗಿ, ವೈಜ್ಞಾನಿಕವಾಗಿ ಮತ್ತು ವಿವಿಧ ರಂಗಗಳಲ್ಲಿ ಅನೇಕ ಅಭಿವೃದ್ಧಿಗಳನ್ನು ಕಂಡಿದ್ದೇವೆ. ಆದರೂ ಸಂವಿಧಾನ ಬಯಸಿದಂತಹ ಪರಿಪೂರ್ಣ ಅಭಿವೃದ್ಧಿಯನ್ನು ಮಾಡಲು ಇನ್ನೂ ಸಾಧ್ಯವಾಗಿಲ್ಲ ಎಂದರು.

1949 ಜನವರಿ 25ರಂದು ಈ ಸಂವಿಧಾನವನ್ನು ಸಮರ್ಪಿಸುವ ಒಂದು ದಿನ ಮುಂಚೆ ಸಂವಿಧಾನ ಉದ್ದೇಶಿಸಿ ಮಾಡಿದ ಭಾಷಣ ಐತಿಹಾಸಿಕವಾದುದು.  ಆ ಭಾಷಣದ ತಿರುಳು ಭಾರತದ ಪ್ರತಿಯೊಬ್ಬ ಪ್ರಜೆಗೂ ಅರ್ಥವಾಗಬೇಕು. ನಮ್ಮ ದೇಶದ ಭೌಗೋಳಿಕ ಮತ್ತು ಸಾಂಸ್ಕøತಿಕ ಜನ ಜೀವನ ವೈವಿಧ್ಯಮಯ ಜೀವನದಿಂದ ಕೂಡಿದೆ.  ಇದರ ಮಹತ್ವವೆ ಬಹುತ್ವದ ಭಾರತ . ಬಹು ಸಂಸ್ಕøತಿ, ಭಾಷೆÀಯನ್ನು , ವಿವಿಧವಾದ ಸಾಂಸ್ಕøತಿಕ ಚಟವಟಿಕೆ ಹೊಂದಿರುವ ಭಾರತÀ ದೇಶ. ಇಂತಹ ದೇಶದಲ್ಲಿ ನಮ್ಮ ಸಂವಿಧಾನವನ್ನು ಓದುವಾಗ ಮೊದಲನೆ ಪದವೇ  ಭಾರತೀಯ ಪ್ರಜೆಗಳಾದ ನಾವು  ಅದನ್ನು ಸಂಬೋಧನೆ ಮಾಡಿರುವುದು, ಭಾರತೀಯರಾದ ನಾವೆÉಲ್ಲರೂ ಒಂದೇ ಎಂಬ ಸಂದೇಶ ಹೊಂದಿದೆ ಎಂದರು.

ರಾಜಕೀಯ ಪಕ್ಷಗಳು ಧರ್ಮ ಮತ್ತು ಜಾತಿಯ ಗೋಜಿಗೆ ಹೋಗದೆ, ಭಾರತದ ಸೋದರತ್ವವನ್ನು ರಕ್ಷಣೆ ಮಾಡಿ, ಬಹುತ್ವದ ರಕ್ಷಣೆಗೆ ನಿರ್ಣಾಯಕವಾದಂತ ವಿಷಯಗಳನ್ನು, ಅಭಿವೃದ್ಧಿಗೆ ಬೇಕಾದಂತಹ ಬೀಗದ ಕೈಯನ್ನು ಸಂವಿಧಾನದ ಮಾರ್ಗದಲ್ಲಿ ಅವರು ನಮಗೆ ಕೊಟ್ಟಿದ್ದಾರೆ. ಇಂದು ನಾವು ಇಡೀ ದೇಶದಲ್ಲಿ ಗಗನದ ಎತ್ತರಕ್ಕೆ ಹಾರಿಸಬೇಕಾದದ್ದು ಭಾರತದ ತ್ರಿವರ್ಣ ಧ್ವಜವನ್ನು ಮತ್ತು ಎತ್ತಿ ಹಿಡಿಯಬೇಕಾದದ್ದು ನಮ್ಮ ಸಂವಿಧಾನವನ್ನು.  ಬೇರೆ ಯಾವುದೇ ಬಣ್ಣದ ಧ್ವಜ , ಬೇರೆ ಯಾವುದೇ ಧರ್ಮ ಆಕಾಶಕ್ಕೆ ಹಾರಲು ಸಾಧ್ಯವಿಲ್ಲ.   ಇದನ್ನು ಹೊರತು ಪಡಿಸಿ ರಾಜಕೀಯ ಪಕ್ಷಗಳ ನಡೆ ಧರ್ಮ ಮತ್ತು ಜಾತಿಯನ್ನು ಆಧರಿಸಿದರೆ ಅದು ಭಾರತದ ಸಂವಿಧಾನದ ಮೂಲತತ್ವ ಮತ್ತು ಸಿದ್ದಾಂತಕ್ಕೆ ವಿರುದ್ಧವಾಗಿ ಸಂವೃದ್ಧ ಭಾರತದ ಕನಸಿಗೆ ಭಗ್ನ ಉಂಟು ಮಾಡುತ್ತದೆ ಎಂದರು.

ಭಾರತ ದೇಶದ ಯಾವುದೇ ರಾಜ್ಯದಲ್ಲಿ ಶಾಲಾ-ಕಾಲೇಜುಗಳಲ್ಲಿ, ಸಭೆ-ಸಮಾರಂಭಗಳಲ್ಲಿ ಸಂವಿಧಾನ ಪೀಠಿಕೆ ಓದುವ ಹವ್ಯಾಸ ಇದುವರೆಗೆ ಇರಲಿಲ್ಲ. ಆದರೆÀ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಂದ ಮೇಲೆ ಇಡೀ ಭಾರತ ದೇಶ ಕರ್ನಾಟÀಕದ ತೀರ್ಮಾನದ ಕಡೆಗೆ ತಿರುಗಿ ನೋಡುವಂತೆ ಮಾಡಿದೆ.



ಸಂವಿಧಾನ ಪೀಠಿಕೆಯನ್ನು ಎಲ್ಲಾ ಸಭೆ ಸಮಾರಂಭಗಳು, ಶಾಲಾ-ಕಾಲೇಜುಗಳು, ಮುಖ್ಯಮಂತ್ರಿಗಳ ಕಚೇರಿ, ಮುಖ್ಯ ಕಾರ್ಯದರ್ಶಿಗಳ ಕಚೇರಿ ಎಲ್ಲಾ ಕಡೆಗಳಲ್ಲಿ ಸಂವಿಧಾನದ ಪೀಠಿಕೆಯನ್ನು ನೋಡಬಹುದು ಹಾಗೂ  ವಿಧಾನಪರಿಷತ್ ಮತ್ತು ವಿಧಾನಸಭೆಗಳ ಅಧಿವೇಶನದ ಮೊದಲ ದಿನ ಸಂವಿಧಾನದ ಪೀಠಿಕೆಯನ್ನು ಓದುವುದನ್ನು ನೀವು ನೋಡಬಹುದು. ಭಾರತದ ಯಾವುದೇ ರಾಜ್ಯ ಈ ರೀತಿಯ ಹವ್ಯಾಸ ಬೆಳೆಸಿಕೊಂಡಿಲ್ಲ. ಇದಕ್ಕೆ ಮೂಲ ಪ್ರೇರಣಾ ಶಕ್ತಿಗೆ ಕಾರಣರಾದ ರಾಜ್ಯದ ದಲಿತ ಸಂಘಟನೆಗಳಿಗೆ ಧನ್ಯವಾದ ಸಲ್ಲಿಸುತ್ತೇನೆ. ಈ ಜಾಗೃತಿಯ ಮಂತ್ರವನ್ನು ಕೊಟ್ಟವರು ದಲಿತ ಸಂಘಟನೆಗಳು ಎಂದು ತಿಳಿಸಿದರು.

ನಾನು ಮತ್ತು ಮುಖ್ಯಮಂತ್ರಿಗಳು ಇನ್ನೂ ಅನೇಕ ನಾಯಕರು ಸಂವಿಧಾನದ ಬಗ್ಗೆ ಪ್ರಜಾಪ್ರಭುತವದ ಬಗ್ಗೆ ನಮ್ಮದೆ ಆದ ಬದ್ಧತೆಯನ್ನು ಇಟ್ಟುಕೊಂಡಿದ್ದರೂ  ಸಹ ಜಾಗೃತಿ ಮೂಡಿಸುವಲ್ಲಿ ಪ್ರಮುಖವಾಗಿ  ಹೋರಾಟ ಮಾಡಿದವರು ಸಂಘಟನೆಗಳು. ಆ ಮಂತ್ರದ ಮುಖಾಂತರ ಮುಖ್ಯಮಂತ್ರಿಗಳ ಗಮನಕ್ಕೆ ತಂದಾಗÀ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು,  ಮಹಿಳೆಯರು, ಕಾರ್ಮಿಕರು, ರೈತರು, ಸಾಮಾನ್ಯ ಜನರ ಹಕ್ಕುಗಳನ್ನು  ರಕ್ಷಣೆ  ಮಾಡುವ ಸಂವಿಧಾನದ ಆಶಯದ ಯಾವುದೇ ವಿಷಯವನ್ನು ಮಾಡಲಿಕ್ಕೆ ಮುಕ್ತವಾದ ಅವಕಾಶವನ್ನು ಸಮಾಜ ಕಲ್ಯಾಣ ಇಲಾಖೆಗೆ ಮುಖ್ಯಮಂತ್ರಿಗಳು ಕೊಟ್ಟಿದ್ದಾರೆ.  ಸಂವಿಧಾನ ಆಶಯಗಳಿಗೆ ಅನುಗುಣವಾಗಿ ಮುಖ್ಯಮಂತ್ರಿಗಳು ಕೆಲಸ ಮಾಡುತ್ತಿದ್ದಾರೆ ಎಂದರು.

ಆಹಾರ ಮತ್ತು ನಾಗರೀಕ ಸರಬರಾಜು ಸಚಿವರಾದ ಕೆ.ಹೆಚ್. ಮುನಿಯಪ್ಪ ಅವರು ಮಾತನಾಡಿ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ ಶ್ರೇಯೋಭಿವೃದ್ಧಿಗಾಗಿ ಮುಖ್ಯಮಂತ್ರಿಗಳು ಶ್ರಮವಹಿಸಿದ್ದಾರೆ.   ಸಮಾಜ ಕಲ್ಯಾಣ ಸಚಿವರು ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ತೇಜಸ್ ಚಕ್ರವರ್ತಿ ಎಂಬ ಪುಟ್ಟ ಬಾಲಕ ಸಂವಿಧಾನದ ವಿಧಿಗಳನ್ನು ವಾಚಿಸಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ, ಆದಿ ಜಾಂಬವ ನಿಗಮದ ಅಧ್ಯಕ್ಷ ಜಿ.ಎನ್.ಮಂಜುನಾಥ್, ಬೋವಿ ನಿಗಮದ ಅಧ್ಯಕ್ಷ ರಾಮಪ್ಪ, ಕರ್ನಾಟಕ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುರಳಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರೀಮತಿ ಪಲ್ಲವಿ, ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ರಂದೀಪ್ ಡಿ, ಆಯುಕ್ತರಾದ ಡಾ.ರಾಕೇಶ್ ಕುಮಾರ್ ಡಿ., ಶಾಲಾ ಮಕ್ಕಳು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

Publisher: ಕನ್ನಡ ನಾಡು | Kannada Naadu

Login to Give your comment
Powered by