

ಬೆಂಗಳೂರು:ರಾಜಾಜಿನಗರ ವಿಧಾನಸಭಾ ಕ್ಷೇತ್ರ: ಭಾಷ್ಯಂ ಸರ್ಕಲ್ ನಲ್ಲಿ ಮಾಜಿ ಶಿಕ್ಷಣ ಸಚಿವರು, ಶಾಸಕರಾದ ಎಸ್.ಸುರೇಶ್ ಕುಮಾರ್ ರವರು ಸಂಚಾರ ನಿಯಮಗಳು ಕುರಿತು ಜನಜಾಗೃತಿ ಮೂಡಿಸಲು ಮತ್ತು ಸಂಚಾರಿ ಪೊಲೀಸ್ ರ ಸಮಸ್ಯೆಗಳ ಕುರಿತು ಅರಿಯಲು ಮತ್ತು ಟ್ರಾಫಿಕ್ ಸಿಗ್ನಲ್ ಕುರಿತು ಮಾಹಿತಿ ಪಡೆಯಲು ಪೊಲೀಸ್ ಸಿಬ್ಬಂದಿಯಾಗಿ ಕಾರ್ಯನಿರ್ವಹಣೆ ಮಾಡಿದರು.
ಸಂಚಾರಿ ಪೊಲೀಸ್ ಇನ್ಸ್ ಪೆಕ್ಟರ್ ಎಸ್.ಮಹಮದ್ ಅಲಿ, ಸಬ್ ಇನ್ಸ್ ಪೆಕ್ಟರ್ ನಂಜಯ್ಯರವರು ಹೆಡ್ ಕಾನ್ಸ್ ಟೇಬಲ್ ಗಳಾದ ಅಕ್ರಮ್ ಪಾಷ, ರಾಘವೇಂದ್ರ, ಲೋಕೇಶ್ ರವರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಎಸ್.ಸುರೇಶ್ ಕುಮಾರ್ ರವರು ಮಾತನಾಡಿ ಪೊಲೀಸ್ ಇಲಾಖೆಯವರು ಆಹ್ವಾನ ನೀಡಿರುವ ಕಾರಣದಿಂದ ಸಂಚಾರಿ ಪೊಲೀಸ್ ಸಿಬ್ಬಂದಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದೇನೆ.
ಸಂಚಾರ ನಿಯಮಗಳು ಸಮರ್ಪಕವಾಗಿ ಕಡ್ಡಾಯವಾಗಿ ಜನರು ಪಾಲನೆ ಮಾಡಬೇಕು, ಸಂಚಾರ ನಿಯಮ ಉಲ್ಲಂಘನೆ ಕೇಸ್ ಗಳು ಹೆಚ್ಚು ಇದೆ ಎಂದರೆ ಸಾರ್ವಜನಿಕರು ಕಟ್ಟನಿಟ್ಟಾಗಿ ಸಂಚಾರ ನಿಯಮಗಳು ಪಾಲನೆ ಮಾಡುತ್ತಿಲ್ಲ.
ಐ.ಎಸ್.ಚಿಹ್ನೆ ಇರುವ ಹೆಲ್ಮೇಟ್ ಧರಿಸಬೇಕು, ಅತಿವೇಗದ ಚಾಲನೆ ಮಾಡಬಾರದು, ಜಿಬ್ರಾ ಕ್ರಾಸ್ ಮೇಲೆ ವಾಹನ ನಿಲ್ಲಿಸಬಾರದು ಮತ್ತು ಸಂಚಾರ ನಿಯಮಗಳನ್ನು ಪಾಲಿಸಬೇಕು ಜನರು ಸಂಚಾರ ನಿಯಮಗಳು ಪಾಲಿಸಿದರೆ ಅಪಘಾತ ಸಂಖ್ಯೆ ಇಳಿಮುಖವಾಗುತ್ತದೆ.
![]() |
![]() |
![]() |
![]() |
ಸಂಚಾರ ನಿಯಮಗಳು ಉಲ್ಲಂಘನೆ ದಂಡ ಕಟ್ಟೋಣ ಎಂಬ ಉಡಾಪೆಯಾಗಿ ವರ್ತನೆ ಮಾಡಬೇಡಿ , ಅಪಘಾತವಾಗಿ ತಲೆಗೆ ಪೆಟ್ಟಾದರೆ, ಕೈ ಕಾಲು ಮುರಿದರೆ ಜೀವನ ಪರ್ಯಂತ ನರಳಬೇಕಾಗುತ್ತದೆ.
ನಮ್ಮ ಜೀವ, ಜೀವನ ನಮ್ಮ ಕೈಯಲ್ಲಿದೆ ಸಂಚಾರ ನಿಯಮಗಳನ್ನು ಪಾಲಿಸಿ ಎಂದು ಸಾರ್ವಜನಿಕರಿಗೆ ಮನವಿ ಮಾಡಲಾಗುತ್ತಿದೆ ಎಂದು ಹೇಳಿದರು.
ಬಿಜೆಪಿ ಮುಖಂಡರುಗಳಾದ ಸುದರ್ಶನ್, ಗಿರೀಶ್ ಗೌಡ, ಕಾಮಧೇನು ಸುರೇಶ್, ಉಮೇಶ್, ಸಂಜಯ್ ಕುಮಾರ್, ಅಮಿತ್ ಜೈನ್, ಮೋಹನ್ ರಾಜ್, ಗೋಪಿರವರು ಉಪಸ್ಥಿತರಿದ್ದರು.
Publisher: ಕನ್ನಡ ನಾಡು | Kannada Naadu