

ಬೆಂಗಳೂರು: ಬಾಗಲೂರಿನ ಗುಂಡಪ್ಪ ಸರ್ಕಲ್ ನಲ್ಲಿ" ಸರೋಜಾ ಸಂಸ್ಕಾರ ಕೇಂದ್ರ ಮತ್ತು ಮತ್ತೂರು ಶ್ರೀ ತರಗತಿಗಳು " - ಐದನೆಯ ತರಗತಿಯಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ "ಶುದ್ಧ ಕನ್ನಡ ಸ್ಪರ್ಧೆ" ಯನ್ನು ಏರ್ಪಡಿಸಿದ್ದರು. ಇದರಲ್ಲಿ ಸುಮಾರು 15 ಶಾಲೆಗಳಿಂದ 97 ವಿದ್ಯಾರ್ಥಿ - ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಬಂದ ವಿದ್ಯಾರ್ಥಿಗಳಿಗೆ 10 ಸಾವಿರ ರೂಪಾಯಿಗಳಷ್ಟು ಬಹುಮಾನವನ್ನು ವಿತರಣೆ ಮಾಡಲಾಯಿತು.
ಕೇವಲ ವರ್ಣಮಾಲೆ ಮತ್ತು ಗುಣಿತಾಕ್ಷರಗಳನ್ನು ಉಪಯೋಗಿಸಿ ನೂರು ಶಬ್ದಗಳನ್ನು ಅವರಿಗೆ ಉಕ್ತಲೇಖನವನ್ನು ಬರೆಯಲು ಹೇಳಲಾಯಿತು. ಈ ಕಾರ್ಯಕ್ರಮದ ಸಂಯೋಜಕರಾಗಿ ಮತ್ತೂರು ಶ್ರೀನಿವಾಸಮೂರ್ತಿ, ಕಾರ್ಯಕ್ರಮದ ನಿರ್ದೇಶಕರಾಗಿ ನ್ಯಾಷನಲ್ ಸ್ಕೂಲ್ ನ ವಿ. ರಾಜು ಇದ್ದರು.

ಕಾರ್ಯಕ್ರಮದ ಸಫಲತೆಯನ್ನು ಭಾಗವಹಿಸಿದ ವಿದ್ಯಾರ್ಥಿಗಳು, ಅವರ ಪಾಲಕರು ಮತ್ತು ಅವರ ಅಭಿಪ್ರಾಯಗಳನ್ನು ಕ್ರೋಢಿಕರಿಸಿ ಹೇಳಬಹುದು. ಈ ಒಂದು ಯಶಸ್ಸಿಗೆ ಕಾರಣರಾಗಿ ಅಚ್ಯುತ ಆಯುರ್ವೇದಿಕ್ ಕಾಲೇಜಿನ( ಗೋಪಾಲಪುರ) ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿ ಇವರು ಕೂಡ ಇದ್ದರು.
ಬಂದಿರುವ ಪಾಲಕರಿಗೆ ಮತ್ತು ಸಾರ್ವಜನಿಕರಿಗೆ ಉಚಿತವಾದ ವೈದ್ಯಕೀಯ ತಪಾಸಣೆಯನ್ನು ಈ ವೈದ್ಯರ ತಂಡ ಮತ್ತು ಸೀನಿಯರ್ ವಿದ್ಯಾರ್ಥಿಗಳು ನಡೆಸುತ್ತಿದ್ದರು. ಹಲವು ಕಾಯಿಲೆಗಳಿಗೆ ಉಚಿತ ಔಷಧಿಯನ್ನು ನೀಡಿದರು.
ಕಾರ್ಯಕ್ರಮದ ಪ್ರಾಯೋಜಕರಾಗಿ ಶ್ರೀನಿಧಿ ಸ್ಟೀಲ್ ಟ್ರೇಡರ್ಸ್,ಎಸ್ಎಂ ಕ್ರಿಯಾ ಟ್ರಸ್ಟ್, ಇ ಟಿ ವೈ ಟ್ರಸ್ಟ್ ಮಾರೇನಹಳ್ಳಿ ,
ವಿ ಜೆ ಇಂಟರ್ನ್ಯಾಷನಲ್ ಸ್ಕೂಲ್ ಮತ್ತು ವಿದ್ಯೆಗಾಗಿ ಯೋಜನೆ ದೊಮ್ಮಸಂದ್ರ... ಸಹಕಾರ ನೀಡಿದ್ದರು.
ಪ್ರಥಮ ದ್ವಿತೀಯ ಮತ್ತು ತೃತೀಯ ಬಹುಮಾನಗಳು ಕ್ರಮವಾಗಿ ಮೂರು ಸಾವಿರ ಎರಡು ಸಾವಿರ ಮತ್ತು ಒಂದು ಸಾವಿರ ರೂಪಾಯಿಗಳು ನಗದು ಆಗಿದ್ದವು.
ಈ 3 ಬಹುಮಾನಗಳನ್ನೂ V.J. ಇಂಟರ್ನೆಷನಲ್ ಸ್ಕೂಲ್ ಪಡೆಯಿತು!!
ಎರಡು ನೂರು ರೂಪಾಯಿಗಳ ಸಮಾಧಾನಕರ ಬಹುಮಾನವನ್ನು 10 ಜನ ವಿದ್ಯಾರ್ಥಿಗಳು ಗಳಿಸಿದರು.
ಶುದ್ಧವಾಗಿ ಕನ್ನಡವನ್ನು ಮಾತನಾಡುವುದು ಮತ್ತು ಬರೆಯುವುದು ಅತ್ಯಂತ ಅಗತ್ಯ. ನಮ್ಮ ಮಾತು ಮುತ್ತು...ಹಾಗಾಗಿ ಶುದ್ಧವಾದ ಬರವಣಿಗೆಯನ್ನು ಉತ್ತೇಜಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸರೋಜಾ ಸಂಸ್ಕಾರ ಕೇಂದ್ರದ ಗಣಿತ ಮತ್ತು ವಿಜ್ಞಾನದ ಅಧ್ಯಾಪಕರಾದ ಎಂ.ಎಸ್ ಉಪಮನ್ಯು, ಸಮಾಜ ಮತ್ತು ಇಂಗ್ಲಿಷ್ ಅಧ್ಯಾಪಕರಾದ ಶ್ರೀಮತಿ ಶ್ರೀವಿದ್ಯಾ ಕೆ.ವಿ ಇವರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ದೀಪ ಹಚ್ಚಿ ಶಾಂತಿ ಮಂತ್ರವನ್ನು ಹೇಳುವುದು, ಊಟ ಮಾಡುವಾಗ ಭೋಜನ ಮಂತ್ರವನ್ನು ಹೇಳುವುದು, ಸಂಜೆ ವಚನ - ಭಗವದ್ಗೀತೆ ಮತ್ತು ಶ್ಲೋಕಗಳನ್ನು ಹೇಳಿ ಕಥೆಯನ್ನು ಕೇಳುವುದು ಮುಖ್ಯ. ಈ ಸರೋಜಾ ಸಂಸ್ಕಾರ ಕೇಂದ್ರದಲ್ಲಿ ವಿಶೇಷವಾಗಿ ಪ್ರತಿ ಶುಕ್ರವಾರ ನಡೆಯುತ್ತದೆ.
ಇಲ್ಲಿ ಎಲ್ಲಾ ವಿಷಯಗಳ ಕೋಚಿಂಗ್ ನಡೆದರೂ ಕೂಡ ಸಂಸ್ಕಾರಕ್ಕೆ ಹೆಚ್ಚು ಮಹತ್ವ ನೀಡುವುದು ಗೋಚರಿಸುತ್ತದೆ.
ಈ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆಯನ್ನು ಬಾಗಲೂರು ಪಂಚಾಯಿತಿ ಅಧ್ಯಕ್ಷರಾದ ಶ್ರೀ ಕೆಂಪೇಗೌಡರು ನೆರವೇರಿಸಿದರು.
ಕಡೆಯಲ್ಲಿ ವಂದೇ ಮಾತರಂ ಅನ್ನು ಪೂರ್ಣವಾಗಿ ಎಲ್ಲ ವಿದ್ಯಾರ್ಥಿಗಳು ಹಾಡಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
Publisher: ಕನ್ನಡ ನಾಡು | Kannada Naadu