
ಸರ್ಕಾರ ಮತ್ತು ಕಾರ್ಖಾನೆ ಮಾಲೀಕರು ತಲಾ 50ರೂ ಸೇರಿಸಿ ರೈತರಿಗೆ ಟನ್ ಗೆ 3300 ಕೊಡಲು ತೀರ್ಮಾನ: ಸಿ.ಎಂ ಘೋಷಣೆ
ಬೆಳಗಾವಿ DC ಜೊತೆಗೆ ಆದ ಒಪ್ಪಂದದ ಮೊತ್ತ 3200ರೂ ಜೊತೆಗೆ 100ರೂ ಸೇರಿಸಿ 3300ರೂ ಕೊಡಲು ತೀರ್ಮಾನ: ಸಿಎಂ
ಈ ಮೊತ್ತ ಕಟಾವು ಮತ್ತು ಸಾಗಣಿಕೆ ವೆಚ್ಚ ಹೊರತುಪಡಿಸಿದ್ದಾಗಿರುತ್ತದೆ: ಸಿ.ಎಂ
ಕೇಂದ್ರದಿಂದ ಕಾರ್ಖಾನೆ ಮಾಲೀಕರಿಗೆ-ರೈತರಿಗೆ ಇಬ್ಬರಿಗೂ ಅನ್ಯಾಯ: ಇಬ್ಬರನ್ನೂ ಒಳಗೊಂಡು ಕೇಂದ್ರಕ್ಕೆ ನಿಯೋಗ: ಸಿಎಂ ಹೇಳಿಕೆ
ಬೆಂಗಳೂರು ನ7: ಬೆಳಗಾವಿಯಲ್ಲಿ ಪ್ರತಿಭಟನಾನಿರತ ಕಬ್ಬು ಬೆಳೆಗಾರರು
ಮತ್ತು ರೈತ ಸಂಘಟನೆಗಳ ಪರವಾಗಿ ಸತತ 7 ಗಂಟೆಗಳ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಪರ ಖಚಿತ ನಿಲುವು ತೆಗೆದುಕೊಂಡು, ಟನ್ ಕಬ್ಬಿಗೆ 3300 ರೂ ಕೊಡಲು ನಿರ್ಧರಿಸಿದೆ.
ಸತತ ಏಳು ಗಂಟೆಗಳ ನಿರಂತರ ಸಭೆ ಬಳಿಕ ಮುಖ್ಯಮಂತ್ರಿಗಳು ಪತ್ರಿಕಾಗೋಷ್ಠಿ ನಡೆಸಿ ಸರ್ಕಾರದ ನಿರ್ಧಾರ ಪ್ರಕಟಿಸಿದರು.
Publisher: ಕನ್ನಡ ನಾಡು | Kannada Naadu