ಕನ್ನಡ ನಾಡು | Kannada Naadu

ಎಂ.ಇ.ಎಸ್.ಗೂಂಡಾ ಶುಭಂ ಶಿಳಕೆ ಅವರನ್ನು ಗಡಿಪಾರು ಮಾಡಿ: ಬಸವರಾಜ ಖಾನಪ್ಪನವರ ಕಿಡಿ

15 Oct, 2025

ಗೋಕಾಕ  : ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಅವರನ್ನು  ವೈರಸ್ ಎಂದು ನಿಂಧಿಸಿರುವ ನಾಡ ವಿರೋಧಿ ಎಂ.ಇ.ಎಸ್.ಗೂಂಡಾ ಶುಭಂ ಶಿಳಕೆ ಅವರನ್ನು ಗಡಿಪಾರು ಮಾಡಬೇಕು ಎಂದು ಕರವೇ ತಾಲೂಕು ಅಧ್ಯಕ್ಷ ಬಸವರಾಜ ಖಾನಪ್ಪನವರ ಕಿಡಿ ಕಾರಿದ್ದಾರೆ. 

ಮಂಗಳವಾರದಂದು ನಗರದ ವಾಲ್ಮೀಕಿ ವೃತ್ತದಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಶಿಳಕೆ  ಪ್ರತಿಕೃತಿ ದಹಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕನ್ನಡ ಮತ್ತು ಕನ್ನಡಿಗರ ಬಗ್ಗೆ ನಾಡ ವಿರೋಧಿ ಶಿಳಕೆ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು.  ನಾರಾಯಣಗೌಡರನ್ನು ಟೀಕಿಸುವ ಮೊದಲು ನಾನು ಯಾರ ಬಗ್ಗೆ ಮಾತನಾಡುತ್ತಿದ್ದೇನೆ ಎಂಬುದರ ಬಗ್ಗೆ ಯೋಚನೆ ಮಾಡಿ ಮಾತನಾಡಬೇಕು. ನಾರಾಯಣ ಗೌಡರ ಕಾಲಿನ ದೂಳಿಗೂ ಸಮನಾಗದ ನಾಡ ವಿರೋಧಿ ಶಿಳಕೆ.  ದೊಡ್ಡ ನಾಯಕನಲ್ಲ ಇವನಿಗೆ ಬುದ್ದಿ ಕಲಿಸಲು ಕರವೇಯ ಮಹಿಳಾ ಕಾರ್ಯಕರ್ತರೇ  ಸಾಕು. ಮುಂದೆ ಇವನಿಗೆ ಜಿಲ್ಲೆಯಲ್ಲಿ  ಮಹಿಳಾ ಕಾರ್ಯಕರ್ತರಿಂದ ಚಪ್ಪಲಿ ಸೇವೆ ಮಾಡಲಾಗುವುದು. ಕರ್ನಾಟಕ ರಾಜ್ಯೋತ್ಸವ ಸಂಭ್ರಮದಲ್ಲಿರುವ ಬೆಳಗಾವಿಯಲ್ಲಿ ಮರಾಠಿ ಮತ್ತು ಕನ್ನಡಿಗರ ಮಧ್ಯೆ ವಿಷಬಿಜ ಬಿತ್ತುವ ಹೇಳಿಕೆ ನೀಡಿರುವ ಗೂಂಡಾ ಶಿಳಕೆ ಅವನನ್ನು ಜಿಲ್ಲಾಡಳಿತ ಈ ಕೂಡಲೇ ಗಡಿಪಾರು ಮಾಡಬೇಕು. ನಾಡ ದ್ರೋಹಿ ಎಂ.ಇ.ಎಸೆ.ಗೆ ಕರಾಳ ದಿನ ಆಚರಣೆಗೆ ಅವಕಾಶ ಕಲ್ಪಿಸಬಾರದು. ಜಿಲ್ಲಾಡಳಿತ ಇದರ ಬಗ್ಗೆ ಸ್ವಷ್ಟ ನಿಲುವು ಹೇಳಬೇಕು. ಒಂದು ವೇಳೆ ಅವಕಾಶ ಕಲ್ಪಿಸಿದರೆ ರಾಜ್ಯದ ಎಲ್ಲಾ ಕರವೇ ಕಾರ್ಯಕರ್ತರು ಬೆಳಗಾವಿಗೆ ನುಗ್ಗಿ ಎಂ.ಇ.ಎಸ್.ಗೆ ತಕ್ಕಪಾಠ  ಕಲಿಸುತ್ತೇವೆ ಎಂದು ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಜಿಲ್ಲಾಡಳಿತವನ್ನು ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಕರವೇಅಧ್ಯಕರಾದ ಬಸವರಾಜ ಖಾನಪ್ಪನವರ  ಮಲ್ಲುಸಂಪಗಾರ ಮಹಾದೇವ ಮಕ್ಕಳಗೇರೀ ಕರಪ್ಪ ಹೊರಟ್ಟಿ  ಬಸು ಗಾಡ್ಡಿವಡ್ಡರ ನಿಜಾಮ ನಧಾಪ ಜಗ್ಗದೀಶ್ ಪೋಜೇರೀ ಕೆಂಪಣ್ಣ ಕಡಕೋಳ ವಂಜ್ರಕಾತ್ ಜೋತಾವರ ಮಲ್ಲಪಾ ಅಂಬಿ  ಶಿವಾಜಿ ಪಾಟೀಲ ಗುರಪಾದ ಮದನ್ನವರ ಗೋಪಾಲ ಲಾಗವೇ ಮಲ್ಲಿಕ ಯರಗಟ್ಟಿ ಆನಂದ ಆಶಿ ಸುದೀಪ ಗಸ್ತಿ ಲಕ್ಕು ಮಾಳಗಿ ಆನಂದ ಖಾನಪ್ಪನವರ ಅನೇಕ ಕರವೇ ಕಾರ್ಯಕತರು ಹಾಗೂ ಕನ್ನದ ಅಭಿಮಾನಿಗಳು ಭಾಗವಹಿಸಿದರು.....

Publisher: ಕನ್ನಡ ನಾಡು | Kannada Naadu

Login to Give your comment
Powered by