ಕನ್ನಡ ನಾಡು | Kannada Naadu

ಸಚಿವ ಸತೀಶ್ ಜಾರಕಿಹೊಳಿ ಮಾಹಿತಿ, ಅಧಿವೇಶನ ಮುಗಿಯುತ್ತಿದ್ದಂತೆ ದೆಹಲಿಗೆ..

13 Aug, 2025

ಬೆಂಗಳೂರು:  ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಕೆ.ಎನ್ ರಾಜಣ್ಣ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

ಸಂಪುಟದಿಂದ ರಾಜಣ್ಣ ವಜಾಗೊಂಡಿರುವ ಬೆನ್ನಲ್ಲೇ ಬೆಂಗಳೂರಿನಲ್ಲಿರುವ ರಾಜಣ್ಣ ನಿವಾಸಕ್ಕೆ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿ ಮಾತುಕತೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಅಧಿವೇಶನ ಮುಗಿದ ಬಳಿಕ ದೆಹಲಿಗೆ ಹೋಗುತ್ತೇವೆ. ನಿಯೋಗದೊಂದಿಗೆ ಹೈಕಮಾಂಡ್ ನಾಯಕರನ್ನು ಭೇಟಿಯಾಗುವುದಾಗಿ ತಿಳಿಸಿದರು.

ಅಧಿಕಾರ ಹೋದಾಗ ಸಾಮಾನ್ಯವಾಗಿ ದೂರವಾಗುತ್ತೇವೆ. ಆದರೆ ನಾವು ರಾಜಣ್ಣ ಜೊತೆಗಿದ್ದೇವೆ. ದೆಹಲಿ ಮಟ್ಟದಲ್ಲಿ ಅವರ ಬಗ್ಗೆ ತಪ್ಪು ಗ್ರಹಿಕೆಯಾಗಿದೆ. ಈ ನಿಟ್ಟಿನಲ್ಲಿ ಸರಿಪಡಿಸುವ ಯತ್ನ ನಡೆಸಲಾಗುವುದು. ರಾಜಣ್ಣ ಅವರಿಗೆ ಮತ್ತೆ ಸಚಿವ ಸ್ಥಾನ ನೀಡುವುದು ಹೈಕಮಾಂಡ್ ಗೆ ಬಿಟ್ಟ ನಿರ್ಧಾರ ಎಂದರು.

ಇಬ್ಬರು ವಾಲ್ಮೀಕಿ ಸಮಾಜದವರನ್ನೇ ಸಂಪುಟದಿಂದ ಇಳಿಸಲಾಗಿದೆ. ಹಾಗಾಗಿ ಇಬ್ಬರು ವಾಲ್ಮೀಕಿ ಸಮಾಜದವರನ್ನೇ ನೇಮಕ ಮಾಡಬೇಕು. ಈ ನಿಟ್ಟಿನಲ್ಲಿ ಮನವಿ ಮಾಡಲಾಗುವುದು ಎಂದರು.

 

 

Publisher: ಕನ್ನಡ ನಾಡು | Kannada Naadu

Login to Give your comment
Powered by