ವಿಜಯನಗರ : ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ನಿವಾಸದ ಮೇಲೆ ಇಡಿ ದಾಳಿ ನಡೆಸಿರುವ ಬೆನ್ನಲ್ಲೇ ಅತ್ತ ವಿಜಯನಗರ ಜಿಲ್ಲೆಯಲ್ಲಿ ಗಣಿ ಉದ್ಯಮಿಗಳ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ವಿಜಯನಗರದಲ್ಲಿ ಏಕಕಾಲದಲ್ಲಿ ಮೂರು ಕಡೆಗಳಲ್ಲಿ ದಾಳಿ ನ್ಮಡೆಸಲಾಗಿದೆ. ಗಣಿ ಉದ್ಯಮಿಗಳ ಮನೆ, ಕಚೇರಿ ಸ್ಟೀಲ್ ಅಂಗಡಿಗಳ ಮೇಲೆ ದಾಳಿ ನಡೆಸಲಾಗಿದೆಹೊಸಪೇಟೆ ಪಟ್ಟಣದ ಗಣಿ ಉದ್ಯಮಿ ಸ್ವಸ್ತಿಕ್ ನಾಗರಾಜ್ ಹಾಗೂ ನಗರಸಭೆ ಕಾಂಗ್ರೆಸ್ ಸದಸ್ಯ ಕಾರದಪುಡಿ ಮಹೇಶ್ ಮನೆ ಮೇಲೆ ದಾಳಿ ನಡೆದಿದೆ.
ಹೊಸಪೇಟೆಯ ಎಂ.ಜೆ. ನಗರದಲ್ಲಿರುವ ಸ್ವಸ್ತಿಕ್ ನಾಗರಾಜ್ ಮನೆ, ಎಪಿಎಂಸಿ ಬಳಿ ಇರುವ ಸ್ಟೀಲ್ ಅಂಗಡಿ, ಕಚೇರಿಗಳ ಮೇಲೆ ರೇಡ್ ನಡೆಸಲಾಗಿದೆ. ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
Publisher: ಕನ್ನಡ ನಾಡು | Kannada Naadu