CreamA Cream article
Article

ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆಯ ಕುರಿತು ಪರಿಶೀಲನೆ ನಡೆಸಿದ ಸಚಿವ ಕೆ.ಹೆಚ್.ಮುನಿಯಪ್ಪ

ಕನ್ನಡ ನಾಡು

 

ಬೆಂಗಳೂರು : ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್.ಮುನಿಯಪ್ಪ ಅವರು ಇಂದು ಯಲಹಂಕ ತಾಲ್ಲೂಕಿನ ಪ್ರಮುಖ ಬಡಾವಣೆ ಹಾಗೂ ಗ್ರಾಮಗಳಿಗೆ ಭೇಟಿ ನೀಡಿ ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆಯ ಕುರಿತು ಪರಿಶೀಲನೆ ನಡೆಸಿದರು.

ನ್ಯಾಯಮೂರ್ತಿ ನಾಗಮೋಹನದಾಸ್ ರವರ ಏಕಸದಸ್ಯ ಆಯೋಗದ ನಿರ್ದೇಶನದಂತೆ ಸರ್ಕಾರವು ನಿರ್ದಿಷ್ಟ ದತ್ತಾಂಶಗಳ ಸಂಗ್ರಹಣೆಗಾಗಿ ಪರಿಶಿಷ್ಟ ಜಾತಿಯ 101 ಜಾತಿಗಳ ಮೂಲಜಾತಿಗಳನ್ನು ಮೇ 6 ರಿಂದ ಸಮೀಕ್ಷೆ ನಡೆಸುತ್ತಿದ್ದು ಜೂನ್ 30ಕ್ಕೆ ಅಂತ್ಯಗೊಳ್ಳಲಿದೆ. ಈ ಸಂಬಂಧ ಇಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು ಖುದ್ದಾಗಿ ಯಲಹಂಕ ತಾಲ್ಲೂಕಿನ ಅರಕೆರೆ ಬಡಾವಣೆ, ಸುರದೇನಪುರ, ಎಂ.ಎಸ್ ಪಾಳ್ಯ, ಬೆಟ್ಟಹಳ್ಳಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ಮೂಲ ಜಾತಿಗಳನ್ನು ನಮೂದಿಸಲು ನಾಗರಿಕರಿಗೆ ಮನವಿ ಮಾಡಿದರು.

ಎಲ್ಲಾ ಪರಿಶಿಷ್ಟ ಜಾತಿಯ 101 ಸಮುದಾಯದವರು ತಪ್ಪದೇ ಮೂಲ ಜಾತಿಯನ್ನು ನಮೂದಿಸುವ ಮೂಲಕ ಅವಕಾಶಗಳಿಂದ ವಂಚಿತರಾಗದಿರಲು ಮನವಿ ಮಾಡಿದರು.

Read More