ಕನ್ನಡ ನಾಡು | Kannada Naadu

ಶುಭಾಂಶು ಶುಕ್ಲಾ ಬಾಹ್ಯಾಕಾಶಯಾನ: ಗಗನಕ್ಕೆ ಯಶಸ್ವಿಯಾಗಿ ಚಿಮ್ಮಿದ Axiom 4 ನೌಕೆ

25 Jun, 2025

 ಬೆಂಗಳೂರು : ಭಾರತ ಬಾಹ್ಯಾಕಾಶ ಯಾನದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಭಾರತದ ಶುಭಾಂಶು ಶುಕ್ಲಾ ಅವರನ್ನೊಳಗೊಂಡ ನಾಲ್ವರನ್ನು ಹೊತ್ತ ಆಕ್ಸಿಯಮ್ 4 ರಾಕೆಟ್ ಯಶಸ್ವಿಯಾಗಿ ಉಡಾವಣೆಯಾಗಿದೆ.

ವಾಯುಸೇನೆಯ ಕ್ಯಾಪ್ಟನ್ ಭಾರತದ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರನ್ನು ಒಳಗೊಂಡ ಗಗನನೌಕೆ ಆಕ್ಸಿಯಮ್ 4 ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಇಂದು ಮಧ್ಯಾಹ್ನ 12:01ಕ್ಕೆ ಯಶಸ್ವಿಯಾಗಿ ಗಗನಕ್ಕೆ ಚಿಮ್ಮಿದೆ.

ಸ್ಪೇಸ್ ಎಕ್ಸ್ ನ ಫಾಲ್ಕನ್-9 ನೌಕೆ ಅಂತರಿಕ್ಷದ ಮೊದಲ ಕಕ್ಷೆಯನ್ನು ಯಶಸ್ವಿಯಾಗಿ ತಲುಪಿದೆ ಎಂದು ನಾಸಾ ಮಾಹಿತಿ ನೀಡಿದೆ. ಫಾಲ್ಕರ್ ನೌಕೆಯಲ್ಲಿ ಒಟ್ಟು ನಾಲ್ವರು ಗಗನಯಾನಿಗಳಿದ್ದಾರೆ. ಭಾರತೀಯ ಶುಭಾಂಶು ಶುಕ್ಲಾ, ಪೋಲೆಂಡ್ ನಸ್ಲವೋಜ್ ಉಝನಾಸ್ಕಿ, ಅಮೆರಿಕದ ಪೆಗ್ಗಿ ವಿಟ್ಸನ್, ಹಂಗೇರಿಯಾದ ಟಿಬರ್ ಅವರನ್ನೊಳಗೊಂದ ನೌಕೆ ಯಶಸ್ವಿಯಾಗಿ ಬಾಹ್ಯಾಕಾಶದತ್ತ ಚಿಮ್ಮಿದೆ.

Publisher: ಕನ್ನಡ ನಾಡು | Kannada Naadu

Login to Give your comment
Powered by