ಕನ್ನಡ ನಾಡು | Kannada Naadu

ಬೆಳಗಾವಿಯ ಪ್ರವಾಸಿಗರಿಗೆ ಸಿಹಿ ಸುದ್ದಿ ನೀಡಿದ ಗೋವಾ ಸಿಎಂ

24 Jun, 2025

ಬೆಳಗಾವಿ: ಬೆಳಗಾವಿ-ಗೋವಾ ಸೇರಿದಂತೆ ದೇಶದ ಇತರೆ ರಾಜ್ಯಗಳಿಂದ ಬರುವ ಪ್ರವಾಸಿ ವಾಹನಗಳನ್ನು ಪಿಐ ಶ್ರೇಣಿಗಿಂತ ಕಡಿಮೆ ಇರುವ ಯಾವುದೇ ಪೊಲೀಸ್ ಸಿಬ್ಬಂದಿ ಹಗಲಿನ ವೇಳೆಯಲ್ಲಿ ಚಲನ್ ನೀಡಬಾರದೆಂದು ಹಾಗೂ ಪಿಐ ಅಧಿಕಾರಿಗಳಿಗಿಂತ ಮೇಲಿನ ಅಧಿಕಾರಿಗಳು ನಿಯಮ ಉಲ್ಲಂಘಿಸುವವರಿಗೆ/ ಸುಳ್ಳು ಹೇಳುವವರಿಗೆ ಎಮ್ ವಿ ಚಲನ್ ನೀಡಬೇಕೆಂದು ಸಿಎಂ ನಿರ್ದೇಶನದ ಮೇರೆಗೆ ಗೋವಾ ಎಡಿಜಿಪಿ ಅವರು ಆದೇಶ ಹೊರಡಿಸಿದ್ದಕ್ಕೆ ಬಿಜೆಪಿ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಹಾಗೂ ಬೆಳಗಾವಿ ಉತ್ತರ ಮತಕ್ಷೇತ್ರದ ಮಾಜಿ ಶಾಸಕರಾದ ಅನಿಲ ಬೆನಕೆ ಅವರು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಅವರಿಗೆ ಹೃತ್ಪೂರ್ವಕ ಧನ್ಯವಾದ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಅನಿಲ ಬೆನಕೆ ಅವರು ಗೋವಾ ಮುಖ್ಯಮಂತ್ರಿಗಳಿಗೆ 2024 ಜೂನ್ 16 ರಂದು ಈ ಬಗ್ಗೆ ಮನವಿ ಸಲ್ಲಿಸಿದ್ದರು, ಈ ಉಪಕ್ರಮ ಬೆಳಗಾವಿಯ ಪ್ರವಾಸಿಗರ ಮೇಲೆ ಗಮನಾರ್ಹ ಪರಿಣಾಮ ಬೀರಲಿದೆ ಹಾಗೂ ಎರಡೂ ರಾಜ್ಯದ ಜನತೆಗೆ ಅನುಕೂಲವಾಗಲಿದೆ.

Publisher: ಕನ್ನಡ ನಾಡು | Kannada Naadu

Login to Give your comment
Powered by