ಬೆಂಗಳೂರು : ಬಂಜಾರಭಾಷೆ ಕನ್ನಡಭಾಷೆಯಷ್ಟೇ ಹಿಂದಿನ ಅಳಿಮೆಯನ್ನು ಹೊಂದಿದ್ದುಭಾಷೆಯಲ್ಲಿ ಸಾಹಿತ್ಯ ರಚನೆಯು ಅಗತ್ಯವಾಗಿದೆ. ಬಂಜಾರರ ಮೌಖಿಕ ಸಾಹಿತ್ಯ ಹಾಗೂ ಕಲೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವ ಅಕಾಡೆಮಿಗೆ ಬಂಜಾರ ಕಲಾವಿದರು, ಸಾಹಿತಿಗಳ ಸಹಕಾರ ಅಗತ್ಯ ಎಂದು ಬಂಜಾರ ಅಕಾಡೆಮಿ ಅಧ್ಯಕ್ಷರಾದ ಡಾ. ಎ.ಆರ್.ಗೋವಿಂದಸ್ವಾಮಿ ಹೇಳಿದರು.
ಇಂದು ʻʻಬಂಜಾರ ಅಕಾಡೆಮಿ ನಡೆ ತಾಂಡಗಳ ಕಡೆ 2025-26ʼʼ ಬಂಜಾರ ಕಲೆ, ಸಾಹಿತ್ಯ -ಸಂಸ್ಕøತಿ ಹಾಗೂ ಶಿಕ್ಷಣದ ಕುರಿತು ಜಾಗೃತಿ ಅಭಿಯಾನ ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಮರಳವಾಡಿ ಹೋಬಳಿಯ ಲೋಕನಾಯಕನ ತಾಂಡದಲ್ಲಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಂಜಾರ ಕಲಾವಿದರು, ಸಾಹಿತಿಗಳು ತಮ್ಮ ಮಾನವ ಸಂಪನ್ಮೂಲವನ್ನು ಅಕಾಡೆಮಿ ಜೊತೆಗೆ ಗುರುತಿಸಿಕೊಳ್ಳಬೇಕೆಂದು ಮನವಿ ಮಾಡಿದರು. ಇಂದು ಬಂಜಾರರ ಸಮಗ್ರ ಅಭಿವೃದ್ಧಿಗೆ ಅಕಾಡೆಮಿ ಸಾಹಿತ್ಯ, ಸಂಸ್ಕøತಿ ಸಮಾಜಿಕ ಶಿಕ್ಷಣ ಇತರೆ ಅಭಿವೃದ್ಧಿಗೆ ಅಕಾಡೆಮಿ ಸರ್ವಾಂಗೀಣವಾಗಿ ಕೆಲಸ ನಿರ್ವಹಿಸುತ್ತಿದೆ. ಹೀಗಾಗಿ ಅಕಾಡೆಮಿಯು ಒಂದು ಅತ್ಯುತ್ತಮವಾದ ಸಂಸ್ಥೆ ಇದಕ್ಕೆ ಬಂಜಾರರೆಲ್ಲರಿಗೂ ನನ್ನ ಸಂಸ್ಥೆಯೆಂದು ಪರಿಭಾವಿಸಿ ಸಹಕಾರ ನೀಡಿದರೆ ಅಕಾಡೆಮಿ ಅತ್ಯುತ್ತಮವಾಗಿ ಕೆಲಸ ಮಾಡಲು ಅನುಕೂಲವಾಗುವುದು ಎಂದರು.
ಎಲ್ಲಾ ಜಿಲ್ಲಾ ವಲಯಗಳಲ್ಲಿ ಇದೇ ರೀತಿ ನಾವು ಜಾಗೃತಿ ಕಾರ್ಯಕ್ರಮಗಳು, ಬಂಜಾರ ಸಂಸ್ಕøತಿ ಕೋಶ, ಬಂಜಾರರ ಪ್ರಮುಖರ ಸಾಮಾಜಿಕ ಸ್ವಾತಂತ್ರ್ಯ ಹೋರಾಟ ಚಿಂತಕರ 70ಕ್ಕೂ ಹೆಚ್ಚು ಕೃತಿಗಳನ್ನು ಈ ವರ್ಷ ರಚನೆ ಮಾಡಬಹುದಾಗಿದೆ, ಸಾಕ್ಷ್ಯಚಿತ್ರ, ತರಬೇತಿ, ಸಮೇತನ ಮಾಡಬಹುದಾಗಿದೆ. ಅಂತರಾಷ್ಟ್ರೀಯ ಮಟ್ಟದ ಒಂದು ಸಮ್ಮೇಳನಕ್ಕೆ ವಿದೇಶಿ ಬಂಜಾರರಿಂದ ಮೌಖಿಕವಾಗಿ ಒಂದು ಬೇಡಿಕೆ ಬಂದಿದ್ದು, ಸರ್ಕಾರದೊಂದಿಗೆ ಚರ್ಚಿಸಿ ಅಂತರಾಷ್ಟ್ರೀಯ ಬಂಜಾರ ಸಾಹಿತ್ಯ, ಸಂಸ್ಕøತಿ, ಕಲಾ ಮಹಾ ಸಮ್ಮೇಳನವನ್ನು ನಡೆಸುವ ಅಲೋಚನೆ ಇರುವುದಾಗಿ ಪ್ರಕಟಿಸಿದೆ.
ನಮಗೆ ಈ ವರ್ಷದ ಹೆಚ್ಚಿನ ಬಜೆಟ್‌ಗಿಂತ ಇತರ ಅಕಾಡೆಮಿಗಳಿಗೆ ಕೊಟ್ಟಿರುವ ಹಾಗೆ ನಮಗೂ ಕನಿಷ್ಠ 5 ಕೋಟಿ ಹೆಚ್ಚಿನ ಬಜೆಟ್‌ಗಳು ಪ್ರಾರಂಭದಲ್ಲಿ ಕೊಟ್ಟರೆ ಅಕಾಡೆಮಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಕೆಲಸ ಮಾಡಲು ಸಾಧ್ಯ. ಹೀಗಾಗಲೆ ಸರ್ಕಾರ ನಮಗೆ ಉತ್ತಮ ರೀತಿಯಲ್ಲಿ ಸಹಕಾರ ಕೊಡುತ್ತಿರುವುದಕ್ಕೆ ಧನ್ಯವಾದ ಎಂದು ಹೇಳಿದರು. ಹೀಗಾಗಲೆ ಎಲ್ಲಾ ಕಡೆ ಸಾಹಿತ್ಯ ಸಮ್ಮೇಳನ, ತರಬೇತಿ ಶಿಬಿರಗಳು ಕಾರ್ಯಾಗಾರಗಳನ್ನು ಯಶಸ್ವಿಯಾಗಿ ನಡೆಸಲಾಯಿತು ಎಂದು ಕಾರ್ಯಕ್ರಮವನ್ನು ನಡೆಸಲಾಯಿತು.
ಪ್ರೊ. ಶಿವಣ್ಣ ನಾಯಕ್ ಅವರು ಮಾತನಾಡಿ, ಅಕಾಡೆಮಿ ನಮ್ಮಂತಹ ಕುಕ್ಕುಗ್ರಾಮದಲ್ಲೂ ಈ ರೀತಿಯ ಒಂದು ಮಹೋನ್ನತವಾದಂತಹ ನಮ್ಮ ಹಳ್ಳಿ ಗಾಡಿನ ಜನರು ಸಾಹಿತ್ಯ, ಸಾಂಸ್ಕøತಿಕ ಪ್ರಬುದ್ಧತೆ ಬೆಳೆಸಲು ಜಾಗೃತಿ ಅರಿವು, ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಹೆಮ್ಮೆಯ ಕೆಲಸವಾಗಿದೆ ಎಂದ.
ಸಮಾರಂಭದಲ್ಲಿ ಡಾ.ಎಂ.ನಾಗರಾಜ ನಾಯ್ಕ, ಡಾ.ಶಿವಣ್ಣ ನಾಯ್ಕ, ಶ್ರೀಮತಿ ಅನಸೂಯಮ್ಮ ಎಂ, ರಮೇಶ್ ನಾಯ್ಕ, ಶ್ಯಾಮರಾಜ್ ನಾಯ್ಕ ಸ್ವಾಮೀಜಿ, ಮರಿಯಪ್ಪ ನಾಯ್ಕ, ಗಿರಿಶ್ ನಾಯ್ಕ್.
Publisher: ಕನ್ನಡ ನಾಡು | Kannada Naadu