ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಪಕೈಸ್ತಾನ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ 26 ಅಮಾಕರ ಪ್ರವಾಸಿಗರು ಬಲಿಯಾದ ಘಟನೆಗೆ ಭಾರತೀಯ ಸೇನೆ ಪ್ರತಿಕಾರ ತೀರಿಸಿಕೊಂಡಿದೆ. ಉಗ್ರರ ವಿರುದ್ಧ ಆಪರೇಷನ್ ಸಿಂಧೂರ ಕಾರ್ಯಾಚರಣೆ ಮೂಲಕ ತಕ್ಕ ಪ್ರತ್ಯುತ್ತರ ನೀಡಿದೆ.
ಭಾರತೀಯ ಮೂರು ಸೇನಾ ಪಡೆಗಳು ಸೇರಿ ಪಾಕಿಸ್ತಾನದಲ್ಲಿ ಉಗ್ರರ ನೆಲೆಗಳ ಮೇಲೆ ಏರ್ ಸ್ಟ್ರೈಕ್ ಮೂಲಕ ಉಗ್ರರ ಕ್ಯಾಂಪ್, ನೆಲೆಗಳನ್ನು ಧ್ವಂಸಗೊಳಿಸಿವೆ. 100ಕ್ಕೂ ಹೆಚ್ಚು ಉಗ್ರರು ಬಲಿಯಾಗಿದ್ದಾರೆ.
ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಬಗ್ಗೆ ಕರ್ನಲ್ ಸೋಫಿಯಾ ಖುರೇಶಿ ಹಾಗೂ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಮೂರು ಸೇನಾಪಡೆಗಳು ಸೇರಿ ನಡೆಸಿದ ವೈಮಾನಿಕ ದಾಳಿ ಆಪರೇಷನ್ ಸಿಂಧೂರ. ಭಾರತೀಯ ಹೆಣ್ಣುಮಕ್ಕಳ ಸಿಂಧೂರ ಅಳಿಸಿದ್ದ ಉಗ್ರರಿಗೆ ಅವರ ನೆಲದಲ್ಲೇ ತಕ್ಕ ಶಾಸ್ತಿ ಮಾಡಿದ್ದೇವೆ. ತಕ್ಕ ಪ್ರತ್ಯುತ್ತರ ನೀಡಿದ್ದೇವೆ ಎಂದರು.
ಇಂದು ಬೆಳಗಿನ ಜಾವ 1:೦5ರಿಂದ 1:30ರ ಅವಧಿಯಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚಾರಣೆ ನಡೆದಿದ್ದು, 9 ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ. ಕಾರ್ಯಾಚರಣೆಯಲ್ಲಿ ಒಟ್ತು 21 ಉಗ್ರರ ಕ್ಯಾಂಪ್ ಗಳನ್ನು ದ್ವಂಸ ಮಾಡಲಾಗಿದೆ ಎಂದು ವಿವರಿಸಿದರು.
ನಾವು ಯಾವುದೇ ಪಾಕ್ ನಾಗರಿಕರನ್ನಾಗಲಿ ಅಥವಾ ಮಿಲಿಟರಿ ಪಡೆಗಳನ್ನು ಗುರಿಯಾಗಿಸಿ ದಾಳಿ ನಡೆಸಿಲ್ಲ. ಕೇವಲ ಉಗ್ರರ ನೆಲೆಗಳನ್ನು ಮಾತ್ರ ಗುರಿಯಾಗಿಸಿ ಕಾರ್ಯಾಚರಣೆ ನಡೆಸಿದ್ದೇವೆ. ಕಾರ್ಯಾಚರಣೆಯಲ್ಲಿ ಮರ್ಕಜ್ ಸುಭಾನ್ ಅಲ್ಲ, ತೆಹ್ರಾ ಕಲಾನ್ ನಲ್ಲಿರುವ ಸರ್ಜಲ್, ಕೋಟ್ಲಿ, ಮರ್ಕಸ್ ಅಬ್ಬಾಸ್, ಮುಜಾಫರಾಬಾದ್ ನ ಸೈಯದ್ನಾ ಬಿಲಾಲ್, ಬರ್ನಾಲ್ ನಲ್ಲಿರುವ ಅಹ್ಲೆ ಹದೀಸ್, ಮುಜಾಫರಾಬಾದ್ ನ ಶ್ವಾವೈ ಶಿಬಿರಗಳನ್ನು ನೆಲಸಮಮಾಡಲಾಗಿದೆ ಎದು ಹೇಳಿದರು.
Publisher: ಕನ್ನಡ ನಾಡು | Kannada Naadu