ಬೆಂಗಳೂರು, :
ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದಲ್ಲಿ ಮುಖ್ಯ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿರುವ ಯಶೋದಮ್ಮ ಜಿ. ಅವರು “ಯೂಸ್ ಆಫ್ ಐಸಿಟಿ ಟೂಲ್ಸ್ ಅಂಡ್ ಯುಟಿಲೈಜೆóೀಶನ್ ಆಫ್ ಇನ್ ಫರ್ಮೇಶನ್ ರಿಸೋರ್ಸ್‍ಸ್ ಅಂಡ್ ಸರ್ವೀಸಸ್ ಬೈ ದಿ ಯೂಸರ್ಸ್ ಆಫ್ ಸಿಟಿ ಸೆಂಟ್ರಲ್ ಲೈಬ್ರರೀಸ್ ಆಫ್ ಕರ್ನಾಟಕ” ಎಂಬ ವಿಷಯದ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಪಿಹೆಚ್‍ಡಿ ಪದವಿ ನೀಡಿ ಗೌರವಿಸಿದೆ.
ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಡಾ. ಬಿ. ಯು. ಕನ್ನಪ್ಪನವರ್ ಅವರ ಮಾರ್ಗದರ್ಶನದಲ್ಲಿ ಇವರು ಸಂಶೋಧನೆ ನಡೆಸಿ ಮಹಾಪ್ರಬಂಧವನ್ನು ಇಂಗ್ಲೀಷ್ ಭಾಷೆಯಲ್ಲಿ ಸಿದ್ದಪಡಿಸಿದ್ದಾರೆ ಎಂದು ವಿಶ್ವವಿದ್ಯಾಲಯದ ಕುಲಸಚಿವ (ಪರೀಕ್ಷಾಂಗ) ಪ್ರೊ. ಗೋಪಿನಾಥ್ ಎಸ್.ಎಂ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Publisher: ಕನ್ನಡ ನಾಡು | Kannada Naadu