ಬೆಂಗಳೂರು : ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಫಾರಿ, ಜೂ ಮತ್ತು ಚಿಟ್ಟೆ ಉದ್ಯಾನವನಕ್ಕೆ ಟಿಕೇಟ್ ಬುಕಿಂಗ್ ಸೇವೆಗಳನ್ನು ನೀಡುವುದಾಗಿ ಅನಧಿಕೃತ ವೆಬ್‍ಸೈಟ್ ತಯಾರಿಸಿರುವುದು ಕಂಡುಬಂದಿರುತ್ತದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕೃತ ವೆಬ್‍ಸೈಟ್ www.bannerughattabiopark.org ಇದಾಗಿದ್ದು, ಈ ವೆಬ್‍ಸೈಟ್ ಮೂಲಕವೇ ಸಾರ್ವಜನಿಕರು ಆನ್‍ಲೈನ್ ಟಿಕೇಟ್ ಕಾಯ್ದಿರಿಸಲು ಕಾಯ್ದಿರಿಸಿಕೊಳ್ಳುವುದು.
ಅನಧಿಕೃತ ಅಥವಾ ನಕಲಿ ವೆಬ್‍ಸೈಟ್‍ಗಳ ಮೂಲಕ ಟಿಕೇಟ್ ಬುಕಿಂಗ್ ಮಾಡುವುದರಿಂದ ಹಣಕಾಸಿನ ನಷ್ಟ, ವೈಯಕ್ತಿಕ ಡೇಟಾ ಕಳ್ಳತನ ಹಾಗೂ ಇನ್ನಿತರೆ ಸಮಸ್ಯೆಗಳು ಉಂಟಾಗಬಹುದು. ಈ ಸಮಸ್ಯೆಯನ್ನು ಪರಿಹರಿಸಲು ಮತ್ತು ಅನಧಿಕೃತ ವೆಬ್‍ಸೈಟ್‍ನ ನಿರ್ವಾಹಕರ ವಿರುದ್ದ ಅಗತ್ಯ ಕಾನೂನು ಕ್ರಮ ಕೈಗೊಳ್ಳಲು ಉದ್ಯಾನವನದ ಆಡಳಿತ ಮಂಡಳಿಯು ಅಧಿಕಾರಿಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಜಾಗರೂಕರಾಗಿರಲು ತಿಳಿಸಲಾಗಿದೆ. ಯಾವುದೇ ಪಾವತಿಗಳನ್ನು ಮಾಡುವ ಮೊದಲು ಯಾವಾಗಲೂ URL ಅನ್ನು ಎರಡು ಬಾರಿ ಪರಿಶೀಲಿಸಿ. ಯಾವುದೇ ಅನುಮಾನಾಸ್ಪದ ವೆಬ್‍ಸೈಟ್‍ಗಳು ಅಥವಾ ಬುಕಿಂಗ್ ಲಿಂಕ್‍ಗಳು ಕಂಡುಬಂದಲ್ಲಿ ತಕ್ಷಣವೇ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳಿಗೆ ವರದಿ ಮಾಡುವಂತೆ ಬನ್ನೆರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Publisher: ಕನ್ನಡ ನಾಡು | Kannada Naadu